ಬಯಲಿನಲ್ಲಿ ಶೌಚ ಮಾಡುತ್ತಿದ್ದವನಿಗೆ ಬುದ್ಧಿ ಕಲಿಸಿದ ಗಜರಾಜ…!

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ, ಏ.26- ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ವನ್ಯಜೀವಿಗಳು ಬೆಂಬಲ ನೀಡುತ್ತೀವೆಯೆನೋ ಎಂದು ಭಾಸವಾಗವಂತಹ ಘಟನೆಯೊಂದು ನಡೆದಿದೆ. ಬಯಲಿನಲ್ಲಿ ಶೌಚ ಮಾಡುತ್ತಿದ್ದ ರೈತನೊಬ್ಬನನ್ನು ಕಂಡು ಕೋಪಗೊಂಡ ಆನೆ ಆತನನ್ನು ತನ್ನ ಸೊಂಡಲಿನಿಂದ ಸುತ್ತಿಕೊಂಡು 50 ಮೀಟರ್ ದೂರ ಎಳೆದೊಯ್ದು ದೂರಕ್ಕೆಸೆದ ಪ್ರಕರಣ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಮುಂಜಾನೆ ನಿರಂಜನ್ ಸಶೀಹ್ ಎಂಬಾತ ಪುರುಲಿಯಾದ ಅಯೋಧ್ಯಾ ಹಿಲ್ಸ್ ಬಳಿಯ ಹಳ್ಳಿಯಲ್ಲಿರುವ ತನ್ನ ಮನೆ ಬಳಿ ಬಯಲು ಶೌಚ ಮಾಡುತ್ತಿದ್ದ.

ಈ ವೇಳೆ ಹಿಂದಿನಿಂದ ಬಂದ ಆನೆಯೊಂದು ತನ್ನ ಸೊಂಡಲಿನಿಂದ ಆತನನ್ನು ಸುತ್ತಿಕೊಂಡಿದೆ. ಅಲ್ಲಿಂದ 50 ಮೀಟರ್ ದೂರದವರೆಗೆ ಓಡಿ ಹೋಗಿ ಎಸೆದು ಅಲ್ಲಿಂದ ಅರಣ್ಯದೆಡೆ ಓಡಿ ಹೋಗಿದೆ.

ಈ ವೇಳೆ ರೈತನ ಕಾಲು ಹಾಗೂ ಬೆನ್ನಿಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಪ್ರಾಥಮಿಕ ಚಿಕಿತ್ಸೆ ಪಡೆದು ಹುಷಾರಾಗಿರುವ ನಿರಂಜನ್, ಈ ಬಗ್ಗೆ ಪ್ರತಿಕ್ರಿಯಿಸಿದ್ದು ಮೊದಲಿಗೆ ನಾನು ಸಾಯುತ್ತೇನೆ ಎಂದು ಭಾವಿಸಿದ್ದೆ. ಆ ವೇಳೆ ನನ್ನನ್ನು ಕಾಪಾಡು ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದೆ. ಆನೆ ನನ್ನನ್ನು ಬಿಟ್ಟಿದ್ದೇ ತಡ ಜೀವ ಬಂದಂತಾಯ್ತು ಎಂದು ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ