ಎಎಸ್‍ಐ ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಥಳಿತ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ,ಸೆ.21- ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಎಸ್‍ಐ ಅವರನ್ನು ಕಂಬಕ್ಕೆ ಕಟ್ಟಿ ಸಂಬಂಧಿಕರೇ ಥಳಿಸಿ ರುವ ಘಟನೆ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಮಾಯಕೊಂಡ ಹೋಬಳಿ ಯಲ್ಲಿ ಈ ಘಟನೆ ನಡೆದಿದ್ದು, ಓಬಳೇಶ್ ಥಳಿತಕ್ಕೊಳಗಾದ ಎಎಸ್‍ಐ.

ಗಣೇಶ ವಿಸರ್ಜನೆಯ ಬಂದೋಬಸ್ತ್‍ಗೆ ಓಬಳೇಶ್ ಬಂದಿದ್ದಾಗ ಇಲ್ಲಿನ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂದು ಮಹಿಳೆಯ ಸಂಬಂಧಿಕರು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ವಿಷಯ ತಿಳಿದ ಮಾಯಕೊಂಡ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರನ್ನು ಸಮಾಧಾನಪಡಿಸಿ ಗಾಯಗೊಂಡಿದ್ದ ಓಬಳೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

Facebook Comments