ಕೇರಳ ಚುನಾವಣೋತ್ತರ ಗಲಭೆಗೆ ಯುವಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಕಣ್ಣೂರು, ಏ.7- ಕೇರಳದಲ್ಲಿ ಚುನಾವಣೆ ನಂತರ ನಡೆದ ಗಲಭೆಯಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ. ಕೂತುಪರಾಂಬ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ(ಎಂ) ಮತ್ತು ಐಯುಎಂಎಲ್ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಯುವಕ ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ಪರಾಲ್ ಪ್ರದೇಶದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಬೋಗಸ್ ಓಟಿಂಗ್ ಕುರಿತಂತೆ ಜಗಳ ಆರಂಭವಾಯಿತು.

ಜಗಳ ವಿಕೋಪಕ್ಕೆ ಹೋಗಿ ಐಯುಎಂಎಲ್ ಪಕ್ಷದ ಕಾರ್ಯಕರ್ತ ಮನ್ಸೂರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ತೀವ್ರವಾಗಿ ಗಾಯಗೊಂಡಿದ್ದ ಮನ್ಸೂರ್‍ನನ್ನು ಕೋಳಿಕೋಡ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಿತ್ರಪಕ್ಷವಾಗಿರುವ ಲೀಗ್ ಪಕ್ಷದ ಮನ್ಸೂರ್ ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದು, ಆತನ ಸಹೋದರ ತೀವ್ರವಾಗಿ ಗಾಯಗೊಂಡಿದ್ದಾನೆ. ತಮ್ಮ ಪಕ್ಷದ ಇಬ್ಬರು ಕಾರ್ಯಕರ್ತರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಸಿಪಿಐ ಕಾರ್ಯಕರ್ತರು , ನಂತರ ಅವರ ಮೇಲೆ ಬಾಂಬ್ ದಾಳಿ ಮಾಡಿದ್ದಾರೆ ಎಂದು ಐಯುಎಂಎಲ್ ಆರೋಪಿಸಿದೆ.

Facebook Comments