ಇಂಡೋನೇಷ್ಯಾದ ದ್ವೀಪದಲ್ಲಿ ಭೂಕಂಪ, ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ಇಂಡೋನೇಷ್ಯಾ,ಜು.15- ಇಂಡೋನೇಷ್ಯಾದ ಮಲುಕು ದ್ವೀಪದಲ್ಲಿ 7.3 ತೀವ್ರತೆ ಭೂಕಂಪ ಸಂಭವಿಸಿದೆ. ಪರಿಣಾಮ ಒಬ್ಬರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.

ನಿನ್ನೆ ಸಂಜೆ ಸುಮಾರು 6.28ರ ಸಮಯದಲ್ಲಿ ಭೂ ಕಂಪನವಾಗಿದ್ದು, ಉತ್ತರ ಮಾಲುಕು ಪ್ರಾಂತ್ಯದ ಟೆರ್ನೇಟ್ ಪಟ್ಟಣದಿಂದ ದಕ್ಷಿಣ-ನೈರುತ್ಯ ದಿಕ್ಕಿನಲ್ಲಿ ಸುಮಾರು 165 ಕಿಲೋಮೀಟರ್ ಆಳವಿಲ್ಲದ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ದಕ್ಷಿಣ ಹಲ್ಮಹೇರಾ ಜಿಲ್ಲೆಯು ಸುತ್ತಮುತ್ತ 160 ಮನೆಗಳಿದ್ದು ಭೂಕಂಪದಿಂದ ಜಖಂಗೊಂಡಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿರುವುದು ತಿಳಿದುಬಂದಿದೆ.

Facebook Comments