ಬ್ರೇಕಿಂಗ್ : ಆಂಧ್ರ ಮಾಜಿ ಸಿಎಂ ವೈಎಸ್‍ಆರ್ ಸಹೋದರ ನಿಗೂಢ ಸಾವು…!

ಈ ಸುದ್ದಿಯನ್ನು ಶೇರ್ ಮಾಡಿ

ಅಮರಾವತಿ(ಆಂಧ್ರಪ್ರದೇಶ),ಮಾ.15-ವೈಎಸ್‍ಆರ್ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಕಿರಿಯ ಸಹೋದರ ವೈ.ಎಸ್.ವಿವೇಕಾನಂದ ರೆಡ್ಡಿ (68) ನಿಗೂಢವಾಗಿ ಮೃತಪಟ್ಟಿದ್ದಾರೆ.

ಕಡಪ ಜಿಲ್ಲೆಯ ಅವರ ನಿವಾಸದಲ್ಲಿ ವಿವೇಕಾನಂದ ರೆಡ್ಡಿ ಅವರ ಶವ ಪತ್ತೆಯಾಗಿದ್ದು, ಮನೆಯ ಶಯನ ಕೊಠಡಿ ಮತ್ತು ಶೌಚಾಲಯದಲ್ಲಿ ರಕ್ತದ ಕಲೆಗಳಿರುವ ಬಟ್ಟೆಗಳು ಪತ್ತೆಯಾಗಿದ್ದು, ಹಲವಾರು ಅನುಮಾಗಳಿಗೆ ಎಡೆ ಮಾಡಿಕೊಟ್ಟಿದೆ.

ರೆಡ್ಡಿ ಅವರ ಸಾವು ಸ್ವಾಭವಿಕವಲ್ಲ. ಅದು ಅಸಹಜ ಸಾವು ಎಂದು ಕುಟುಂಬ ವರ್ಗದವರು ಅನುಮಾನ ವ್ಯಕ್ತಪಡಿಸಿದ್ದಾರೆ.  ರೆಡ್ಡಿ ಅವರ ಆಪ್ತ ಕಾರ್ಯದರ್ಶಿ ಎಂ.ವಿ.ಕೃಷ್ಣಾರೆಡ್ಡಿ ಈ ಸಂಬಂಧ ಪುಲಿವೆಂದುಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಡ್‍ರೂಂ ಮತ್ತು ಬಾತರೂಮ್‍ನಲ್ಲಿ ರೆಡ್ಡಿ ಅವರ ರಕ್ತಸಿಕ್ತ ಬಟ್ಟೆಗಳು ಕಂಡುಬಂದಿವೆ.ಇದರಿಂದ ಅವರ ಸಾವು ಸಹಜವಲ್ಲ ಎಂಬ ಅನುಮಾನ ಉಂಟಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಟುಂಬದವರ ಪರವಾಗಿ ಕೃಷ್ಣಾರೆಡ್ಡಿ ದೂರಿನಲ್ಲಿ ಮನವಿ ಮಾಡಿದ್ದಾರೆ.

Facebook Comments

Sri Raghav

Admin