ಮೆರವಣಿಗೆಯಲ್ಲಿ ಟಪ್ಪಂಗುಚ್ಚಿ ಸ್ಟೆಪ್ ಹಾಕಿದ ಸಚಿವ ಜಿ.ಟಿ.ದೇವೇಗೌಡ..! (Video)

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಮೇ 7- ಬಸವ ಜಯಂತಿ ಅಂಗವಾಗಿ ನಗರದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ವೃತ್ತದ ಬಳಿಯಿರುವ ಬಸವೇಶ್ವರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇಂದು ಮಾಲಾರ್ಪಣೆ ಮಾಡಿದರು.

ಇವರೊಂದಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಅನಂತರ ಆರಂಭಗೊಂಡ ಮೆರವಣಿಗೆಯಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರು ವಾದ್ಯವೃಂದದೊಂದಿಗೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.

ಜಿ.ಟಿ.ದೇವೇಗೌಡ ಅವರು ದಸರಾ ಉದ್ಘಾಟನಾ ಸಂದರ್ಭದಲ್ಲಿ ನೃತ್ಯ ಹಾಗೂ ಕ್ರೀಡಾಕೂಟದಲ್ಲಿ ಓಡುವ ಮೂಲಕ ಚಾಲನೆ ನೀಡಿದರು. ಅಲ್ಲದೆ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ನರ್ತಿಸಿ ಎಲ್ಲರ ಗಮನಸೆಳೆದರು.

ಈ ವೇಳೆ ಮಾತನಾಡಿದ ಅವರು, ನಾಡಿಗೆ ಬಸವೇಶ್ವರರ ಕೊಡುಗೆ ಅಪಾರ. ಪ್ರತಿಯೊಬ್ಬರು ಅವರ ತತ್ವ ಆದರ್ಶ ಪಾಲಿಸಬೇಕೆಂದು ಕರೆ ನೀಡಿದರು.
ಬಸವ ಜಯಂತಿ ಅಂಗವಾಗಿ ಜನತೆಗೆ ಶುಭ ಕೋರಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ