ಅಕ್ಷಯ ಪಾತ್ರ ಫೌಂಡೇಷನ್ ಜತೆ ಅಮೆರಿಕನ್ ಟವರ್ ಫೌಂಡೇಷನ್ ಪಾಲುದಾರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.29- ಕೋವಿಡ್-19 ಪರಿಹಾರ ಕ್ರಮಗಳಿಗಾಗಿ ದಿನಸಿ ಕಿಟ್‍ಗಳನ್ನು ವಿತರಿಸಲು ಪ್ರಮುಖ ಸಂಘಟನೆಯಾದ ಅಕ್ಷಯ ಪಾತ್ರ ಫೌಂಡೇಷನ್ ಜತೆಗೆ ಅಮೆರಿಕನ್ ಟವರ್ ಕಾಪೆರ್ರೇಷನ್ (ಎಟಿಸಿ)ಜಾಗತಿಕ ದತ್ತಿ ಉಪಕ್ರಮವಾದ ಅಮೆರಿಕನ್ ಟವರ್ ಫೌಂಡೇಷನ್ ಜತೆಗೆ ಸಹಭಾಗಿತ್ವ ಸಾಧಿಸಿದೆ.  ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಬಳಲಿದವರಿಗೆ 31 ಸ್ಥಳಗಳಲ್ಲಿ 19 ಲಕ್ಷ ಊಟವನ್ನು ಒದಗಿಸಲಾಗುತ್ತದೆ.

ದಿನಗೂಲಿ ಕೆಲಸಗಾರರು, ಗುತ್ತಿಗೆ ಕೆಲಸಗಾರರು ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋದವರಿಗೆ ಮತ್ತು ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡವರಿಗೆ ಊಟ ಒದಗಿಸಲಾಗಿದೆ. ಕರ್ನಾಟಕದಲ್ಲಿ 12 ದಿನಗಳವರೆಗೆ ವಿತರಣೆ ಮಾಡಲಾಗಿದ್ದು, ಒಟ್ಟು 2,94,000 ಊಟವನ್ನು ಒದಗಿಸಲಾಗಿದೆ.

ಎಟಿಸಿ ಇವಿಪಿ ಮತ್ತು ಏಷ್ಯಾ ಅಧ್ಯಕ್ಷ ಅಮಿತ್ ಶರ್ಮಾ ಮಾತನಾಡಿ, ಕೋವಿಡ್-19 ಉಂಟು ಮಾಡಿದ ಆರೋಗ್ಯ ತುರ್ತು ಪರಿಸ್ಥಿತಿಯಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ಜನರ ಆರ್ಥಿಕ ಪರಿಸ್ಥಿತಿ ಗಂಭೀರ ಹಂತ ತಲುಪಿದೆ. ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಮತ್ತು ವಿಶಾಲ ಸಾಮಾಜಿಕ ಸಮುದಾಯವಾಗಿರುವ ಅಮೆರಿಕನ್ ಟವರ್ ಕಾಪೆರ್Çರೇಷನ್ (ಎಟಿಸಿ) ಕೋವಿಡ್ ಪರಿಹಾರ ಕಾರ್ಯದಲ್ಲಿ ಬೆಂಬಲಿಸಲು ಮತ್ತು ತನ್ನ ಎನ್‍ಜಿಒ ಪಾಲುದಾರ ಅಕ್ಷಯ ಪಾತ್ರ ಫೌಂಡೇಷನ್ ಮೂಲಕ ನೆರವು ಒದಗಿಸಲು ಬದ್ಧವಾಗಿದೆ.

ಇದರ ಅಡಿಯಲ್ಲಿ ದಿನಸಿ ಮತ್ತು ರೇಶನ್ ಕಿಟ್‍ಗಳನ್ನು ಹಿಂದುಳಿದ ಸಮುದಾಯಗಳಿಗೆ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರತಿ ಫುಡ್ ಕಿಟ್‍ನಲ್ಲಿ ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಧಾನ್ಯಗಳು, ಅಡುಗೆ ಎಣ್ಣೆ ಮತ್ತು ಉಪ್ಪು ಇರುತ್ತದೆ. ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿಯ ವಿವಿಧ ಸ್ಥಳಗಳಲ್ಲಿ ವಿತರಣೆ ಅಭಿಯಾನವನ್ನು ನಡೆಸಲಾಗಿದೆ.

ಅಕ್ಷಯ ಪಾತ್ರ ಫೌಂಡೇಶನ್‍ನ ಸಿಇಒ ಶ್ರೀಧರ್ ವೆಂಕಟ್ ಮಾತನಾಡಿ, ವಿಪತ್ತಿನಲ್ಲಿರುವ ಸಮುದಾಯಕ್ಕೆ ನೆರವಾಗುವ ನಮ್ಮ ಪ್ರಯತ್ನದಲ್ಲಿ ಸಹಕಾರ ನೀಡಿದ ಅಮೆರಿಕನ್ ಟವರ್ ಫೌಂಡೇಶನ್‍ಗೆ ನಾವು ಆಭಾರಿಯಾಗಿದ್ದೇವೆ.  ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವವರಿಗೆ ಒಟ್ಟಾಗಿ ಸಹಕಾರ ನೀಡಬೇಕು ಎಂಬುದನ್ನು ಕೋವಿಡ್-19 ಮನನ ಮಾಡಿಕೊಟ್ಟಿದೆ ಎಂದಿದ್ದಾರೆ.

Facebook Comments