Friday, April 26, 2024
Homeಅಂತಾರಾಷ್ಟ್ರೀಯಬಾಂಗ್ಲಾ ಸಾರ್ವತ್ರಿಕ ಚುನಾವಣೆ, ಬಿಗಿ ಭದ್ರತೆ ನಡುವೆ ಮತದಾನ

ಬಾಂಗ್ಲಾ ಸಾರ್ವತ್ರಿಕ ಚುನಾವಣೆ, ಬಿಗಿ ಭದ್ರತೆ ನಡುವೆ ಮತದಾನ

ಢಾಕಾ, ಜ.7- ಪ್ರಮುಖ ಪ್ರತಿಪಕ್ಷವಾದ ಬಿಎನ್‍ಪಿ ಬಹಿಷ್ಕಾರದ ನಡುವೆಯೂ ಬಾಂಗ್ಲಾದೇಶದಲ್ಲಿ ಇಂದು ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುತ್ತಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ನಡೆಯಲಿದೆ.

ಬಾಂಗ್ಲಾ ಚುನಾವಣಾ ಆಯೋಗದ ಪ್ರಕಾರ, ಒಟ್ಟು 119 ಕೋಟಿ ಮತದಾನದ ಹಕ್ಕು ಪಡೆದಿದ್ದು 42,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 1 ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರು ಮೃತಪಟ್ಟಿದ್ದರಿಂದ ಚುನಾವಣೆ ಮುಂದೂಡಲಾಗಿದೆ.436 ಸ್ವತಂತ್ರ ಅಭ್ಯರ್ಥಿಗಳಲ್ಲದೆ 27 ರಾಜಕೀಯ ಪಕ್ಷಗಳಿಂದ 1,500 ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಕನ್ನಡ ನಾಡಿನ ಅಸ್ಮಿತೆಗೆ ಹೆಸರಾದ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ : ಸಚಿವ ಎಂ.ಬಿ.ಪಾಟೀಲ

ಭಾರತದ ಮೂವರು ಸೇರಿದಂತೆ 100 ಕ್ಕೂ ಹೆಚ್ಚು ವಿದೇಶಿ ವೀಕ್ಷಕರು ಬಿಗಿ ಭದ್ರತೆಯಲ್ಲಿ ನಡೆಯುತ್ತಿರುವ 12 ನೇ ಸಾರ್ವತ್ರಿಕ ಚುನಾವಣೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಚುನಾವಣೆ ಬಹಿಷ್ಕರಿಸುತ್ತಿರುವ ಪ್ರಮುಖ ಪ್ರತಿಪಕ್ಷವಾದ ಬಿಎನ್‍ಪಿ ಅನುಪಸ್ಥಿತಿಯಲ್ಲಿ ಮತ್ತೆ ಪ್ರಧಾನಿಯಾಗಿ ಶೇಖ್ ಹಸೀನಾ ಅವರು ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ನಾಳೆ ಮತೆಣಿಕೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗ ಹೇಳಿದ್ದು 76 ವರ್ಷದ ಹಸೀನಾ ಅವರು 2009 ರಿಂದ ಅಧಿಕಾರದಲ್ಲಿದ್ದಾರೆ ಆಡಳಿತಾರೂಢ ಅವಾಮಿ ಲೀಗ್ ನೇರವಾಗಿ ನಾಲ್ಕನೇ ಬಾರಿಗೆ ಗೆಲ್ಲುವ ನಿರೀಕ್ಷೆಯಿದೆ, ಮುಖ್ಯ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಮಾಜಿ ಪ್ರಧಾನಿ ಖಲೀದಾ ಜಿಯಾ, 78, ಭ್ರಷ್ಟಾಚಾರ ಆರೋಪದ ಅಪರಾ„ಯಾಗಿ ಗೃಹಬಂಧನದಲ್ಲಿದ್ದು, ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

RELATED ARTICLES

Latest News