ಉಳುವ ಯೋಗಿಗೆ ಒಲಿದ ಅದೃಷ್ಟ, ಅನ್ನದಾತನ ಬಾಳು ಬೆಳಗಿದ ವಜ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ತಿರುಪತಿ, ಜು.23- ಭೂಮಿ ತಾಯಿ ನಂಬಿದರೆ ಎಂದೂ ಕೈ ಬಿಡಲ್ಲ ಎಂಬ ಗಾದೆ ಮಾತು ಎಷ್ಟು ಸತ್ಯವೋ, ಮಿತ್ಯವೋ ಗೊತ್ತಿಲ್ಲ… ಆದ್ರೆ ಇಲ್ಲಿ ಉಳುವ ಭೂಮಿಯಲ್ಲಿ ವಜ್ರಗಳು ದೊರೆತಿರುವುದು ರೈತರ ಅದೃಷ್ಟವನ್ನೇ ಖುಲಾಯಿಸಿದೆ.

ಆಂಧ್ರದ ಕರ್ನೂಲ್ ಜಿಲ್ಲೆಯ ಗೋಲವನೆಪಲ್ಲಿಯ ಭೂಮಿಯೊಂದರಲ್ಲಿ ರೈತನಿಗೆ 60 ಲಕ್ಷ ಬೆಲೆಬಾಳುವ ವಜ್ರವೊಂದು ಸಿಕ್ಕಿದ್ದು ಅದನ್ನು ಅವನು ಸ್ಥಳೀಯ ಚಿನ್ನದ ವ್ಯಾಪಾರಿ ಅಲ್ಲಾ ಬಕ್ಷ್ ಎಂಬುವವರಿಗೆ 5 ತೊಲಾ ಚಿನ್ನ ಹಾಗೂ 13.5 ಲಕ್ಷಕ್ಕೆ ಮಾರಾಟ ಮಾಡಿದ್ದಾನೆ.

ರೈತನಿಗೆ ವಜ್ರ ಸಿಕ್ಕಿದ್ದು ಹಾಗೂ ಅವನು ವ್ಯಾಪಾರಿಗೆ ಮಾರಾಟ ಮಾಡಿದ ವಿಷಯ ಕಾಳ್ಗಿಚ್ಚಿನಂತೆ ಹರಡಿದ್ದು ಸ್ಥಳೀಯ ಪೊಲೀಸರು ಆ ವಜ್ರವನ್ನು ವಶಕ್ಕೆ ಪಡೆದುಕೊಂಡು ವಜ್ರದ ನಿಖರವಾದ ತೂಕ, ಬಣ್ಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.  ಆಂಧ್ರದ ರಾಯಸೀಮೆಯ ಭೂಮಿಯಲ್ಲಿ ವಜ್ರ ದೊರೆಕುತ್ತಿರು ವುದು ಇದೇ ಮೊದಲಲ್ಲ, ಜೂನ್ 12 ರಂದು ಜೊನ್ನಗಿರಿ ಗ್ರಾಮದಲ್ಲಿ ಕುರಿಹಾಯಿಯೊಬ್ಬ ಕುರಿಗಳನ್ನು ಮೇಯಿಸುತ್ತಿದ್ದಾಗಲೂ ಅವನಿಗೆ ಗೋಲ್ಕಂಡ ಜಾತಿಗೆ ಸೇರಿದ 8 ಕ್ಯಾರೆಟ್ ವಜ್ರ ದೊರಕಿದ್ದು ಅದನ್ನು ಅವನು 20 ಲಕ್ಷ (ಅದರ ನಿಖರ ಬೆಲೆ 50 ಲಕ್ಷ)ಕ್ಕೆ ಮಾರಾಟ ಮಾಡಿದ್ದ.

ಆಂಧ್ರಪ್ರದೇಶದ ಬಹುತೇಕ ಜಾಮೀನುಗಳಲ್ಲಿ ಹಾಗೂ ತುಂಗಭದ್ರಾ, ಹುಂಡೇರಿ, ಕೃಷ್ಣ ನದಿ ತೀರಗಳಲ್ಲಿ ಮಳೆಗಾಲದಲ್ಲಿ ವಜ್ರಗಳು ದೊರಕುತ್ತವೆ ಎಂಬ ಮಾತುಗಳು ದಟ್ಟವಾಗಿ ಹರಡಿದ್ದು ಅದರ ಹುಡುಕಾಟಕ್ಕಾಗಿ ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಗಳಿಂದಲೂ ವಜ್ರಗಳ ಹುಡುಕಾಟಕ್ಕೆ ಬರುತ್ತಿದ್ದಾರೆ.

ಅದರಲ್ಲೂ ಕಾರ್ನೂಲ್ ಜಿಲ್ಲೆಯ ಜೊನ್ನಗಿರಿ, ಟುಗಾಲಿ, ಮಡ್ಡಿಕೇರಾ, ಪಗಿಡಿರೈ, ಪೇರಾವಾಲಿ, ಮಹಾನಂದಿ, ಮಹಾದೇವಪುರಗಳಲ್ಲಿ ವಜ್ರಗಳು ಮಳೆಗಾಲದಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿವೆ.

ಶ್ರೀ ಕೃಷ್ಣದೇವರಾಯ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಶ್ರೀವಲ್ಲಿಯ ಸರ್ವನರಸಿಂಹ ದೇಗುಲದ ಸುತ್ತಮುತ್ತಲ ಪ್ರದೇಶಗಳಲ್ಲಿ ತನ್ನ ವಜ್ರದ ಸಂಪತ್ತನ್ನು ಶೇಖರಿಸಿಟ್ಟಿದ್ದರು ಅವು ಈಗ ಮಳೆಗಾಲದಲ್ಲಿ ದೊರೆಯುತ್ತಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

Facebook Comments