ನಟಿ ಕಂಗನಾಗೆ Y+ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.7-ಬಾಲಿವುಡ್ ಬೆಡಗಿ ಕಂಗನಾ ರನೌತ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಫೈರ್‍ಬ್ರಾಂಡ್ ನಟಿಗೆ ಕೇಂದ್ರೀಯ ಭದ್ರತಾ ಪಡೆಗಳಿಂದ ವೈ+ ಭದ್ರತೆ ಒದಗಿಸಲಾಗಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೇಳಿಕೆ ನೀಡಿದ್ದ ಕಂಗನಾ ಬಾಲಿವುಡ್‍ನಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗುತ್ತಿದ್ದು, ಇದರ ಹಿಂದೆ ವ್ಯವಸ್ಥಿತ ಜಾಲವಿದೆ ಎಂದು ಆರೋಪಿಸಿದ್ದರು.

ಈ ಹೇಳಿಕೆ ನಂತರ ಮಣಿಕರ್ಣಿಕಾ ಖ್ಯಾತಿಯ ನಟಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ವೈ+ ಭದ್ರತೆ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಕಂಗನಾ ಸುರಕ್ಷತೆ ಮತ್ತು ಭದ್ರತೆಗಾಗಿ ಅರೆ ಸೇನಾಪಡೆ ಸಿಬ್ಬಂದಿಯಿಂದ ವೈ+ ಸೆಕ್ಯೂರಿಟಿ ನೀಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೈ+ ಭದ್ರತೆಯಲ್ಲಿ ರಕ್ಷಣೆಗೆ ಒಳಪಡುವ ಗಣ್ಯರಿಗೆ 10 ಸಶಸ್ತ್ರ ಕಮ್ಯಾಂಡೋಗಳ ಭದ್ರತೆ ನೀಡಲಾಗುತ್ತದೆ.

Facebook Comments