ಯುವಿ ವಿರುದ್ಧ ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.5- ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್‍ಸಿಂಗ್ ವಿರುದ್ಧ ಹರಿಯಾಣದ ಹನ್ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇತ್ತೀಚೆಗೆ ಯುವರಾಜ್‍ಸಿಂಗ್ ತಮ್ಮ ಇನ್ಸ್ ಟಾಗ್ರಾಂನಲ್ಲಿ ಕ್ರಿಕೆಟಿಗರಾದ ರೋಹಿತ್‍ಶರ್ಮಾ ಹಾಗೂ ಯಜುವೇಂದ್ರ ಚಹಲ್ ವಿರುದ್ಧ ನೀಡಿರುವ ಹೇಳಿಕೆಯಲ್ಲಿ ಜಾತಿ ನಿಂದನೆ ಮಾಡಲಾಗಿದೆ ಎಂದು ದಲಿತ ಹಕ್ಕು ಸೇನೆಯ ಮುಖಂಡ ರಜತ್, ಕಲ್ಸನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವಿ ಅವರ ಹೇಳಿಕೆಗಳಿಂದ ದಲಿತ ಸಮುದಾಯದ ಜನರ ಭಾವನೆಯನ್ನು ಕೆರಳಿಸುವಂತಿದೆ ಎಂದು ಹೇಳುವ ಮೂಲಕ ಯುವಿ ನೀಡಿದ ಹೇಳಿಕೆಯ ವೀಡಿಯೊಂದಿಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಡಿಜಿಪಿಗೆ ತಿಳಿಸಿದ್ದು ಯುವಿ ತಪ್ಪು ಮಾಡಿರುವುದು ಗೊತ್ತಾದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹನ್ಸಿ ಎಸ್ಪಿ ಲೋಕೇಂದ್ರಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments