ಸಹೋದರಿ ಮಾಂಗಲ್ಯ ಸರ ಕದ್ದಿದ್ದ ಅಣ್ಣನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.13- ಸಹೋದರಿಯ ಮಾಂಗಲ್ಯ ಸರ ಕಳವು ಮಾಡಿದ್ದ ಅಣ್ಣನನ್ನು ನಗರದ ನಜರ್‍ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ನಗರದ ಹೂಟಗಳ್ಳಿಯ ಕೆಎಚ್‍ಬಿ ಕಾಲೋನಿ ವಾಸಿ ಎಸ್.ಸಂತೋಷ್ ಕುಮಾರ್ (33) ಬಂಧಿತ ಆರೋಪಿಯಾಗಿದ್ದು, ಈತನಿಂದ 3.50 ಲಕ್ಷ ರೂ. ಮೌಲ್ಯದ 70 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.

ಸಹೋದರಿ ತನ್ನ ಅಣ್ಣನ ಜೊತೆಯಲ್ಲಿ ಜೂ ಮುಂಭಾಗ ಇರುವ ಬಟ್ಟೆ ಅಂಗಡಿಗೆ ಬಂದಿದ್ದು, ಮರಳಿ ಮನೆಗೆ ಹೋಗಿ ತನ್ನ ವ್ಯಾನಿಟಿ ಬ್ಯಾಗ್ ನೋಡಲಾಗಿ, ವ್ಯಾನಿಟಿ ಬ್ಯಾಗ್‍ನಲ್ಲಿದ್ದ 70 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳುವಾಗಿರುವುದು ಗಮನಿಸಿ ನಜರ್‍ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ತನಿಖೆ ಕೈಗೊಂಡ ನಜರ್‍ಬಾದ್ ಪೊಲೀಸರು, ವ್ಯಾನಿಟಿ ಬ್ಯಾಗನ್ನು ತನ್ನ ಅಣ್ಣನಿಗೆ ನೀಡಿದ್ದ ಬಗ್ಗೆ ಸಹೋದರಿ ಮಾಹಿತಿ ನೀಡಿದ್ದರು. ಈ ಸಂಬಂಧ ಸಹೋದರಿ ಅಣ್ಣ ಸಂತೋಷ್‍ಕುಮಾರ್‍ನನ್ನು ನ.12ರಂದು ಹಿನಕಲ್ ಸಿಗ್ನಲ್ ಬಳಿ ಪತ್ತೆ ಮಾಡಿ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದರು.

ಈ ಸಂದರ್ಭದಲ್ಲಿ ತನ್ನ ತಂಗಿಯು ವ್ಯಾನಿಟಿ ಬ್ಯಾಗನ್ನು ತನ್ನ ಬಳಿ ಕೊಟ್ಟಿದ್ದಾಗ, ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಪೊಲೀಸರು ರೂ. 3,50,000 ಮೌಲ್ಯದ 70 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ಡಿ.ಸಿ.ಪಿ. ಗೀತಪ್ರಸನ್ನ ಹಾಗೂ ದೇವರಾಜ ವಿಭಾಗದ ಎ.ಸಿ.ಪಿ. ಶಶಿಧರ್ರವರ ನೇತೃತ್ವದಲ್ಲಿ ನಜರ್ಬಾದ್ ಠಾಣಾ ಪೊಲೀಸ್ ಇನ್‍ಸ್ಪೆಕ್ಟರ್ ಜಿ.ಎನ್.ಶ್ರೀಕಾಂತ್, ಪಿಎಸ್‍ಐ ಎಂ.ಎಲ್. ಸಿದ್ದೇಶ್, ಎಎಸ್‍ಐ ಕೃಷ್ಣ ಹಾಗೂ ಸಿಬ್ಬಂದಿಗಳಾದ ಮಧುಕೇಶ್.ಎಚ್.ವಿ., ಪ್ರಕಾಶ್.ಬಿ.ವಿ, ಚೇತನ್ .ಪಿ, ಸಂದೇಶ್ ಕುಮಾರ್, ಕಿರಣ್ ರಾಥೋಡ್, ಚೇತನ್.ಎಚ್.ಎಸ್. ಸೌಮ್ಯ ಅವರುಗಳು ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments