ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11- ಕೊರೊನಾ 4.0 ರಲ್ಲಿ ತನ್ನ ಬೇಡಿಕೆಯನ್ನು ಕಳೆದುಕೊಂಡಿದ್ದ ಚಿನ್ನಕ್ಕೆ ಮತ್ತೆ ಬೇಡಿಕೆ ಬಂದಿದೆ.4.0ರ ವೇಳೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 932 ಇಳಿಕೆಯಾಗಿತ್ತು, ಆದರೆ ಗ್ರಾಹಕರು ಮತ್ತೆ ಚಿನ್ನವನ್ನು ಕೊಳ್ಳಲು ಆಸಕ್ತಿ ತೋರಿರುವುದರಿಂದ ಹಳದಿ ಲೋಹದ ಬೆಲೆಯಲ್ಲೂ ಏರಿಕೆ ಖಂಡಿದೆ.

ಇಂದು 10 ಗ್ರಾಂ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 450 ರೂ. ಏರಿಕೆ ಆಗಿರುವುದರಿಂದ ಪ್ರಸ್ತುತ ಬೆಲೆ ಕ್ರಮವಾಗಿ 44,250 ಹಾಗೂ 48,230 ರಷ್ಟಿದೆ.

ಜೂನ್ 1 ರಂದು ಚಿನ್ನದ ಬೆಲೆ 90 ರೂ. ಹೆಚ್ಚಳವಾಗಿತ್ತಾದರೂ ನಂತರ ಅದರ ಬೆಲೆ ಕುಸಿದಿತ್ತು. ಆದರೆ ಗ್ರಾಹಕರು ಚಿನ್ನ ಕೊಳ್ಳಲು ಮನಸ್ಸು ಮಾಡಿದ್ದರಿಂದ ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆಯು ಗಗನಮುಖಿಯಾಗಿದೆ.

ಇನ್ನೂ ಬೆಳ್ಳಿಯ ಬೆಲೆಯು ಹೆಚ್ಚಾಗಿದ್ದು ಕೆಜಿ ಬೆಳ್ಳಿ ಕೊಳ್ಳಲು 48,300 ರೂ. ವ್ಯಯಿಸಬೇಕಾಗಿದೆ. ಹಣದುಬ್ಬರ, ಬಡ್ಡಿ ದರ, ಜ್ಯೂವೆಲರಿ ಮಾರುಕಟ್ಟೆ ಸೇರಿದಂತೆ ಹಲವಾರು ವಿಷಯಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಉಂಟಾಗುತ್ತಿವೆ.

Facebook Comments