All for Joomla All for Webmasters

1

Last 24 Hours News

ಸಮಗ್ರ ಸುದ್ದಿಗಳು

ರಾಷ್ಟ್ರೀಯ

More news

ಮುಖಪುಟ (13)

ಮುಖಪುಟ

ಲಾಹೋರ್,ಫೆ.10-ಗ್ಯಾಸ್ ಟ್ಯಾಂಕರ್ ಮತ್ತು ಕಾರಿನ ನಡುವೆ ಸಂಭವಿಸಿದ  ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 13ಜನ ಜೀವಂತವಾಗಿ ಸುಟ್ಟುಹೋಗಿದ್ದಾರೆ.  ಇಲ್ಲಿನ ಪಂಜಾಬ್ ಪ್ರಾತ್ಯದ ಮನ್ವಾಲ ಸಮೀಪದ ಶೇಖೂ ಪುರ ಬಳಿ ವೇಗವಾಗಿ ಬಂದ ಕಾರೊಂದು ಗ್ಯಾಸ್ ಟ್ಯಾಂಕರ್‌ಗೆ ಅಪ್ಪಳಿಸಿತು. ಈ ಅಪಘಾತದಿಂದ ಸ್ಫೋಟ ಸಂಭವಿಸಿ ಪಕ್ಕದಲ್ಲೇ ಹೋಗುತ್ತಿದ್ದ ಶಾಲಾ ಮಕ್ಕಳ ಆಟೋ ರಿಕ್ಷಕ್ಕೆ ಬೆಂಕಿ ಹೊತ್ತಿಕೊಂಡಿತು. ನೋಡು ನೋಡುತ್ತಿದ್ದಂತೆ ಕಾರು ಮತ್ತು ರಿಕ್ಷಾಗಳನ್ನು ಬೆಂಕಿಯ ಕೆನ್ನಾಲಗೆ ಆವರಿಸಿ ರಿಕ್ಷಾದಲ್ಲಿದ್ದ ಆರು ಮಕ್ಕಳು ಹಾಗೂ ಕಾರಿನಲ್ಲಿದ್ದ 7ಜನ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. 

ಲಕ್ನೌ,ಫೆ.10-ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.50ರ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವಾಗಲೇ ಒಂದು ಹೆಜ್ಜೆ ಮುಂದೆ ಹೋಗಿರುವ ಉತ್ತರ ಪ್ರದೇಶ ಸರ್ಕಾರ, ಬ್ಲಾಕ್ ಪ್ರಮುಖರ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ಸ್ಥಾನಗಳನ್ನು ಮಹಿಳೆಯರಿಗಾಗಿ ಕಾಯ್ದಿರಿಸಿದೆ. ಕಳೆದ ವಾರ ನಡೆದ ಗ್ರಾಮ ಪ್ರಧಾನ ಚುನಾವಣೆಯಲ್ಲಿ ಶೇ.44ರಷ್ಟು ಮಹಿಳೆಯರು ಆಯ್ಕೆಯಾಗಿದ್ದು, ಅದರಲ್ಲಿ ನಾಲ್ವರು ಪಿಹೆಚ್‌ಡಿ ಪದವೀಧರರಿದ್ದರು. ಭಾನುವಾರ ನಡೆದ 793 ಬ್ಲಾಕ್ ಪ್ರಮುಖರ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ಮಹಿಳೆಯರು ಕಣಕ್ಕಿಳಿದಿದ್ದರು. 

ಮುಂಬೈ,ಫೆ.10-ಮುಂಬೈ ದಾಳಿ ಪ್ರಕರಣದ ವಿಚಾರಣೆಯಲ್ಲಿ ಅಪ್ರೂವರ್ ಆಗಿರುವ ಡೇವಿಡ್ ಕೋಲ್‌ಮನ್ ಹೆಡ್ಲಿಯ ಮೂರನೇ ದಿನದ ವಿಡಿಯೊ ವಿಚಾರಣೆಗೆ ತಾಂತ್ರಿಕ ಅಡಚಣೆ ಅಡ್ಡಿಯಾದ ಪ್ರಸಂಗ ಇಂದು ನಡೆದಿದೆ. 2008ರ ನ.26ರ ತಾಜ್ ಹೊಟೇಲ್ ಮೇಲಿನ ದಾಳಿ ಕುರಿತಾದ ವಿಚಾರಣೆ ಕಳೆದ ಎರಡು ದಿನಗಳಿಂದ ನಡೆದಿದ್ದು, ಇಂದೂ ಕೂಡ ವಿಶೇಷ ನ್ಯಾಯಾಧೀಶ ಜಿ.ಎ.ಸನಪ್ ಅವರು ಹೆಡ್ಲಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಜ್ಜಾಗಿದ್ದರು.  ಆದರೆ ತಾಂತ್ರಿಕ ಅಡಚಣೆ ಉಂಟಾಗಿದ್ದರಿಂದ ವಿಚಾರಣೆ ನಡೆಸಲಾಗಲಿಲ್ಲ. ಒಟ್ಟಾರೆ, ಇಂದು ನಡೆಯಬೇಕಾಗಿದ್ದ ವಿಚಾರಣೆ ರದ್ದು ಪಡಿಸಲಾಗಿದೆಯೇ ಹೇಗೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ರಾಯಚೂರು, ಫೆ.10-ತುಂಗಭದ್ರ ಜಲಾಶಯದ ಹೂಳಿನ ಸಮಸ್ಯೆ ನಿವಾರಣೆಗೆ ನೆದರ್‌ಲ್ಯಾಂಡ್ ಮೂಲದ ಕಂಪೆನಿ ಜೊತೆ ಫೆ.20ರ ನಂತರ ಸರ್ಕಾರ  ಚರ್ಚೆ ನಡೆಸಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ದೇವದುರ್ಗದ ಗಬ್ಬೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿರುವ ಭಾರೀ ಪ್ರಮಾಣದಲ್ಲಿ ಹೂಳನ್ನು ಹೊರತೆಗೆಯಲು ನೆದರ್‌ಲ್ಯಾಂಡ್ ಮೂಲದ ಕಂಪೆನಿ ಸಹಯೋಗದೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು  ಎಂದು ಸಚಿವರು ತಿಳಿಸಿದರು.

ನವದೆಹಲಿ,ಫೆ.10-ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್  ನೀರ್ಗಲ್ಲು  ಪ್ರದೇಶದಲ್ಲಿ ವಾರದ ಹಿಂದೆ ಉಂಟಾದ ಹಿಮಕುಸಿತದ ವೇಳೆ ಕಣ್ಮರೆಯಾಗಿ ಪವಾಡ ಸದೃಶದಲ್ಲಿ ಪಾರಾಗಿ ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿರುವ ಹನುಮಂತಪ್ಪ ಕೊಪ್ಪದ್ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಗೆ ಸೇನಾ ಮುಖ್ಯಸ್ಥರು ದೌಡಾಯಿಸಿದ್ದಾರೆ.  ದೆಹಲಿಯ ಆರ್.ಆರ್.ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ಹನುಂತಪ್ಪ ಕೋಮಕ್ಕೆ ಜಾರಿದ್ದು, ಅವರ ಮೂತ್ರ ಪಿಂಡ, ಪಿತ್ತ ಜನಕಾಂಗ ನಿಷ್ಕ್ರಿಯಗೊಂಡಿವೆ. ನ್ಯುಮೋನಿಯಾಕ್ಕೆ ತುತ್ತಾಗಿದ್ದಾರೆ ಎಂದು ಮಿಲಿಟರಿ ವೈದ್ಯರು ತಿಳಿಸಿದ್ದಾರೆ.

ಚಂಡೀಗಡ,ಫೆ.10-ಆಯ್ಕೆ ಸಂದರ್ಭ ಗರ್ಭಿಣಿಯಾಗಿದ್ದಳು ಎಂಬ ಕಾರಣಕ್ಕಾಗಿ ಒಬ್ಬ ಮಹಿಳಾ ವೈದ್ಯೆಯನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಶಾಶ್ವತವಾಗಿ ರದ್ದುಗೊಳಿಸುವಂತಿಲ್ಲ ಎಂಬ ಮಹತ್ವದ ತೀರ್ಪು ನೀಡಿರುವ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯ, ಆಧುನಿಕ ಭಾರತ ಸಂದರ್ಭದಲ್ಲಿ ಅಂತಹ ಕ್ರಮಗಳಿಗೆ ಅವಕಾಶವೇ ಇಲ್ಲ ಎಂದು ಹೇಳಿದೆ. 2009ರ ಅ.22ರಂದು ನಡೆದಿದ್ದ ವೈದ್ಯರ ಆಯ್ಕೆ ವೇಳೆ ಮಹಿಳೆಯೊಬ್ಬಳು ಗರ್ಭಿಣಿ ಇದ್ದದ್ದರಿಂದ ಸಶಸ್ತ್ರ ಪಡೆಗಳ ಮಹಾ ನಿರ್ದೇಶಕರು ಆಕೆಯನ್ನು ಆಯ್ಕೆ-ನೇಮಕಾತಿ ಪ್ರಕ್ರಿಂಯೆಯಿಂದಲೇ ವಜಾಮಾಡಿದ್ದ ಕ್ರಮ ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರ ಎಂದು ಹೈಕೋರ್ಟ್ ಘೋಷಿಸಿದೆ. ಆರ್ಮಿ ಮೆಡಿಕಲ್ ಕಾರ್ಪ್ಸ್ಸ್(ಎಎಂಸಿ)ನೇಮಕಾತಿ ಬಯಸಿ ಮಹಿಳೆ ಅರ್ಜಿ ಸಲ್ಲಿಸಿದ್ದಳು.

ನವದೆಹಲಿ,ಫೆ.10-ಸಿಯಾಚಿನ್ ಹಿಮಪಾತದಲ್ಲಿ ಪವಾಡ ಸದೃಶವಾಗಿ ಬದುಕಿಬಂದ ಲ್ಯಾನ್ಸರ್ ನಾಯಕ್ ಹನುಮಂತಪ್ಪ ಕೊಪ್ಪದ್ ಆಗಮನಕ್ಕಾಗಿ ಇಡೀ ದೇಶ ಕಾತರದಿಂದ ಕಾಯುತ್ತಿರುವಂತೆಯೇ ಅತ್ತ ವೀರ ಯೋಧ ದೆಹಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಿಚಾರ ವೀರ ಯೋಧನ ಕುಟುಂಬದ ಮೇಲೆ ಭರ ಸಿಡಿಲಿನಂತೆ ಎರಗಿದೆ. ಇದೇ ವೇಳೆ ಸೇನಾಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಭಾರತ-ಪಾಕಿಸ್ಥಾನದ ಗಡಿ ನಿಯಂತ್ರಣ ರೇಖೆಯ ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನ್ ನಲ್ಲಿ ಕಳೆದ ವಾರ ಸಂಭವಿಸಿದ ಭಾರೀ ಹಿಮಪಾತದಡಿಯಲ್ಲಿ ಸಿಲುಕಿದ್ದ ಹನುಮಂತಪ್ಪ ಆರು ದಿನಗಳ ನಂತರ ಪವಾಡವೋ ಎಂಬ ರೀತಿಯಲ್ಲಿ  ಜೀವಸಹಿತ ಪತ್ತೆಯಾಗಿದ್ದ. ಅವನನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಯಿತು. 

ನವದೆಹಲಿ, ಫೆ.10- ದಶಕಗಳ ಬೇಡಿಕೆಯೊಂದು ಈಡೇರುವ ಲಕ್ಷಣಗಳು ಗೋಚರಿಸಿವೆ. ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ ದೇಶದಲ್ಲಿ ಹೊಸ ಕ್ರಾಂತಿಯೇ ಆಗಲಿದೆ. ಖಾಸಗಿ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ಒದಗಿಸಬೇಕೆಂಬ ಕನಸಿಗೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿದೆ. ಕಾರಣ ಈ ಕ್ಷೇತ್ರಗಳಲ್ಲಿ ಶೇ.27ರಷ್ಟು ಮೀಸಲಾತಿಯನ್ನು ನಿಗದಿಪಡಿಸಬೇಕೆಂದು ಹಿಂದುಳಿದ ವರ್ಗಗಳ ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಸಂಬಂಧ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಹುಮತದಿಂದ ಶಾಸನವೊಂದನ್ನು ರಚಿಸಿ ಕಾಯ್ದೆ ಜಾರಿ ಮಾಡಬೇಕೆಂದು ಆಯೋಗ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು, ಫೆ.10-ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರನ ಬಳಿ ಕೋಟ್ಯಂತರ ರೂಪಾಯಿ ಕಾರು ಇದೆ. ಅದು ಕುಮಾರಸ್ವಾಮಿ ಮಗ ದುಡಿದದ್ದೇ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ 108ನೆ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ  ಪಶ್ಚಿಮ ದ್ವಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬೆಂಗಳೂರು, ಫೆ.10- ಲಿಂಗ ಪರಿವರ್ತನೆ (ಟ್ರಾನ್ಸ್‌ಜೆಂಡರ್)ಯಾದ ಮಕ್ಕಳಿಗೂ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ ಪ್ರಕಾರ ಇನ್ನು ಮುಂದೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲಾತಿ ಸಿಗಲಿದೆ. ರಾಜ್ಯ ಸರ್ಕಾರ ಹೊರಡಿಸಿರುವ ನೂತನ ಆರ್‌ಟಿಇ ಮಾರ್ಗಸೂಚಿ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ಕಡ್ಡಾಯವಾಗಿ ಲಿಂಗಪರಿವರ್ತನೆಯಾದ ಮಕ್ಕಳಿಗೂ ಮೀಸಲಾತಿ ನೀಡಬೇಕು.   ವಾರ್ಷಿಕ ಮೂರೂವರೆ ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಹಾಗೂ ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿರುವ ಕುಟುಂಬದ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಮೀಸಲಾತಿ ನೀಡಬೇಕೆಂಬ ನಿಯಮವಿದೆ.

ಬಳ್ಳಾರಿ,ಫೆ.10-ಜಿಲ್ಲೆಯ ಶಿರಗುಪ್ಪ ತಾಲೂಕಿನ ಸಿಂದಗೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ಎತ್ತಿನ ಗಾಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು  ಸ್ಥಳದಲ್ಲೆ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ನಾಗಮ್ಮ (40), ವಿಶಾಲಾಕ್ಷಿ (28) ಹಾಗೂ ಕಂಪ್ಲಿ ಬಸವ (40)ಎಂಬುವವರು ಸ್ಥಳದಲ್ಲೆ ಸಾವನ್ನಪ್ಪಿದರೆ, ಉಳಿದ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡಲು ಗಾಡಿಯಲ್ಲಿ 9ಮಂದಿ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಬೆಂಗಳೂರು, ಫೆ.10 : ಮೊನ್ನೆ ತಾನೆ ಬೆಂಗಳೂರಿನ  ವಿಬ್ ಗಯಾರ್ ಶಾಲೆಗೇ ಚಿರತೆ ನುಗ್ಗಿ, ಮೂವರನ್ನು ಗಾಯಗೊಳಿಸಿ ರಾದ್ಧಾಂತ ಸೃಷ್ಟಿಸಿತ್ತು. ಆಘಟನೆ ಮಾಸುವ ಮುನ್ನವೇ ಅದೇ ಶಾಲೆಯ ಸುತ್ತ ಮತ್ತೆರಡು ಚಿರತೆಗಳು ಪ್ರತ್ಯಕ್ಷವಾಗಿವೆ ಎಂಬ  ವದಂತಿ ಹರಡಿ ಭಯ ಸೃಷ್ಟಿಸಿದೆ.  ಸ್ಥಳೀಯರ ನೀಡಿದ ಮಾಹಿತಿಯನ್ನಾಧರಿಸಿ    ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ ಶಾಲೆಯ ಸುತ್ತ-ಮುತ್ತಲಿನ ಜನರು ಆತಂಕದಿಂದ ನಿದ್ದೆ ಬಿಟ್ಟು ಕಾವಲು ಕಾದಿದ್ದಾರೆ. ಭಾನುವಾರ ಶಾಲೆಯ ಆವರಣದೊಳಗೆ ನುಗ್ಗಿದ್ದ ಚಿರತೆಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು.

ರಾಶಿ ಭವಿಷ್ಯ

ಪಂಚಾಂಗ : ಸೋಮವಾರ , 08.02.2016

ಸೂರ್ಯ ಉದಯ ಬೆ.6.46/ಅಸ್ತ ಸ 6.15

ಮೇಷ : ಕಠಿಣ ಶ್ರಮದಿಂದ ಕೆಲಸ ಮಾಡಿ, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಬಡ್ತಿ ಸಂಭವ
ವೃಷಭ : ವ್ಯಾಪಾರಿಗಳಿಗೆ ಉತ್ತಮ ಲಾಭ, ನ್ಯಾಯಾಲಯದ ಕೆಲಸಗಳನ್ನು ಕಡೆಗಣಿಸಬೇಡಿ
ಮಿಥುನ : ಮಹತ್ವದ ಕಾರ್ಯಗಳಲ್ಲಿ ಹೆಚ್ಚು ಸಹಕಾರ ಪಡೆಯುತ್ತೀರಿ, ನಿರುದ್ಯೋಗಿಗಳ ಸಮಸ್ಯೆ ನಿವಾರಣೆಯಾಗುವುದು
ಕಟಕ : ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಧನಲಾಭ
ಸಿಂಹ : ದೈಹಿಕ ತೊಂದರೆಗಳು ನಿವಾರಣೆಯಾಗುತ್ತವೆ
ಕನ್ಯಾ : ಹೊರದೇಶ ಪ್ರಯಾಣದಿಂದ ಅನೇಕ ಲಾಭಗಳು ಉಂಟಾಗುತ್ತವೆ
ತುಲಾ : ಹಣಕಾಸಿನ ವಿಷಯದಲ್ಲಿ ಅನ್ಯರಿಗೆ ಜಾಮೀನು ಕೊಡಬೇಡಿ
ವೃಶ್ಚಿಕ : ಸಂಪಾದನೆಗಿಂತ ಅಧಿಕ ವೆಚ್ಚವಾಗುವುದು, ಸಂತಸದ ದಿನ
ಧನುಸ್ಸು: ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗುವುದು, ಸುಖಕರ ಭೋಜನ
ಮಕರ : ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವಿರಿ
ಕುಂಭ : ವಿದೇಶಿ ಬಂಧುಗಳಿಂದ ಉಡುಗೊರೆ ಲಭಿಸಲಿದೆ
ಮೀನ : ಕರ್ತವ್ಯ ನಿಷ್ಠೆಗೆ ಮೇಲಧಿಕಾರಿಗಳಿಂದ ಪ್ರಶಂಸೆ