Saturday, April 27, 2024
Homeರಾಷ್ಟ್ರೀಯನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ (LIVE UPDATES)

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ (LIVE UPDATES)

ಮಧ್ಯಪ್ರದೇಶ (ಒಟ್ಟು ಕ್ಷೇತ್ರಗಳು-229 / ಮ್ಯಾಜಿಕ್ ನಂಬರ್ -116)

ಬಿಜೆಪಿ : 165
ಕಾಂಗ್ರೆಸ್ : 63
ಬಿಎಸ್‌ಪಿ : 01
ಇತರೆ : 01


ರಾಜಸ್ತಾನ : (ಒಟ್ಟು ಕ್ಷೇತ್ರಗಳು-199 / ಮ್ಯಾಜಿಕ್ ನಂಬರ್ – 100)
ಬಿಜೆಪಿ : 115
ಕಾಂಗ್ರೆಸ್ : 70
ಬಿಎಸ್‌ಪಿ : 02
ಇತರೆ : 12


ಛತ್ತೀಸಘಡ : (ಒಟ್ಟು ಕ್ಷೇತ್ರಗಳು-90 / ಮ್ಯಾಜಿಕ್ ನಂಬರ್ – 46)
ಬಿಜೆಪಿ : 53
ಕಾಂಗ್ರೆಸ್ : 35
ಬಿಎಸ್‌ಪಿ : 02
ಇತರೆ : 00


ತೆಲಂಗಾಣ : (ಒಟ್ಟು ಕ್ಷೇತ್ರಗಳು-119 / ಮ್ಯಾಜಿಕ್ ನಂಬರ್ – 60)
ಕಾಂಗ್ರೆಸ್ : 64
ಬಿಆರ್‌ಎಸ್‌ : 40
ಬಿಜೆಪಿ : 08
ಎಐಎಂಐಎಂ : 06
ಇತರೆ : 00


ಮುಂಬರುವ ಲೋಕಸಭಾ ಮಹಾ ಚುನಾವಣೆಯ ದಿಕ್ಸೂಚಿಯೆಂದೇ ಬಿಂಬಿಸಲಾಗಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ದಾಖಲಿಸಿ, ತೆಲಂಗಾಣದಲ್ಲಿ ಕಾಂಗ್ರೆಸ್ ಅಪತ್ಯ ಸಾಧಿಸುವುದು ಬಹುತೇಕ ನಿಶ್ಚಿತವಾಗಿದೆ.

ಮಧ್ಯಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ನಡುವೆಯೂ ಬಿಜೆಪಿ 155ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಐತಿಹಾಸಿಕ ಜಯದತ್ತ ದಾಪುಗಾಲಿಟ್ಟಿದೆ. 52 ಜಿಲ್ಲಾ ಕೇಂದ್ರಗಳಲ್ಲಿ ಇಂದು 230 ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಇಂದು ಬಿಗಿಭದ್ರತೆಯ ನಡುವೆ ನಡೆದಿದ್ದು, ಮತ್ತೊಮ್ಮೆ ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತವಾಗಿದೆ.

ಶಿವರಾಜ್ ಸಿಂಗ್ ಚವ್ಹಾಣ್, ಜ್ಯೋತಿರಾತ್ಯ ಸಿಂಧ್ಯ ಅವರ ಜೋಡೆತ್ತಿನ ಹೋರಾಟ ಎದುರಾಳಿ ಕಾಂಗ್ರೆಸ್‍ನ್ನು ಮಣಿಸಿದೆ. ಬಿಜೆಪಿ ನೀಡಿದ್ದ ಅಯೋಧ್ಯೆಯ ರಾಮಮಂದಿರ ಉಚಿತ ತೀರ್ಥ ಯಾತ್ರೆ, ಮಹಿಳಾ ಸಬಲೀಕರಣ ಹಲವು ಭರವಸೆಗಳು ಇಲ್ಲಿ ವರ್ಕೌಟ್ ಆಗಿದೆ.

ಇಂಡಿಯಾ ಮೈತ್ರಿಕೂಟದ ಹೆಸರಿನಲ್ಲೇ ಇಲ್ಲಿ ಕಾಂಗ್ರೆಸ್, ಟಿಎಂಸಿ, ಎನ್‍ಸಿಪಿ ಸೇರಿದಂತೆ ಹಲವು ಪಕ್ಷಗಳ ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಂತರೂ ಅದನ್ನು ಬೇಸಿ ಕಮಲ ಪಡೆ ಗೆಲುವಿನ ಕೇಕೆ ಹಾಕಿದೆ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದಿದ್ದರೂ ಈಗ ಹಾಲಿ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಅವರೇ ಮತ್ತೆ ಮುಖ್ಯಮಂತ್ರಿ ಗಾದಿ ಹಿಡಿಯುವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನು ಕೇಂದ್ರ ಸಚಿವ ಜ್ಯೋತಿರಾತ್ಯ ಹೆಸರು ಕೂಡ ಕೇಳಿಬರುತ್ತಿದೆ.

ಇಬ್ಬರೂ ಕೂಡ ಭಾರೀ ಅಂತರದಿಂದ ಗೆಲುವು ಸಾಸಿದ್ದು, ಒಟ್ಟಾರೆ ಮುನ್ನಡೆ ಅಂಕಿಅಂಶಗಳ ಪ್ರಕಾರ 230 ಕ್ಷೇತ್ರಗಳಲ್ಲಿ ಬಿಜೆಪಿ 156, ಕಾಂಗ್ರೆಸ್ 65, ಬಿಎಸ್‍ಪಿ 01 ಹಾಗೂ ಇತರರು 01 ಸ್ಥಾನಗಳಲ್ಲಿದ್ದಾರೆ. ಇಲ್ಲಿ ಒಟ್ಟು 2533 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಬಿಜೆಪಿ ಇಲ್ಲಿ ರಣತಂತ್ರ ರೂಪಿಸಿ ನಾಲ್ವರು ಕೇಂದ್ರ ಸಚಿವರನ್ನು ಕೂಡ ವಿಧಾನಸಭಾ ಚುನಾವಣೆಗಿಳಿಸಿದ್ದು, ಅದರಲ್ಲಿ ಮೂವರು ಜಯಗಳಿಸಿದ್ದಾರೆ.

ಕಾಂಗ್ರೆಸ್‍ನ ಮುಖಂಡ ಹಾಗೂ ಮಾಜಿ ಸಿಎಂ ಕಮಲ್‍ನಾಥ್ ಗೆಲುವು ಸಾಧಿಸಿದ್ದರೂ ಕೂಡ ಪಕ್ಷ ಸೋಲು ಕಂಡಿದೆ. ಮಹಿಳಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ನಾವು ಘೋಷಿಸದೆ ಕಡೆಗಣಿಸಿದ ಕಾರಣ ನಮಗೆ ಸೋಲುಂಟಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯ ಶ್ರೀನಾಟಿ ಹೇಳಿದ್ದಾರೆ.

ಇನ್ನು ರಾಜಸ್ಥಾನದಲ್ಲಿ ನಾಯಕರ ಕಚ್ಚಾಟದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕಾನೂನು ಸುವ್ಯವಸ್ಥೆ ಹಾದಿ ತಪ್ಪಿದ್ದು, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಪಕ್ಷಕ್ಕೆ ಮುಳುವಾಗಿದೆ. ಇಲ್ಲಿ ಬಿಜೆಪಿ ನಿರೀಕ್ಷೆಯಂತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದ್ದು, ಆರಂಭಿಕ ಮುನ್ನಡೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 112 ಸ್ಥಾನಗಳಲ್ಲಿ ಮುಂದಿದ್ದು ಮ್ಯಾಜಿಕ್ ನಂಬರ್ 100ನ್ನು ದಾಟುವುದು ನಿಶ್ಚಿತವಾಗಿದೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿಗಳು 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಪಕ್ಷೇತರರು 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಬಿಎಸ್‍ಪಿ 2 ಹಾಗೂ ಇತರರು 2 ಸಾನಗಳಲ್ಲಿ ಮುನ್ನಡೆ ಸಾಸಿದ್ದಾರೆ. ಇದರಲ್ಲಿ ಕೆಲ ಬಂಡಾಯ ಬಿಜೆಪಿ ಅಭ್ಯರ್ಥಿಗಳು ಜಯದ ಕೇಕೆ ಹಾಕಿದ್ದಾರೆ. ಒಟ್ಟಾರೆ ರಾಜಸ್ಥಾನದಲ್ಲಿ ಈಗ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಿಎಂ ಸ್ಥಾನಕ್ಕೆ ವಸುಂಧರಾ ರಾಜೇ ಹೆಸರು ಮುಂಚೂಣಿಯಲ್ಲಿದೆ.

ಕಾಂಗ್ರೆಸ್ ಇಲ್ಲಿ ಪ್ರಬಲ ಪೈಪೋಟಿ ಕಂಡುಬಂದರೂ ಕೂಡ ನಂತರದ ಮತ ಎಣಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಇನ್ನು ಛತ್ತೀಸ್‍ಘಡದಲ್ಲಿ ಆರಂಭದ ಫಲಿತಾಂಶದ ಪ್ರಕಾರ ಬಿಜೆಪಿ ಸರಳ ಬಹುಮತ ಗಳಿಸಿದೆ. ಆದರೆ ಕಾಂಗ್ರೆಸ್ ಕೂಡ ಜಿದ್ದಾಜಿದ್ದಿ ಹೋರಾಟ ನಡೆಸಿದೆ.

ಒಟ್ಟು 90 ಸ್ಥಾನಗಳ ಮತ ಎಣಿಕೆ ಕಾರ್ಯ 33 ಜಿಲ್ಲಾ ಕೇಂದ್ರಗಳಲ್ಲಿಂದು ನಡೆದಿದ್ದು, ಬಿಜೆಪಿ 53, ಕಾಂಗ್ರೆಸ್ 34 ಹಾಗೂ ಇತರರು ಮೂರು ಸ್ಥಾನಗಳಲ್ಲಿ ಮುನ್ನಡೆ ಸಾಸಿದ್ದಾರೆ. ಅಂತಿಮ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಚಿಕ್ಕ ರಾಜ್ಯದಲ್ಲಿ ಕೇವಕಜಕಜಕಜಕಜಲ ಸಾವಿರ ಮತಗಳ ಅಂತರದಲ್ಲೇ ಕೆಲವರ ಸೋಲು-ಗೆಲುವು ನಿರ್ಧಾರವಾಗುತ್ತದೆ. ಛತ್ತೀಸ್‍ಘಡದ ಮುಖ್ಯಮಂತ್ರಿಯಾಗಿರುವ ಭೂಪೇಂದ್ರ ಬಘೇಲ್ ಅವರ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರೂ ಆಡಳಿತ ವಿರೋಧಿ ಅಲೆ ಸ್ವಲ್ಪ ಮಟ್ಟಿಗೆ ತಟ್ಟಿದೆ.

ಛತ್ತೀಸ್‍ಘಡ ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ಡಿಯೋಗೆ ಹಿನ್ನಡೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಬಘೇಲ್ ಅವರಿಗೂ ಕೂಡ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಇಲ್ಲಿ ಪ್ರಬಲ ಪೈಪೋಟಿ ನೀಡಿದೆ. ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‍ಗೆ ಮುನ್ನಡೆ ಎಂದು ಹೇಳಲಾಗುತ್ತಿದ್ದು, ಆದರೆ ಬಿಜೆಪಿ ಗೆಲವಿನ ನಾಗಾಲೋಟದಲ್ಲಿದೆ.

ದಕ್ಷಿಣ ಭಾರತದ ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 10 ವರ್ಷಗಳ ಕಾಲ ಬಿಆರ್‍ಎಸ್‍ನ ಕೆ.ಸಿ.ಚಂದ್ರಶೇಖರ್ ರಾವ್ ಆಡಳಿತ ಕೊನೆಗೊಂಡಿದೆ. ಕರ್ನಾಟಕದಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ತೆಲಂಗಾಣ ಚುನಾವಣಾ ಪ್ರಚಾರಕ್ಕಿಳಿದು ಶತಾಯಗತಾಯ ಕಾಂಗ್ರೆಸ್‍ನ್ನು ಗೆಲ್ಲಿಸಬೇಕೆಂಬ ಛಲ ಕೊನೆಗೂ ಫಲ ನೀಡಿದಂತೆ ಕಾಣುತ್ತಿದೆ.

ಇಲ್ಲಿ ಒಟ್ಟು 119 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು ಕಾಂಗ್ರೆಸ್ ಸರಳ ಬಹುಮತ ಗಳಿಸುವತ್ತ ಮುನ್ನುಗ್ಗಿ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಆರ್‍ಎಸ್ 40 ಕ್ಷೇತ್ರಗಳಲ್ಲಿ, ಬಿಜೆಪಿ 9 ಕ್ಷೇತ್ರಗಳು, ಎಐಎಂಐಎಂ 04 ಕ್ಷೇತ್ರಗಳಲ್ಲಿ ಹಾಗೂ ಸಿಪಿಎಂ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ತೆಲಂಗಾಣದ ಕೊಡಂಗಲ್ ಕ್ಷೇತ್ರದಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಜಯಭೇರಿ ಬಾರಿಸಿದ್ದು, ಮತ್ತೊಂದು ಕ್ಷೇತ್ರದಲ್ಲೂ ಕೂಡ ಮುನ್ನಡೆ ಸಾಧಿಸಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಈಗ ಕೇವಲ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ರೇವಂತ್ ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಸಮಾಧಾನಪಡುವಂತಾಗುತ್ತದೆ. ಬಿಜೆಪಿಗೆ ಮೂರು ರಾಜ್ಯಗಳು ಒಲಿದು ಬೋನಸ್ ಪಡೆದರೆ, ಕಾಂಗ್ರೆಸ್ ಒಂದು ರಾಜ್ಯದಲ್ಲಿ ಅಕಾರ ಚುಕ್ಕಾಣಿ ಹಿಡಿದು ಎರಡು ರಾಜ್ಯಗಳನ್ನು ಕಳೆದುಕೊಂಡಂತಾಗಿದೆ.

ಗ್ಯಾರಂಟಿ ಉಚಿತ ಯೋಜನೆಗಳು ಅಷ್ಟಾಗಿ ಸದ್ದು ಮಾಡಿಲ್ಲ. ಅಭಿವೃದ್ಧಿ ಮತ್ತು ಜನಕಲ್ಯಾಣ ಭರವಸೆಗಳು ಜನರ ಮನಸ್ಸನ್ನು ತಟ್ಟಿದೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಬಲಗೊಂಡರೆ ಉತ್ತರ ಹಾಗೂ ಮಧ್ಯ ಭಾರತದಲ್ಲಿ ಬಿಜೆಪಿ ಶಕ್ತಿ ವೃದ್ಧಿಸಿಕೊಂಡಿದೆ.

RELATED ARTICLES

Latest News