ಬಾಲಿವುಡ್ ನಟಿ ಜರೀನಾ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ. 19- ಕುಂಕುಮ್‍ಭಾಗ್ಯ ಧಾರಾವಾಹಿಯಿಂದ ಪ್ರಸಿದ್ಧರಾಗಿದ್ದ ಬಾಲಿವುಡ್Àನ ಕಿರುತೆರೆ ನಟಿ ಜರೀನಾ ರೋಷನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜರೀನಾ (54) ಕಿರುತೆರೆಯಲ್ಲಿ ಬಲು ಪ್ರಸಿದ್ಧರಾಗಿದ್ದು ಅಮ್ಮ, ಅತ್ತೆ ಪಾತ್ರಗಳಿಗೆ ನಿರ್ದೇಶಕರ ಮೊದಲ ಆಯ್ಕೆ ನಟಿಯಾಗಿದ್ದರು. ಕುಂಕುಮಭಾಗ್ಯದಲ್ಲಿ ಇವರು ನಟಿಸಿದ್ದ ಇಂದೂ ದಾಸಿ ಎಂಬ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿದ್ದರು.

`ಮುಸ್ಕಾನ್’, `ದೇವಯಾನಿ ಸಿಂಗಾನಿಯಾ’, `ಏ ರಿಸ್ತೇ ಕ್ಯಾ ಕೆಹೆತಾ ಹೈ’ ಮುಂತಾದ ಸೀರಿಯಲ್‍ಗಳಲ್ಲಿ ಜರೀಷಾ ರೋಷನ್ ಖಾನ್ ತಮ್ಮ ಅಭಿನಯದ ಕೌಶಲ್ಯತೆಯನ್ನು ಹೊರಹಾಕಿದ್ದರು. ಜರೀನಾಳೊಂದಿಗೆ ಕುಂಕುಮ್‍ಭಾಗ್ಯದಲ್ಲಿ ನಟಿಸುತ್ತಿದ್ದ ಇತಿಶ್ರೀ ಇನ್ಸ್ಟಾಗ್ರಾಮ್‍ನಲ್ಲಿ ಜರೀನಾಳೊಂದಿಗೆ ಹಂಚಿಕೊಂಡಿದ್ದ ಕೆಲವು ಫೋಟೋಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ಕುಂಕುಮ್ ಭಾಗ್ಯ ಸೀರಿಯಲ್‍ನ ರಾಜ್‍ಮೆಹ್ರಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜರೀನಾ ಅವರು ತುಂಬಾ ಶಕ್ತಿಯುತ ಮಹಿಳೆಯಾಗಿದ್ದರು. ಆರಂಭದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು ನಂತರ ಧಾರಾವಾಹಿ ಲೋಕದತ್ತ ಮರಳಿದ್ದರು. ನಿಜ ಜೀವನದಲ್ಲಿ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದರು ಎಂದು ಹೇಳುವ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಜರೀನಾ ಖಾನ್ ನಿಧನ ಟಿವಿ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

Facebook Comments