Wednesday, April 24, 2024
Homeರಾಜ್ಯಸಚಿವ ಜಮೀರ್ ಗೈರು, ಮೇಲ್ಮನೆಯಲ್ಲಿ ಕಾವೇರಿದ ಚರ್ಚೆ

ಸಚಿವ ಜಮೀರ್ ಗೈರು, ಮೇಲ್ಮನೆಯಲ್ಲಿ ಕಾವೇರಿದ ಚರ್ಚೆ

ಬೆಳಗಾವಿ,ಡಿ.6- ವಸತಿ ಮತ್ತು ವಕ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಗೈರು ಹಾಜರಾದ ವಿಷಯ ವಿಧಾನಪರಿಷತ್ನಲ್ಲಿ ಪ್ರಸ್ತಾಪವಾಗಿ ಕಾವೇರಿದ ಚರ್ಚೆಗೆ ಎಡೆಮಾಡಿಕೊಟ್ಟಿದಲ್ಲದೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಪ್ರಶ್ನೋತ್ತರ ಅವಯಲ್ಲಿ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬರ್ ಅವರು, ವಕ್ಪ್ ಆಸ್ತಿಗಳನ್ನು ಅನಕೃತವಾಗಿ ಒತ್ತುವರಿ ಮಾಡುತ್ತಿರುವ ಬಗ್ಗೆ ಸಚಿವ ಜಮೀರ್ ಅಹ್ಮದ್ ಅವರಿಗೆ ಪ್ರಶ್ನೆ ಕೇಳಿದ್ದರು.

ಈ ವೇಳೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಜಮೀರ್ ಪರವಾಗಿ ಉತ್ತರಿಸಿದರು.ಪ್ರಶ್ನೆ ಮುಗಿಯುತ್ತಿದ್ದಂತೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು, ಸಚಿವರಿಗೆ ಸದನಕ್ಕೆ ಬಂದು ಮುಖ ತೋರಿಸಲು ಹೇಳಿ ಎಂದು ಸಭಾನಾಯಕ ಬೋಸ್ ರಾಜ್ಗೆ ಸಲಹೆ ಮಾಡಿದರು.ಸಭಾಪತಿಗಳು ಈ ಮಾತು ಹೇಳುತ್ತಿದ್ದಂತೆ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರು ಪ್ರಶ್ನಿಸಲಾರಂಭಿಸಿದರು.

ಸಚಿವರು ಸದನಕ್ಕೆ ಏಕೆ ಬಂದಿಲ್ಲ? ಅವರು ಬರಲು ಸಮಸ್ಯೆ ಏನು? ಅವರು ಅನುಮತಿ ಕೇಳಿದ್ದರೇ ಅಥವಾ ಪತ್ರವನ್ನು ಕೊಟ್ಟಿದ್ದಾರೆಯೇ ಎಂದು ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಪ್ರಶ್ನೆ ಮಾಡಿದರು. ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ ಅವರಿಗೆ ಗೌರವವಿಲ್ಲ. ಸ್ಪೀಕರ್ ಸ್ಥಾನದ ಮೇಲೆ ಜಮೀರ್ ಅವರಿಗೆ ವಿಶ್ವಾಸ ಇಲ್ಲ. ಸ್ಪೀಕರ್ ಸ್ಥಾನಕ್ಕೆ ಧರ್ಮದ ಲೇಪನ ಮಾಡಿ ಮಾತನಾಡಿದ್ದಾರೆ. ಸ್ಪೀಕರ್ ಹಾಗೂ ಸಭಾಪತಿ ಸ್ಥಾನಕ್ಕೆ ಗೌರವ ಇಲ್ಲವೆಂದು ಅವರು ಬಂದಿಲ್ಲವೇ? ಸ್ಪೀಕರ್ ಸ್ಥಾನಕ್ಕೆ ಗೌರವ ನೀಡದೇ ಅಪಮಾನ ಮಾಡಿದರೆ ಅದಕ್ಕಿಂತ ದೊಡ್ಡ ದುರಂತ ಇಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದ ಮದರಸಾಗಳಲ್ಲಿ ಕನ್ನಡ, ಗಣಿತ, ವಿಜ್ಞಾನ ಬೋಧನೆ ಕಡ್ಡಾಯ

ಸಭಾನಾಯಕ ಬೋಸ್ರಾಜ್ ಅವರು ವೈಯಕ್ತಿಕ ಕೆಲಸಕ್ಕೆ ಹೋಗಿದ್ದಾರೆ ಎಂದಾಗ, ಸಭಾಪತಿಯವರು, ಹಾಗೆಲ್ಲ ಸಚಿವರು ಗೈರು ಹಾಜರಾಗುವುದು ಸರಿಯಲ್ಲ ಎಂದು ಹೇಳಿದರು.ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಅವರು, ಸರ್ಕಾರಕ್ಕೆ ಸಭಾಪತಿ ಛಾಟಿ ಬೀಸಬೇಕು, ಮುಖ ತೋರಿಸಿ ಎಂದು ಮಾತ್ರ ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.ಕೋಟ ಶ್ರೀನಿವಾಸ್ ಪೂಜಾರಿಯವರು ಯಾರು ಏನು ಬೇಕಾದರೂ ಮಾತಾಡಬಹುದಾ? ಎಂದಾಗ ನಾನು ಸೂಕ್ಷ್ಮವಾಗಿ ಹೇಳಿದ್ದೇನೆ ಎಲ್ಲರೂ ಅರ್ಥ ಮಾಡಿಕೊಳ್ಳಿ ಎಂದು ಸಭಾಪತಿ ಹೊರಟ್ಟಿ ಕಿವಿಮಾತು ಹೇಳಿದರು.

ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪುರೆ ಮಾತನಾಡಿ, ಯಾವ ಕಾರಣ ಹೇಳಿ ಜಮೀರ್ ಅಹ್ಮದ್ ಗೈರಾಗಿದ್ದಾರೆ? ಕುಟುಂಬದ ಸದಸ್ಯರಿಗೆ ಅನಾರೋಗ್ಯ , ತುರ್ತು ಕೆಲಸ ಇದ್ದರೆ ಗೈರಾಗಬಹುದು. ಆದರೆ ಬೆಳಗಾವಿಯಲ್ಲಿ ಅವೇಶನ ನಡೆಯುತ್ತಿದೆ. ಪೀಠದ ಬಗ್ಗೆ ಅವಹೇಳನ ಮಾತನಾಡಿದ್ದಾರೆ. ಹೀಗಾಗಿ ಉದ್ದೇಶಪೂರ್ವಕವಾಗಿ ಅವರು ಗೈರಾಗಿದ್ದಾರೆ ಎಂದು ಆರೋಪಿಸಿದರು.ಸಭಾಪತಿಯಾದ ನನ್ನ ಅನುಮತಿ ಕೇಳಿದ್ದಾರೆ. ಕಾರಣವನ್ನೂ ನಾನು ಹೇಳಲಾಗುವುದಿಲ್ಲ ಎಂದು ಸಭಾಪತಿಗಳು ಸಮರ್ಥಿಸಿಕೊಂಡರು.

ಆಗ ಸದನದ ನಿಯಮ ಓದಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಉಳಿದದ್ದು ಸಭಾಪತಿಗಳ ನಿರ್ಣಯಕ್ಕೆ ಬಿಟ್ಟಿದ್ದು ಎಂದರು. ಗೈರಾದ ಬಗ್ಗೆ ಆಕ್ಷೇಪವಿಲ್ಲ , ಪೀಠದ ಬಗ್ಗೆ ಅವಹೇಳನ ಮಾಡಿರುವ ಜಮೀರ್ ಹೇಳಿಕೆ ಬಗ್ಗೆ ಚರ್ಚೆಗೆ ಅವಕಾಶ ಬೇಕು ಎಂದ ಕೋಟಾ ಶ್ರೀ ನಿವಾಸ ಪೂಜಾರಿ ಅವರಿಗೆ , ಸಭಾಪತಿಗಳು ಪರಿಗಣಿಸುವುದಾಗಿ ಹೇಳಿದರು.

ಕೃಷ್ಣ ಬೈರೆಗೌಡರು ಓದಿದ ನಿಯಮದ ಪ್ರತಿ ಸರಿ ಇದೆ. ಆದರೆ ಸಭಾಪತಿ ಪೀಠದಿಂದ ಈ ಉತ್ತರ ನಿರೀಕ್ಷೆ ಮಾಡಿರಲಿಲ್ಲ. ಸದನದ ಸದಸ್ಯರು ಕೇಳಿದಾಗ ಕಾರಣವನ್ನು ಹೇಳುವುದು ನಿಮ್ಮ ಕರ್ತವ್ಯ ಎಂದು ಜೆಡಿಎಸ್ ಸದಸ್ಯ ಭೋಜೆಗೌಡ ಅವರು ಒತ್ತಾಯಿಸಿದರು.ಗೈರಾಗುವ ಬಗ್ಗೆ ಹೇಳಿದ್ದಾರೆ, ಅನುಮತಿ ಕೊಟ್ಟಿದ್ದೇನೆ ಅಷ್ಟೇ. ಮಂತ್ರಿಗಳು ನಾಳೆಯಿಂದ ಎಲ್ಲರೂ ಹಾಜರಿರುವ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಸಭಾಪತಿ ಸದನಕ್ಕೆ ತಿಳಿಸಿದರು.ಪುನಃ ಪ್ರವೇಶಿಸಿದ ಕೃಷ್ಣ ಭೈರೇಗೌಡ ಅವರು, ಸಾಮಾನ್ಯವಾಗಿ ಸಚಿವರು ಗೈರು ಹಾಜರಾಗಲು ಅನುಮತಿ ಬೇಕಿಲ್ಲ. ನಿಯಮಗಳ ಪ್ರಕಾರ ಹೇಳುವ ಅವಶ್ಯಕತೆ ನನಗೂ ಇರಲಿಲ್ಲ, ವಿಷಯ ತಿಳಿದುಕೊಂಡು ಪೂಜಾರಿಯವರು ಮಾತನಾಡಲಿ ಎಂದು ಹೇಳಿದರು.

ಸಭಾಪತಿ ಅನುಮತಿ ಪಡೆದುಕೊಳ್ಳಬೇಕು, ಜಮೀರ್ ಪಡೆದುಕೊಂಡಿದ್ದಾರೆ, ಅವರ ಕಾರಣಗಳು ನನಗೆ ಸಂಬಂಧ ಇಲ್ಲ ಎಂದು ಸಭಾಪತಿ ಹೊರಟ್ಟಿ ಪುನರುಚ್ಚಿಸಿದರು. ಆಗ ಕೋಟಾ ಶ್ರೀನಿವಾಸ್ ಪೂಜಾರಿಯವರು, ಪೀಠ ಯಾವತ್ತೂ ನಮ್ಮ ರಕ್ಷಣೆಗೆ ಬರಬೇಕು. ಕ್ಯಾಬಿನೆಟ್ ದರ್ಜೆಯ ಮಂತ್ರಿ ಪೀಠಕ್ಕೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು ನಮಗೆ ಅವಕಾಶ ನೀಡಬೇಕು ಎಂದು ಕೋರಿದಾಗ, ಸಭಾಪತಿಗಳು ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.

ಬಿಜೆಪಿ ಸದಸ್ಯ ಎನ್.ರವಿ ಕುಮಾರ್ ಮಾತನಾಡಿ, ಸಚಿವರು ಗೈರು ಹಾಜರಾಗಬಹುದು? ಅನುಮಾನದ ಪ್ರಶ್ನೆ ಎಂದರೆ ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ ಗೈರಾಗಿರುವುದು. ಆದರೆ ನಾವು ಪ್ರಶ್ನೆಯೇ ಕೇಳುವುದಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.

RELATED ARTICLES

Latest News