ಕ್ರಿಕೆಟ್ ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ. ವ 27- ವಿಶ್ವಕಪ್‍ನಲ್ಲಿ ಆಡಬೇಕೆಂಬ ಭಾರೀ ಕನಸನ್ನು ಹೊತಿತಿದ್ದ ನನಗೆ ನಿರಾಸೆಯಾದ ಬೆನ್ನಲ್ಲೇ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದೆ ಎಂದು ಸಿಕ್ಸರ್‍ಗಳ ಸರದಾರ ಯುವರಾಜ್‍ಸಿಂಗ್ ಸುದ್ದಿಗಾರರಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಇಂಗ್ಲೆಂಡ್‍ನ ನಡೆದ ವಿಶ್ವಕಪ್‍ನ ಭಾರತ ತಂಡದ ಆಯ್ಕೆಗೂ ಮುನ್ನವೇ ನಾನು ಯೋ-ಯೋ ಟೆಸ್ಟ್ ನ ಸವಾಲನ್ನು ಸ್ವೀಕರಿಸಿದೆ ಅದರಲ್ಲಿ ನಾನು ನನ್ನ ಶಕಿತಿಯನ್ನು ಒಗ್ಗೂಡಿಸಿ ಗೆದ್ದಿದ್ದೇ ಕೂಡ ಆದರೆ ಆಯ್ಕೆ ಮಂಡಳಿಯವರು ನನ್ನನ್ನು ಆಯ್ಕೆ ಮಾಡದೆ ಕಡೆಗಾಣಿಸಿದ್ದರು ಎಂದು ಯುವಿ ಬೇಸರ ಹೊರಹಾಕಿದರು.

ಭಾರತ 2007ರಲ್ಲಿ ಚೊಚ್ಚಲ ಚುಟುಕು ವಿಶ್ವಕಪ್‍ನಲ್ಲಿ ಚಾಂಪಿಯನ್ ಆದಾಗ ಹಾಗೂ 2011ರಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಗೆದ್ದಾಗ ನಾನು ಸರಣಿ ಶ್ರೇಷ್ಠನಾಗಿ ಹೊರಹೊಮ್ಮಿದ್ದೆನಾದರೂ ಕೆಲವು ಪಂದ್ಯಗಳಿಂದ ವೈಫಲ್ಯ ಅನುಭವಿಸಿದ್ದರಿಂದ ನನ್ನನ್ನು 2017 ರಲ್ಲಿ ವೆಸ್ಟ್‍ಇಂಡೀಸ್ ನಡೆದ ಸರಣಿಯ ತಂಡದ ಹೊರಗಿಡುತತಿಲೇ ಬಂದರು ಎಂದು ಹೇಳಿದರು. 2017ರ ಚಾಂಪಿಯನ್ಸ್ ಟ್ರೋಫಿಯ ನಂತರ ನಾನು ಆಡಿದ 9 ಪಂದ್ಯಗಳಲ್ಲಿ 2 ಬಾರಿ ಪಂದ್ಯ ಶ್ರೇಷ್ಠನಾಗಿ ನನ್ನ ಸಾಮಥ್ರ್ಯವನ್ನು ತೋರಿಸಿದರೂ ತಂಡದಿಂದ ಹೊರಗಿಟ್ಟರು.

ಈ ನಡುವೆ ಗಾಯದ ಸಮಸ್ಯೆ ಎದುರಿಸಿದ ನಾನು ಶ್ರೀಲಂಕಾ ವಿರುದ್ಧ ಆಡುವ ಅವಕಾಶ ಪಡೆಯುತೆತೀನೆ ಎಂದುಕೊಂಡಿದ್ದೇನೆ, ಇದಕ್ಕಾಗಿ ಬಿಸಿಸಿಐ ಕಡ್ಡಾಯ ಗೊಳಿಸಿದ್ದ ಯೋ- ಯೋ ಟೆಸ್ಟ್ ಗೂ ಒಳಗಾದೆ, ಅದರಲ್ಲಿ ಯಶಸ್ವಿ ಕೂಡ ಆದೆ. ಅದನ್ನು ಪೂರ್ಣಗೊಳಿಸಿದ ನಂತರ ನನ್ನನ್ನು ದೇಶಿ ಕ್ರಿಕೆಟ್ ಆಡುವಂತೆ ಸೂಚಿಸಿ ರಾಷ್ಟ್ರೀಯ ತಂಡದಿಂದ ಹೊರಗಿಟ್ಟರು ಎಂದು ಯುವಿ ತಮ್ಮ ನೋವನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡರು.

17 ವರ್ಷಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಭಾರತ ಗೆಲುವಿಗೆ ಶ್ರಮಿಸಿದ್ದ ನನಗೆ ವಿಶ್ವಕಪ್‍ನಲ್ಲಿ ಸ್ಥಾನ ಏಕೆ ನೀಡುತಿತಿಲ್ಲ ಎಂಬ ಸಾಬೂಬು ನೀಡಲು ಕೂಡ ಬಿಸಿಸಿಐ ಸೌಜನ್ಯ ತೋರಿಸಿಲ್ಲ, ಇಂತಹ ಅವಮಾನವನ್ನು ಸಾಕಷ್ಟು ಕ್ರಿಕೆಟಿಗರು ಅನುಭವಿಸಿದ್ದಾರೆ ಎಂದು ಬೇಸರ ವ್ಯಕತಿಪಡಿಸಿದರು. ಯುವರಾಜ್ ಭಾರತ ತಂಡದ ಪರ 304 ಏಕದಿನ, 40 ಟೆಸ್ಟ್ ಹಾಗು 58 ಟಿ20 ಪಂದ್ಯಗಳನ್ನು ಆಡಿ ಕ್ರಮವಾಗಿ 8,701 , 1900 ಹಾಗೂ 1,177 ರನ್ ಗಳಿಸಿದ್ದಾರೆ.

Facebook Comments