‘ತಪ್ಪಾಯ್ತು ಕ್ಷಮಿಸಿಬಿಡಿ’ : ಭಾರತೀಯರಲ್ಲಿ ಕ್ಷಮೆ ಯಾಚಿಸಿದ ಝಾಕಿರ್ ನಾಯಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಕೌಲಾಲಂಪೂರ್, ಆ.20-ಮಲೇಷ್ಯಾದಲ್ಲಿ ಭಾರತೀಯರು ಮತ್ತು ಚೀನಿಯರ ಬಗ್ಗೆ ದ್ವೇಷ ಭಾಷಣ ಮಾಡಿ ಅಲ್ಲಿನ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯಕ್ ಕ್ಷಮೆ ಯಾಚಿಸಿದ್ದಾರೆ.

ಭಾರತದಿಂದ ಪಲಾಯನ ಮಾಡಿ ಮಲೇಷ್ಯಾದಲ್ಲಿ ನೆಲೆಸಿ ಅಲ್ಲಿನ ಪೌರತ್ವ ಪಡೆದಿರುವ ಝಾಕಿರ್ ಇತ್ತೀಚೆಗೆ ಮಾಡಿದ್ದ ದ್ವೇಷಾಸೂಯೆಯ ಭಾಷಣ ಭಾರತ, ಚೀನಾ ಮತ್ತು ಮಲೇಷ್ಯವನ್ನು ಕರೆಳಿಸಿತ್ತು.

ಮಲೇಷ್ಯಾದಲ್ಲಿ ಭಾರತೀಯರು ಮತ್ತು ಚೀನಿಯರು ಅಕ ಸಂಖ್ಯೆಯಲ್ಲಿದ್ದು. ಅವರಿಗೆ ಅನಗತ್ಯವಾಗಿ ಪೌರತ್ವ ನೀಡಲಾಗಿದೆ ಎಂದು ಝಾಕಿರ್ ನೀಡಿದ್ದ ಹೇಳಿಕೆ ಈ ಮೂರೂ ರಾಷ್ಟ್ರಗಳನ್ನು ಕೆರಳಿಸಿತ್ತು.

ಈ ಭಾಷಣದ ಬೆನ್ನಲ್ಲೇ ಮಲೇಷ್ಯಾ ಸರ್ಕಾರ ಝಾಕಿರ್‍ಗೆ ದ್ವೇಷಾಸೂಯೆಯ ಭಾಷಣ ಮಾಡದಂತೆ ಮತ್ತು ವಿವಾದಿತ ಹೇಳಿಕೆಗಳನ್ನು ನೀಡದಂತೆ ವಾಗ್ದಂಡನೆ ವಿಸಿ ತಾಕೀತು ಮಾಡಿತ್ತು.  ಇದರ ಬೆನ್ನಲ್ಲೇ ಝಾಕೀರ್ ತನ್ನ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಇದೇ ವೇಳೆ ತಾವು ಭಾರತಕ್ಕೆ ಹಿಂದಿರುಗುವಿದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಧರ್ಮ ಪ್ರಚಾರ ಮಾಡುತ್ತಾ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಝಾಕೀರ್ ವಿರುದ್ಧ ರಾಷ್ಟ್ರೀಯ ಭದ್ರತಾ ಸಂಸ್ಥೆ ಕಠಿಣ ಕ್ರಮ ಕೈಗೊಂಡು ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

Facebook Comments