ಕೊರೊನಾ ಸೋಂಕಿತರ ಮೇಲೆ ಔಷಧಿ ಪ್ರಯೋಗ : ಝಿದೋಸ್ ಕ್ಯಾಡಿಲಾ ಸಂಸ್ಥೆ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.15-ಕೊರೊನಾ ಸೋಂಕಿತರ ಮೇಲೆ ಔಷಧಿ ಪ್ರಯೋಗ ಆರಂಭಿಸಿರುವುದಾಗಿ ಝಿದೋಸ್ ಕ್ಯಾಡಿಲಾ ಸಂಸ್ಥೆ ಘೋಷಿಸಿದೆ.

ಕೊರೊನಾ ಸೋಂಕಿಗೆ ಝೋಕೊವ್-ಡಿ ಎಂಬ ಔಷಧಿ ಕಂಡು ಹಿಡಿದಿದ್ದು, ಸೋಂಕಿತರ ಮೇಲೆ ಔಷಧಿ ಪ್ರಯೋಗ ಆರಂಭಿಸಲಾಗಿದೆ ಎಂದು ಝಿದೋಸ್ ಸಂಸ್ಥೆ ಹೇಳಿಕೊಂಡಿದೆ.

ಸೋಂಕಿತರ ಮೇಲಿನ ಮೊದಲ ಹಾಗೂ ಎರಡನೇ ಹಂತದ ಪ್ರಯೋಗ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಔಷಧಿ ಈ ನಿಟ್ಟಿನಲ್ಲಿ ಯಶ ಸಾಧಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಕೊರೊನಾ ಪೀಡಿತರ ಮೇಲೆ ಔಷಧಿ ಪ್ರಯೋಗದ ಅನುಮತಿ ಪಡೆದಿರುವ ಸಂಸ್ಥೆ, ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿಗೆ ಮದ್ದು ಕಂಡುಹಿಡಿಯುವ ವಿಶ್ವಾಸದಲ್ಲಿದೆ.

ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಮದ್ದು ಕಂಡು ಹಿಡಿದಿದೆ ಎಂಬ ಮಾಹಿತಿ ಬೆನ್ನಲ್ಲೆ ಝಿದೋಸ್ ಸಂಸ್ಥೆಯ ಈ ಹೇಳಿಕೆ ಔಷಧಿ ಕೊರೊನಾ ಸೋಂಕಿತರ ಮುಗದಲ್ಲಿ ಮಂದಹಾಸ ಮೂಡಿಸಿದೆ.

Facebook Comments

Sri Raghav

Admin