ನಿಮಗೆ ನಿಶಕ್ತಿ, ಸುಸ್ತು ಅನಿಸ್ತಿದೆಯಾ..? ಅದಕ್ಕೆ ಕಾರಣಗಳು ಇಲ್ಲಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ನಮಗೆಲ್ಲರಿಗೂ ಆಗಾಗ ಸ್ವಲ್ಪ ಸುಸ್ತಾಗುವುದು ನಾರ್ಮಲ್. ಒಂದು ನಿದ್ದೆ ಮಾಡೆದ್ದರೆ ಫ್ರೆಶ್ ಆಗಿ ಬಿಡುತ್ತೇವೆ.  ಇಡೀ ದಿನ ಸುಸ್ತೋ ಸುಸ್ತು ಎನಿಸುತ್ತಿದ್ದರೆ ಅದರ ಹಿಂದೆ ಗಂಭೀರ ಕಾರಣಗಳಿರಬಹುದು. ಅದು ನಿಮ್ಮ ಆರೋಗ್ಯದ ಬಗ್ಗೆ ಏನನ್ನೋ ಹೇಳುತ್ತಿರಬಹುದು.  ಅವರಿಗೆ ಎಷ್ಟು ನಿದ್ದೆ ಮಾಡೆದ್ದರೂ ಸುಸ್ತು ಹೋಗುವುದಿಲ್ಲ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ಅದಕ್ಕೆ ಈ ಕಾರಣಗಳಿರಬಹುದು.

# ಖಿನ್ನತೆ: 
ಸದಾ ಸುಸ್ತೆನಿಸುವುದು ದೈಹಿಕ ಸಮಸ್ಯೆ ಎಂದು ನಾವೆಂದುಕೊಳ್ಳುತ್ತೇವೆ. ಆದರೆ, ಇದು ಖಿನ್ನತೆಯ ಕಾರಣಕ್ಕೂ ಆಗುತ್ತಿರಬಹುದು. ಆದ್ದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಮೂಡ್ ಡಲ್ಲಾಗಿರುವುದು, ಯಾರನ್ನೂ ಭೇಟಿಯಾಗಲು ಮನಸ್ಸಿಲ್ಲದಿರುವುದು ಮುಂತಾದ ಕಾರಣಗಳಿಂದ ಸುಸ್ತೆನಿಸುತ್ತಿದ್ದರೆ ತಕ್ಷಣ ಮಾನಸಿಕ ತಜ್ಞರ ಸಹಾಯ ಪಡೆಯಿರಿ.

# ಮೆಗ್ನೀಶಿಯಂ ಕೊರತೆ : 
ನರಗಳ ಆರೋಗ್ಯ ಹಾಗೂ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ  ನೋಡಿಕೊಳ್ಳುವಲ್ಲಿ ಮೆಗ್ನೀಶಿಯಂ ಬಹು ಮುಖ್ಯವಾದ ಮಿನರಲ್. ರಕ್ತದಲ್ಲಿ ಸಕ್ಕರೆ ಮಟ್ಟ ಕಾಯ್ದುಕೊಳ್ಳುವಲ್ಲಿ ಕೂಡಾ ಇದೇ ಮಿನರಲ್ ಪಾತ್ರ ವಹಿಸುತ್ತದೆ. ಜೊತೆಗೆ, ದೇಹದಲ್ಲಿ ಎನರ್ಜಿ ಉತ್ಪಾದಿಸುವ ಅಡಿನೋಸಿನ್ ಟ್ರೈ ಫಾಸ್ಪೇಟ್ ತಯಾರಿಕೆ ಮೆಗ್ನೀಶಿಯಂ ಇಲ್ಲದೆ ಸಾಧ್ಯವಿಲ್ಲ. ಹಾಗಾಗಿ, ಮೆಗ್ನೀಶಿಯಂ ಕೊರತೆಯಾದಾಗ ಎನರ್ಜಿ ಇಲ್ಲದಂತೆನಿಸುತ್ತದೆ.

ಮೆಗ್ನೀಶಿಯಂ ಕೊರತೆಯನ್ನು ಪರೀಕ್ಷಿಸುವುದು ಕಷ್ಟ. ಆದರೆ ಸುಸ್ತು, ಮಸಲ್ ಕ್ರ್ಯಾಂಪ್, ನೋವುಗಳು, ರೆಸ್ಟ್‌ಲೆಸ್ ಕಾಲುಗಳು, ನಿದ್ರಾ ಸಮಸ್ಯೆಗಳು, ನಕಾರಾತ್ಮಕ ಯೋಚನೆಗಳು- ಮೆಗ್ನೀಶಿಯಂ ಕೊರತೆಯ ಲಕ್ಷಣಗಳು. ಇಂಥದ್ದು ಕಂಡುಬಂದಾಗ ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳಾದ ಅವಕಾಡೋ, ಡ್ರೈ ಫ್ರೂಟ್ಸ್, ನಟ್ಸ್, ಕಾಳುಗಳ ಸೇವನೆ ಸಹಾಯಕ್ಕೆ ಬರುತ್ತದೆ.

# ಐರನ್ ಕೊರತೆ : 
ಇಡೀ ದಿನ ಸುಸ್ತೆನಿಸುತ್ತಿದದ್ದರೆ ಫುಲ್ ಬ್ಲಡ್ ಕೌಂಟ್ ಚೆಕಪ್ ಮಾಡಿಸಿ.  ಇದು ದೇಹದಲ್ಲಿರುವ ಕೆಂಪು ಹಾಗೂ ಬಿಳಿ ರಕ್ತ ಕಣಗಳ ಮಟ್ಟವನ್ನು ಲೆಕ್ಕ ಹಾಕುತ್ತದೆ. ಇದರೊಂದಿಗೆ ವಿಟಮಿನ್ ಬಿ12 ಹಾಗೂ ಫೆರಾಟಿನ್ ಮಟ್ಟವನ್ನೂ ಚೆಕ್ ಮಾಡಲು ಹೇಳಿ. ಏಕೆಂದರೆ ರಕ್ತದಲ್ಲಿ ಐರನ್ ಹಿಡಿದಿಟ್ಟುಕೊಳ್ಳುವ ಪ್ರೋಟೀನ್ ಇದೇ ಆಗಿದೆ. ಇವೆರಡು ಕಡಿಮೆ ಇದ್ದಾಗ ಐರನ್ ಮಟ್ಟ ಕಡಿಮೆ ಇರುತ್ತದೆ. ಐರನ್ ಕಡಿಮೆ ಇದ್ದಾಗ ಸುಖಾಸುಮ್ಮನೆ ಸುಸ್ತೆನಿಸುತ್ತದೆ.

# ಗ್ಯಾಜೆಟ್ಸ್ : 
ನಿಮ್ಮ ಟಿವಿ, ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ. ಅದರಲ್ಲೂ ಮಲಗುವ 1 ಗಂಟೆ ಮುಂಚೆ ಇವುಗಳಲ್ಲಿ ಯಾವುದರ ಬಳಕೆಯೂ ಬೇಡ. ಏಕೆಂದರೆ, ಮಲಗುವ ಹೊತ್ತಿನಲ್ಲಿ ಇವುಗಳ ಬಳಕೆಯಿಂದ ನಿದ್ದೆಯ ಸೈಕಲ್ ಏರುಪೇರಾಗುತ್ತದೆ. ಅಷ್ಟೇ ಅಲ್ಲ, ಇದರ ನೀಲಿ ಲೈಟ್ ಪಿಟ್ಯುಟರಿ ಗ್ರಂಥಿಯ ಮೇಲೆ ಪರಿಣಾಮ ಬೀರಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವಂತಾಗುತ್ತದೆ. ಇದರಿಂದಲೂ ದೇಹ ಎನರ್ಜಿಹೀನವಾಗಬಹುದು.

ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ತಿನ್ನುವುದರಿಂದ ಕಾಯಿಲೆ ಬೀಳುವುದರಿಂದ ತಪ್ಪಿಸಿಕೊಳ್ಳಬಹುದು. ಈ ಆಹಾರ ಸೇವಿಸುವುದರಿಂದ ಸುಸ್ತು ಬೇಗನೆ ನಿವಾರಣೆಯಾಗುವುದು

# ಸ್ಟ್ರಾಬೆರಿ ಮತ್ತು ಕಿವಿ ಫ್ರೂಟ್: ಸ್ಟ್ರಾಬೆರಿ ಮತ್ತು ಕಿವಿಫ್ರೂಟ್‌ಜತೆ ಎರಡು ಪುದೀನಾ ಎಲೆ ಹಾಕಿ ಜ್ಯೂಸ್‌ಮಾಡಿ ಕುಡಿದರೆ ಸುಸ್ತು ಬೇಗನೆ ಕಡಿಮೆಯಾಗುವುದು. ಕಿವಿಫ್ರೂಟ್‌ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಲು ಸಹಕಾರಿ.ಕುಂಬಳಕಾಯಿ ಬೀಜದ ಜ್ಯೂಸ್: ಹಾಲಿಗೆ ಕುಂಬಳಕಾಯಿ ಬೀಜ ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುವುದು.

#ಆ್ಯಪಲ್‌, ಕ್ಯಾರೆಟ್‌ಮತ್ತು ಆರೇಂಜ್: ಈ ಮೂರನ್ನು ಮಿಕ್ಸ್ ಮಾಡಿ ಜ್ಯೂಸ್‌ಮಾಡಿ ಕುಡಿದರೆ ಸುಸ್ತು ಬೇಗನೆ ಒಂದು ಹತೋಟಿಗೆ ಬಂದು ಬಹುಬೇಗ ನಿವಾರಣೆಯಾಗುವುದು.

#ಕಿತ್ತಳೆ ಅಥವಾ ಮೂಸಂಬಿ ಜ್ಯೂಸ್‌: ಇವುಗಳಲ್ಲಿ ವಿಟಮಿನ್‌ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಈ ಆಹಾರ ತುಂಬಾ ಸಹಕಾರಿ.

#ಬೀಟ್‌ರೂಟ್‌, ಕ್ಯಾರೆಟ್, ಅರಿಶಿಣ, ನಿಂಬೆರಸ ಜ್ಯೂಸ್‌ :1 ಬೀಟ್‌ರೂಟ್‌, 3 ಕ್ಯಾರೆಟ್‌, ಒಂದು ಕಿತ್ತಳೆ, 2 ಇಂಚಿನಷ್ಟು ದೊಡ್ಡದಿರುವ ಅರಿಶಿಣ, ಸ್ವಲ್ಪ ಶುಂಠಿ , ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಅರ್ಧ ಚಮಚ ನಿಂಬೆ ರಸ ಹಾಕಿ ಬ್ಲೆಂಡ್ ಮಾಡಿ ಜ್ಯೂಸ್‌ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

Facebook Comments