Saturday, April 27, 2024
Homeಇದೀಗ ಬಂದ ಸುದ್ದಿಒಂದೇ ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ಕಾಯಿಲೆ

ಒಂದೇ ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ಕಾಯಿಲೆ

ರಾಯಚೂರು,ಫೆ.11- ರಾಯಚೂರಿನ ಲಿಂಗಸಗೂರು ತಾಲೂಕಿನ ನೀರಲಕೇರಿ ಸರ್ಕಾರಿ ಶಾಲೆಯೊಂದರಲ್ಲೇ 150 ಕ್ಕೂ ಹೆಚ್ಚು ಮಕ್ಕಳಲ್ಲಿ ಮಂಗನ ಬಾವು ಕಾಯಿಲೆ ಕಾಣಿಸಿಕೊಂಡಿದೆ. ತಲೆನೋವು, ಸ್ನಾಯು ಸೆಳೆತದಿಂದ ಮಕ್ಕಳು ನರಳಾಡುತ್ತಿದ್ದಾರೆ.

ಲಿಂಗಸೂಗೂರು ತಾ. ಆನೆಹೊಸರು, ಲಿಂಗಸೂಗೂರು ಆಸ್ಪತ್ರೆಗೆ ಮಕ್ಕಳನ್ನು ದಾಖಲು ಮಾಡಲಾಗಿದೆ. ಈ ಹಿನ್ನೆಲೆ ನಿತ್ಯ ಶಾಲೆಗೆ ಗೈರು ಹಾಜರಿ ಆಗುತ್ತಿರುವ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದುಳಿಯುತ್ತಿದ್ದಾರೆ. ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗಿದೆ.

ದೇಶ ಒಗ್ಗೂಡಿಸುವಿಕೆಯಲ್ಲಿ ಶ್ರೀರಾಮದೇವರ ದೈವಿಕ ಆಶೀರ್ವಾದವಿದೆ : ದೇವೇಗೌಡರು

ನೀರಲಕೇರಿ ಗ್ರಾಮದಲ್ಲಿ ಮೊಕ್ಕಾಂ ಹೂಡಿದ ಆರೋಗ್ಯ ಇಲಾಖೆ ಪರೀಕ್ಷೆ ನಡೆಸುತ್ತಿದೆ. ಲಿಂಗಸೂಗೂರು ತಾಲೂಕಿನ ಮಕ್ಕಳಲ್ಲಿ ಮಂಗನ ಬಾವು ಪತ್ತೆಯಾಗಿದೆ. ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಈ ಕಾಯಿಲೆ ಬರುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡಿ,ಇಡೀ ಶಾಲೆಯನ್ನೆ ಆವರಿಸಿದೆ ಈ ಕಾಯಿಲೆ ಎಂದು ರಾಯಚೂರು ಡಿಎಚ್‍ಒ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.

ಮಂಗನ ಬಾವು ರೋಗವೂ ವಾರದಲ್ಲಿ ಸಹಜವಾಗಿ ಕಡಿಮೆ ಆಗುತ್ತದೆ. ಇಡೀ ಜಿಲ್ಲೆಯಾದ್ಯಂತ ಮಕ್ಕಳಿಗೆ ಎಂಎಂಆರ್ ವ್ಯಾಕ್ಸಿನೇಷನ್ ಆಗಿದೆ. ಮಂಗನ ಬಾವು ಬಂದ ಮಕ್ಕಳು ಎರಡು- ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕು. ಮಕ್ಕಳಲ್ಲಿ ಜ್ವರ ಬಂದಾಗ ಫ್ಯಾರಾಸೀಟಮ್ ಮಾತ್ರೆ ನೀಡಿದರೆ ಸಾಕು. ಮಂಗನ ಬಾವು ಅಪಾಯಕಾರಿ ಕಾಯಿಲೆ ಅಲ್ಲ ಎಂದು ಪೋಷಕರಿಗೆ ಧೈರ್ಯ ತುಂಬಿದ್ದರೆ.

RELATED ARTICLES

Latest News