ಜಯಲಲಿತಾ 3ನೇ ಪುಣ್ಯತಿಥಿ, ಎಐಎಡಿಎಂಕೆ ಮೌನ ಮೆರವಣಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ಡಿ.5- ತಮಿಳುನಾಡು ಮುಖ್ಯ ಮಂತ್ರಿಯಾಗಿದ್ದ ಜಯಲಲಿತಾ ಅವರ 3ನೇ ಪುಣ್ಯತಿಥಿ ಇಂದು. ಈ ನಿಮಿತ್ತ ಆಡಳಿತಾರೂಢ ಎಐಎಡಿಎಂಕೆ ಉನ್ನತ ನಾಯಕರು ಮತ್ತು ಕಾರ್ಯಕರ್ತರು ಇಂದು ಚೆನ್ನೈನಲ್ಲಿ ಮೌನ ಮೆರವಣಿಗೆ ನಡೆಸಿದರು.

ಅಣ್ಣಾ ಸಲೈ-ವಲಜಾ ರೋಡ್ ಜಂಕ್ಷನ್‍ನಿಂದ ಮರೀನಾ ಬೀಚ್‍ನಲ್ಲಿರುವ ಜಯಲಲಿತಾ ಸಮಾಧಿವರೆಗೆ ನಡೆದ ಮೌನ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಯಡಪ್ಪಾಡಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ.ಪನೀರ್‍ಸೆಲ್ವಂ, ಸಂಪುಟ ಸಹೋದ್ಯೋಗಿಗಳು, ಶಾಸಕರು ಹಾಗೂ ಎಐಎಡಿಎಂಕೆ ಮುಖಂಡರು ಪಾಲ್ಗೊಂಡರು.

ಮೌನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರೆಲ್ಲ ಕಪ್ಪು ಅಂಗಿ ಧರಿಸಿದ್ದರು. ಕಾರ್ಯಕರ್ತರು ಜಯಲಲಿತಾ ಅವರ ಭಾವಚಿತ್ರಗಳನ್ನು ಹಿಡಿದಿದ್ದರು. ಮೆರವಣಿಗೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಪಳನಿಸ್ವಾಮಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿ ಪಕ್ಷವನ್ನು ಗ್ಲೆಲಿಸುತ್ತೇವೆ. ಜಯಲಲಿತಾ ಅವರ ಧ್ಯೇಯವನ್ನು ನಾವು ಸಾಕಾರಗೊಳಿಸುತ್ತೇವೆ ಎಂದರು.

Facebook Comments