ರಾಜ್ಯದ ಪ್ರಮುಖ ಜಲಾಶಯಗಳ ಒಳ ಹರಿವು ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Alamatti-Dam--01

ಬೆಂಗಳೂರು, ಜೂ.13- ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನಿರಂತರವಾಗಿ ಬೀಳುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳ ಒಳ ಹರಿವು ಗಣನೀಯವಾಗಿ ಏರಿಕೆಯಾಗಿದೆ. ಕಬಿನಿ, ಹೇಮಾವತಿ, ಕಾವೇರಿ, ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಇದ ರಿಂದ ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗಿದೆ. ಪ್ರಮುಖ ವಿದ್ಯುತ್ ಉತ್ಪಾದನೆಯ ಜಲಾಶಯವಾಗಿರುವ ಲಿಂಗನಮಕ್ಕಿಗೆ 18,973 ಕ್ಯೂಸೆಕ್ ಒಳಹರಿವು ಬರುತ್ತಿದ್ದು, 1,755.80 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ 11 ಅಡಿಯಷ್ಟು ನೀರು ಹೆಚ್ಚು ಸಂಗ್ರಹವಾಗಿದೆ.

ಸೂಫಾ ಜಲಾಶಯಕ್ಕೆ 13,671 ಕ್ಯೂಸೆಕ್ ಒಳ ಹರಿವಿದ್ದು, 1,752.75 ಅಡಿ ನೀರು ಸಂಗ್ರಹವಾಗಿದೆ. ಈ ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ 11 ಅಡಿ ಹೆಚ್ಚು ನೀರು ಸಂಗ್ರಹವಾಗಿದೆ. ವರಾಹಿ ಜಲಾಶಯಕ್ಕೆ 4,541 ಕ್ಯೂಸೆಕ್ ಒಳ ಹರಿವಿದ್ದು, 1,888.49 ಅಡಿ ಹೆಚ್ಚಿನ ನೀರು ಸಂಗ್ರಹ ವಾಗಿದ್ದು, ಕಳೆದ ವರ್ಷಕ್ಕಿಂತ 7 ಅಡಿ ಹೆಚ್ಚು ಸಂಗ್ರಹವಾಗಿದೆ.

ಹಾರಂಗಿ ಜಲಾಶಯಕ್ಕೆ 7,260 ಕ್ಯೂಸೆಕ್ ಒಳಹರಿವಿದ್ದು, ಇಲ್ಲಿಯವರೆಗೆ 2,815.28 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕಿಂತ 6 ಅಡಿ ನೀರು ಸಂಗ್ರಹವಾಗಿದೆ. ಹೇಮಾವತಿ ಜಲಾಶಯಕ್ಕೆ 37, 946 ಕ್ಯೂಸೆಕ್ ಒಳ ಹರಿವಿದ್ದು, 2,888.54 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 36 ಅಡಿಗಳಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.

ಕೆ.ಆರ್.ಎಸ್ ಜಲಾಶಯಕ್ಕೆ 22,871 ಕ್ಯೂಸೆಕ್ ಒಳ ಹರಿವಿದ್ದು, 86.60 ಅಡಿಯಷ್ಟು ನೀರು ಸಂಗ್ರಹವಾಗಿದೆ. 21 ಅಡಿಯಷ್ಟು ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ಕಬಿನಿ ಜಲಾಶಯಕ್ಕೆ 17,921 ಕ್ಯೂಸೆಕ್ ಒಳ ಹರಿವಿದ್ದು, 2,269.04 ಅಡಿ ನೀರು ಸಂಗ್ರಹವಾಗಿದ್ದು, 21ಅಡಿಗಳಷ್ಟು ಅಂದರೆ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ಭದ್ರಾ ಜಲಾಶಯಕ್ಕೆ 21,231 ಕ್ಯೂಸೆಕ್, ತುಂಗಭದ್ರಾ ಜಲಾಶಯಕ್ಕೆ 1,127 ಕ್ಯೂಸೆಕ್, ಘಟಪ್ರಭಾ ಜಲಾಶಯಕ್ಕೆ 550 ಕ್ಯೂಸೆಕ್, ನಾರಾಯಣಪುರ ಜಲಾಶಯಕ್ಕೆ 599 ಕ್ಯೂಸೆಕ್ ಒಳಹರಿವಿದೆ. ಈ ಬಾರಿಯ ಮುಂಗಾರು ಆರಂಭ ಉತ್ತಮ ವಾಗಿದ್ದು, ಜಲಾಶಯಗಳ ಜಲಾನಯನ ಭಾಗದಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ.

Facebook Comments

Sri Raghav

Admin