Friday, April 26, 2024
Homeಬೆಂಗಳೂರುಅತ್ತಿಬೆಲೆ ಪಟಾಕಿ ದುರಂತದಲ್ಲಿ ಒಂದೇ ಗ್ರಾಮದ 8 ವಿದ್ಯಾರ್ಥಿಗಳು ಸಾವು

ಅತ್ತಿಬೆಲೆ ಪಟಾಕಿ ದುರಂತದಲ್ಲಿ ಒಂದೇ ಗ್ರಾಮದ 8 ವಿದ್ಯಾರ್ಥಿಗಳು ಸಾವು

ಅತ್ತಿಬೆಲೆ, ಅ.8- ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂದೇ ಗ್ರಾಮದ 8 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಅವರ ಭವ್ಯ ಭವಿಷ್ಯ ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ. ದೀಪಾವಳಿ ಸಂದರ್ಭದಲ್ಲಿ ತಮಿಳುನಾಡಿನ ಶಿವಕಾಶಿ, ಧರ್ಮಪುರಿಯಿಂದ ಕಾರ್ಮಿಕರು ಬೆಂಗಳೂರಿನ ಗಡಿ ಭಾಗದ ಆನೇಕಲ್, ಅತ್ತಿಬೆಲೆ ಪ್ರದೇಶಕ್ಕೆ ಒಂದು ತಿಂಗಳ ಮುಂಚಿತವಾಗಿ ಬಂದು ನೆಲೆಸಿ ಪಟಾಕಿ ದಾಸ್ತಾನು ಹಾಗೂ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ.

ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಾಲ್ಕು ಕಾಸು ಹಣ ಸಂಪಾದಿಸಬಹುದೆಂದು ಹಾಗೂ ವಿದಾಭ್ಯಾಸಕ್ಕಾಗಿ ಹಣ ಹೊಂದಿಸಲೆಂದು ಧರ್ಮಫುರಿ ಜಿಲ್ಲೆಯ ಅಮ್ಮಾಪಟ್ಟಿ ಗ್ರಾಮದಿಂದ ಹತ್ತು ಜನ ವಿದ್ಯಾರ್ಥಿಗಳು ಬಂದಿದ್ದು, ಇದರಲ್ಲಿ ಎಂಟು ಜನರು ಸಜೀವವಾಗಿ ದಹನಗೊಂಡಿರುವುದು ದುರಾದೃಷ್ಟಕರ.

ಲೋಕಸಭೆ ಚುನಾವಣೆ : ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಹೈಕಮಾಂಡ್‍ಗೆ ರವಾನೆ

ಪಿಯುಸಿ ಹಾಗೂ ಪದವಿ ಓದುತ್ತಿದ್ದ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ದೃಷ್ಟಿಯಿಂದ ಕಷ್ಟಪಟ್ಟು ದುಡಿದು ಫೋಷಕರಿಗೆ ಹೊರೆಯಾಗದಂತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂಬ ಮಹದಾಸೆಯಿಂದ ಇಲ್ಲಿಗೆ ಬಂದಿದ್ದು, ಇವರ ದೇಹದ ಜೊತೆ ಅವರು ಕನಸುಗಳು ಸಹ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.

ನನ್ನ ಮಗ ಪೊಲೀಸ್ ಆಫೀಸರ್ ಆಗಬೇಕೆಂದು ದೊಡ್ಡ ಕನಸು ಹೊಂದಿದ್ದು, ಇದಕ್ಕಾಗಿ ಎಲ್ಲಾ ತಯಾರು ಮಾಡಿಕೊಳ್ಳುತ್ತಿದ್ದ, ಓದಿನಲ್ಲೂ ಸಹ ಮುಂದಿದ್ದ, ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಸಲು ಕೂಲಿ ಕೆಲಸಕ್ಕೆ ಕಳೆದ ವಾರವಷ್ಟೇ ಅತ್ತಿಬೆಲೆಗೆ ಬಂದಿದ್ದ, ದಿನಕ್ಕೆ 600 ರೂ. ಕೂಲಿ ಪಡೆಯುತ್ತಿದ್ದ, ಆದರೆ ಈ ದುರಂತ ನನ್ನ ಮಗನ ಹಾಗೂ ನಮ್ಮ ಕನಸನ್ನು ನುಚ್ಚುನೂರು ಮಾಡಿದೆ ಎಂದು ಮೃತನ ತಾಯಿಯೊಬ್ಬರು ಕಣ್ಣೀರಿಟ್ಟು ಗೋಳಾಡುತ್ತಿದ್ದ ದೃಶ್ಯ ಆಸ್ಪತ್ರೆಯ ಮುಂದೆ ಕಂಡು ಬಂತು.

ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ನಿವಾಸದ ಮೇಲೆ ಸಿಬಿಐ ದಾಳಿ

ಮೃತದೇಹ ಹಸ್ತಾಂತರ: ಬೆಂಕಿ ಅವಘಡದಲ್ಲಿ ಮೃತಪಟ್ಟವರ ಪಾರ್ಥಿವ ಶರೀರವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಅತ್ತಿಬೆಲೆಯ ಅಕ್ಸ್‍ಪರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗುರುತುಗಳನ್ನು ಪತ್ತೆ ಹಚ್ಚಿ ಮಾಹಿತಿಯನ್ನು ಪಡೆದು ಆಯಾಯ ಕುಟುಂಬಸ್ಥರಿಗೆ ಆಸ್ಪತ್ರೆಯ ಸಿಬ್ಬಂದಿಗಳು ಹಸ್ತಾಂತರಿಸಿದರು.

ನಿನ್ನೆ ಸಂಜೆಯಿಂದಲೇ ಆಸ್ಪತ್ರೆ ಬಳಿ ಕುಟುಂಬ ಸದಸ್ಯರು ಜಮಾಯಿಸಿ ತಮ್ಮವರ ಮುಖ ನೋಡಲು ಬಾರಿ ಒತ್ತಡ ಹೇರಿದ್ದು, ದುಃಖದ ಕಟ್ಟೆಯೊಡೆದು ಆಕ್ರಂದನ ಮುಗಿಲು ಮುಟ್ಟಿತ್ತು. ಇವರನು ಸಮಾಧಾನ ಮಾಡಲು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಪೊಲೀಸರು ಸಂಬಂಧಪಟ್ಟ ಇಲಾಖೆ ಅಕಾರಿಗಳು ಹರಸಾಹಸ ಪಡಬೇಕಾಯಿತು. ಮೃತ ದೇಹವು ಕೈ ಸೇರುತ್ತಿದ್ದಂತೆ ಕುಟುಂಬರ ರೋಧನೆ ಮತ್ತಷ್ಟು ಹೆಚ್ಚಾಗಿ ಈ ದೃಶ್ಯ ಕರುಳು ಹಿಂಡುವಂತಿತ್ತು.

RELATED ARTICLES

Latest News