ಅತೃಪ್ತಗೆ ‘ಜೀರೋ ಟ್ರಾಫಿಕ್’ ಮಾಡಿಕೊಟ್ಟ ಗೃಹಸಚಿವರಿಗೆ ಸ್ಪೀಕರ್ ತರಾಟೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22-ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಬಂದಾಗ ಶೂನ್ಯ ಸಂಚಾರ (ಝಿರೋ ಟ್ರಾಫಿಕ್) ವ್ಯವಸ್ಥೆ ಒದಗಿಸಿದ ಬಗ್ಗೆ ವಿಧಾನಸಭಾಛ್ಯಕ್ಷ ರಮೇಶ್ ಕುಮಾರ್ ಕೆಂಡಾಮಂಡಲವಾದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ಸದನದಲ್ಲಿ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಸ್ಪೀಕರ್ ಕೂಡ ಸಹಮತ ವ್ಯಕ್ತಪಡಿಸಿ, ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ವಿರುದ್ಧ ಗರಂ ಆದರು.

ಝಿರೋ ಟ್ರಾಫಿಕ್ ವ್ಯವಸ್ಥೆ ಒದಗಿಸಲು ನಿಮಗೆ ಯಾರು ಆದೇಶ ನೀಡಿದರು ಎಂಬುದನ್ನು ತಿಳಿಸಿ ಎಂದು ರಮೇಕ್ ಕುಮಾರ್ ಗೃಹ ಸಚಿವರನ್ನು ಪ್ರಶ್ನಿಸಿದರು.
ಮುಂಬೈನಿಂದ ಸ್ಪೀಕರ್ ಅವರ ಮುಂದೆ ಹಾಜರಾಗಲು ಬಂದ ಅತೃಪ್ತ ಶಾಸಕರಿಗೆ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಝಿರೋ ಟ್ರಾಫಿಕ್‍ಗೆ ನಾನು ಆದೇಶ ನೀಡಿಲ್ಲ ಎಂದು ಸಚಿವರ ಹೇಳಿದಾಗ, ವಿಧಾನಸಭಾಧ್ಯಕ್ಷರು ಮತ್ತಷ್ಟು ಕುಪಿತರಾದರು.

ನೀವು ಮತ್ತು ನಿಮ್ಮ ಇಲಾಖೆಯ ಕಾರ್ಯವನ್ನು ಇಡೀ ವಿಶ್ವವೇ ನೋಡಿದೆ. ಗೃಹ ಸಚಿವರಾದ ನಿಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದರೆ ಹೇಗೆ ? ನೀವು ಅಧಿಕಾರಿಗಳಿಗೆ ಆದೇಶ ಕೊಟ್ಟಿಲ್ಲ ಎಂದು ಹೇಳುತ್ತಿದ್ದೀರಿ.

ಹಾಗಾದರೆ ಝಿರೋ ಟ್ರಾಫಿಕ್‍ಗೆ ಸೂಚನೆ ನೀಡಿದವರು ಯಾರು ಎಂದು ಸ್ಪೇಕರ್ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.  ಈ ಮಾತನ್ನು ಹೇಳಲು ನಿಮಗೆ ಆತ್ಮಸಾಕ್ಷಿ ಒಪ್ಪುತ್ತದೆಯೇ ಎಂದು ಸ್ಪೀಕರ್ ಬೇಸರದಿಂದ ನುಡಿದರು.

Facebook Comments

Sri Raghav

Admin