ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಜಾಕೀರ್ ಪತ್ತೆಗಾಗಿ ಪೊಲೀಸರ ತೀವ್ರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.1- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದ ಮತ್ತೊಬ್ಬ ಆರೋಪಿ ಬಿಬಿಎಂಪಿಯ ಮಾಜಿ ಸದಸ್ಯ ಜಾಕೀರ್ ಎಲ್ಲಿದ್ದಾರೆ ಎಂಬುದು ಈ ತನಕ ಗೊತ್ತಾಗಿಲ್ಲ. ಜಾಕೀರ್‍ಗಾಗಿ ಸಿಸಿಬಿ ಪೊಲೀಸರ ತಂಡಗಳು ಕಳೆದ ಎರಡು ತಿಂಗಳಿಂದ ಸತತವಾಗಿ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ತಲೆ ತಪ್ಪಿಸಿಕೊಂಡಿರುವ ಜಾಕೀರ್ ಮೊಬೈಲ್‍ಯನ್ನು ಉಪಯೋಗಿಸುತ್ತಿಲ್ಲ. ಮತ್ತು ಹಣ ವರ್ಗಾವಣೆ ಮಾಡದೇ ಇರುವುದು ಸಿಸಿಬಿ ಪೊಲೀಸರಿಗೆ ಬಹಳ ತಲೆ ನೋವಾಗಿದೆ.

ಈ ನಡುವೆ ಸಿಸಿಬಿ ಪೊಲೀಸರು ಅವರ ಕುಟುಂಬದವರನ್ನು ಕರೆಸಿ ವಿಚಾರಣೆ ನಡೆಸಿದರೂ ಸಹ ಜಾಕೀರ್ ಎಲ್ಲಿದ್ದಾರೆಂಬುದು ಈ ತನಕ ಗೊತ್ತಾಗಿಲ್ಲ.ಮೊದಲು ನೋಟಿಸ್ ನೀಡಿ ವಿಚಾರಣೆಗೆ ಸಿಸಿಬಿ ಪೊಲೀಸರು ಕರೆಸಿಕೊಂಡು ವಿಚಾರಣೆ ನಡೆಸಿ ಮೊಬೈಲ್‍ಯನ್ನು ವಶಪಡಿಸಿಕೊಂಡಿದ್ದರು.

ನಂತರ ಪೊಲೀಸರು ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಎರಡನೇ ಸಲ ವಿಚಾರಣೆ ಹಾಜರಾಗಬೇಕೆಂದು ನೋಟಿಸ್ ನೀಡಿದಾಗ ವಿಚಾರಣೆಗೆ ಹಾಜರಾಗದೆ ಜಾಕೀರ್ ತಲೆತಪ್ಪಿಸಿಕೊಂಡಿದ್ದಾರೆ. ಅವರ ಸ್ನೇಹಿತರಾದ ಮಾಜಿ ಮೇಯರ್ ಸಂಪತ್‍ರಾಜ್ ಈಗ ಜೈಲಿನಲ್ಲಿದ್ದಾರೆ.

Facebook Comments