ವಿಕಾಸ್ ದುಬೆ ಬಂಧನವೋ..ಶರಣಾಗತಿಯೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ : ಅಖಿಲೇಶ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.9- ಉತ್ತರಪ್ರದೇಶದಲ್ಲಿ 8 ಮಂದಿ ಪೊಲೀಸರನ್ನು ಕೊಂದಿದ್ದ ಮೋಸ್ಟ್ ವಾಂಟೆಡ್ ವಿಕಾಸ್ ದುಬೆ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‍ಯಾದವ್, ಗ್ಯಾಂಗಸ್ಟರ್‍ನ ಬಂಧನವೋ ಅಥವಾ ನಿಜಕ್ಕೂ ಅದು ಶರಣಾಗತಿಯೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದಿದ್ದಾರೆ.

ಕಾನ್ಪುರ್ ಎನ್‍ಕೌಂಟರ್ ಪ್ರಕರಣದಲ್ಲಿ ಮುಖ್ಯ ಅಪರಾಧಿಯಾದ ವಿಕಾಸ್ ದುಬೆ ಪೊಲೀಸರ ವಶದಲ್ಲಿದ್ದಾನೆ ಎಂದು ವರದಿಯಾಗಿದೆ. ಇದು ನಿಜವಾಗಿದ್ದರೆ, ಅದು ಶರಣಾಗತಿಯೇ ಅಥವಾ ಬಂಧನವೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ವಿಕಾಸ್ ದುಬೆ ಅವರನ್ನು ಇಂದು ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿ ಯಿಂದ ಬಂಧಿಸಲಾಯಿತು. ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರ ಹತ್ಯೆಯ ನಂತರ ಕಳೆದ ವಾರದಿಂದ ಆತ ಪರಾರಿಯಾಗಿದ್ದ. ಉತ್ತರಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್‍ಕೌಂಟರ್‍ಗಳಲ್ಲಿ ದರೋಡೆಕೋರ ವಿಕಾಸ್ ದುಬೆನ ಇಬ್ಬರು ಸಹಾಯಕರು ಸಾವನ್ನಪ್ಪಿದ್ದರು.

ಅವರಲ್ಲಿ ಒಬ್ಬ, ಪ್ರಭಾತ್ ಮಿಶ್ರಾ. ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಆತನ ಮೇಲೆ ಗುಂಡಿಕ್ಕಿ ಎನ್‍ಕೌಂಟರ್ ಮಾಡಿದ್ದರು. ಬುಧವಾರ ಉತ್ತರ ಪ್ರದೇಶ ಪೊಲೀಸರು ಹಮೀರ್‍ಪುರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ವಿಕಾಸ್ ದುಬೆನ ಆಪ್ತ ಅಮರ್ ದುಬೆನನ್ನು ಎನ್‍ಕೌಂಟರ್ ಮಾಡಿದ್ದಾರೆ.

ವಿಕಾಸ್ ದುಬೆನನ್ನು ಉಜ್ಜಯಿನಿ ಮಹಕಲ್ ದೇವಸ್ಥಾನದಲ್ಲಿ ಇರುವ ಮಾಹಿತಿ ಪಡೆದಪೊಲೀಸರು ಇಂದು ಅವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲೇಶ್, ಮೋಸ್ಟ್ ವಾಂಟೆಡ್ ಗ್ಯಾಂಗ್‍ಸ್ಟರ್‍ನನ್ನು ಬಂಧಿಸಲಾಗಿದೆಯೋ ಅಥವಾ ಶರಣಾಗಿದಾನೆಯೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸಂಶಯ ವ್ಯಕ್ತಪಡಿಸಿದ ಟ್ವೀಟ್ ಮಾಡಿದ್ದಾರೆ.

Facebook Comments