ಜ್ವರದಿಂದ ಬಳಲುತ್ತಿದ್ದ ಉದ್ಯಮಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.10- ತೀವ್ರ ಜ್ವರದಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ತಾವು ವಾಸವಾಗಿದ್ದ ಅಪಾರ್ಟ್‍ಮೆಂಟ್‍ನಲ್ಲೇ ಮೃತಪಟ್ಟಿರುವ ಘಟನೆ ಸುಬ್ರಹ್ಮಣ್ಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಿಲೀಪ್‍ಕುಮಾರ್ (35) ಮೃತಪಟ್ಟ ಉದ್ಯಮಿ.

ನೆಲಮಂಗಲದ ಬಳಿ ದಿಲೀಪ್‍ಕುಮಾರ್ ಅವರು ಪೆಟ್ರೋಲ್ ಬಂಕ್ ಇಟ್ಟುಕೊಂಡಿದ್ದು, ಬ್ರಿಗೇಡ್ ಗೇಟ್‍ವೇ ಅಪಾರ್ಟ್‍ಮೆಂಟ್‍ನ ಫ್ಲಾಟ್‍ವೊಂದರಲ್ಲಿ ವಾಸವಾಗಿದ್ದರು. ಪತ್ನಿ ಇತ್ತೀಚೆಗೆ ತವರಿಗೆ ಹೋಗಿದ್ದರು. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಇವರು ಸ್ವಯಂ ಮಾತ್ರೆ ಹಾಗೂ ಔಷಧಿ ತೆಗೆದುಕೊಂಡು ಮನೆಯಲ್ಲೇ ಇದ್ದರು. ದಿಲೀಪ್‍ಕುಮಾರ್ ಅವರಿಗೆ ಸಹೋದರ ಊಟ ತಂದು ಕೊಡುತ್ತಿದ್ದರು.

ಇಂದು ಬೆಳಗ್ಗೆ ಪೆಟ್ರೋಲ್ ಬಂಕ್ ನೌಕರ ಇವರ ಮನೆಗೆ ಬಂದು ಕಾಲಿಂಗ್‍ಬೆಲ್ ಒತ್ತಿದಾಗ ಬಾಗಿಲು ತೆಗೆದಿಲ್ಲ. ಅನುಮಾನಗೊಂಡ ನೌಕರ ದಿಲೀಪ್‍ಕುಮಾರ್ ಅವರ ತಂದೆ ಮನೆಗೆ ಹೋಗಿ ಕೀ ತೆಗೆದುಕೊಂಡು ಬಂದು ಬಾಗಿಲು ತೆಗೆದು ನೋಡಿದಾಗ ಮಂಚದಿಂದ ಕೆಳಗೆ ಬಿದ್ದು ಮೃತಪಟ್ಟಿರುವುದು ಕಂಡುಬಂದಿದೆ.  ತಕ್ಷಣ ದಿಲೀಪ್‍ಕುಮಾರ್ ಅವರ ಸಹೋದರ ಹಾಗೂ ಇವರ ತಂದೆಗೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೋ ಅಥವಾ ಕೊರೊನಾದಿಂದ ಮೃತಪಟ್ಟಿದ್ದಾರೋ ಎಂಬುದು ವೈದ್ಯಕೀಯ ಪರೀಕ್ಷೆ ನಂತರವಷ್ಟೇ ತಿಳಿದುಬರಲಿದೆ.

Facebook Comments