ಐತಿಹಾಸಿಕ ನಿರ್ಣಯಗಳಿಂದ ಪ್ರಧಾನಿ ಮೋದಿ ದೇಶ ಉಳಿಸುವ ಕೆಲಸ ಮಾಡಿದ್ದಾರೆ’ ; ಬೈರತಿ ಬಸವರಾಜ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪುರ, ಜೂ.13- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಭಾರತ ದೇಶ ಉಳಿಸುವ ಕೆಲಸ ಮಾಡಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ -19 ಭಾರತಕ್ಕೆ ಎಂಟ್ರಿ ಕೊಟ್ಟ ನಂತರ ಇತರ ದೇಶಗಳಿಂದ ಹರಡುತ್ತಿದ್ದ ವೈರಸ್‍ನಿಂದ ಭಾರತವನ್ನು ಉಳಿಸುವ ಕೆಲಸ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದರು.

ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ ಯೋಜನೆಯಡಿ 1 ಕೋಟಿಗೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದರೆ, ಅಟಲï ಪೆನ್ಷನ್ ಯೋಜನೆಯಡಿ ಕಳೆದ 5 ವರ್ಷಗಳಿಂದ 2.23 ಕೋಟಿ ಮಂದಿಯ ನೋಂದಣಿಯಾಗಿದೆ ಎಂದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 16.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸಹಾಯಧನ ನೀಡಲಾಗಿದೆ. ಅಟಲï ಭೂಜಲ ಯೋಜನೆಯಡಿ 7 ರಾಜ್ಯಗಳ 8350 ಹಳ್ಳಿಗಳು ಪ್ರಯೋಜನ ಪಡೆದಿವೆ ಎಂದು ಹೇಳಿದರು.

5 ತಿಂಗಳು ಪ್ರತಿ ಕುಟುಂಬಕ್ಕೆ 5 ಕೆ.ಜಿ ಗೋಧಿ 1 ಕೆಜಿ ಅಕ್ಕಿ, ಬೇಳೆ ಉಚಿತವಾಗಿ ಕೊಡಲಾಗುತ್ತಿದೆ. ಹಾಗೂ ಜನಧನ್ ಯೋಜನಡಿ 20 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 500 ರೂ. ನೀಡಲಾಗುತ್ತಿದೆ ಎಂದರು. ನಗರಾಭಿವೃದ್ಧಿ ಇಲಾಖೆಯಲ್ಲಿ ರಾಜ್ಯದ 10 ಮಹಾನಗರ ಪಾಲಿಕೆಗಳ ಪೈಕಿ 8 ಮಹಾನಗರ ಪಾಲಿಕಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಲಾಗಿದೆ.

ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಲ್ಲಿ 758 ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು , ನಿಗಧಿತ ಸಮಯದಲ್ಲಿ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಎಲï ಇಡಿ ಬೀದಿ ದೀಪ ಗಳನ್ನು ಅಳವಡಿಕೆ, ಕ್ರಮವಹಿಸ ಲಾಗುತ್ತಿದೆ. 6 ಮಹಾನಗರ ಪಾಲಿಕೆಗಳಾದ ಬೆಳಗಾವಿ, ಕಲಬುರಗಿ, ಬಳ್ಳಾರಿ, ಹುಬ್ಬಳ್ಳಿ – ಧಾರವಾಡ , ವಿಜಯಪುರ ಮತ್ತು ತುಮಕೂರು ಗಳಿಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಪ್ರತಿ ಪಾಲಿಕೆಗೆ 125,00 ಕೋಟಿ ರೂ.ಗಳ ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸಿ ಅನುಮೋದಿಸಲಾಗಿದೆ ಎಂದರು. ಜಿಲ್ಲಾಧ್ಯಕ್ಷ ನಾರಾಯಣ್, ಉಪಾಧ್ಯಕ್ಷ ಮುನೇಗೌಡ, ಕ್ಷೇತ್ರಾಧ್ಯಕ್ಷ ಶಿವರಾಜï, ಮುಖಂಡ, ಅಂತೋಣಿ ಸ್ವಾಮಿ ಇದ್ದರು.

Facebook Comments