ಯುವಕನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ನಾಗಮಂಗಲ, ನ.29- ಹಣದಾಸೆಗೆ ಯುವಕನೊಬ್ಬನನ್ನು ಅಪಹರಿಸಿ ಆತನ ಯುವಕನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳ ಸೆರೆ.  ಪೊಷಕರಿಂದ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಹಣ ತಲುಪಿಸುವುದಾಗಿ ಭರವಸೆ ನೀಡಿದ ಬಳಿಕ ಅಪಹರಿಸಿದ ಯುವಕನನ್ನು ಮನೆಗೆ ತಂದುಬಿಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ 6ನೇ ವಾರ್ಡ್ ಪುರಸಭೆ ಹಾಲಿ ಸದಸ್ಯ ತಿಮ್ಮಪ್ಪ ಎಂಬುವರ ಮಗ ಎನ್.ಟಿ. ಮಿಥುನ್(23) ಎಂಬಾತನೇ ಅಪಹರಣಕ್ಕೊಳಗಾಗಿದ್ದ ಯುವಕ. ಪಟ್ಟಣ ನಿವಾಸಿಗಳಾದ ಶಬರೀಶ್, ಮಹೇಶ್ ಅಲಿಯಾಸ್ ಬಾಂಡ್ಲಿ ಮತ್ತು ಕಾರು ಚಾಲಕ ದೀಪು ಅಲಿಯಾಸ್ ಟೈಗರ್ ಎಂಬುವರೇ ನನ್ನನ್ನು ಅಪಹರಿಸಿದ್ದರು ಎಂದು ಮಿಥುನ್ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ : ಮೈಸೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್.ಟಿ.ಮಿಥುನ್ ನ.22ರಂದು ನಾಗಮಂಗಲಕ್ಕೆ ಬರುತ್ತಿರುವ ಮಾಹಿತಿ ಸಂಗ್ರಹಸಿದ ಶಬರಿ ಮತ್ತು ಸಂತೋಷ್ ಪಟ್ಟಣದಲ್ಲಿ ಹೊಂಚುಹಾಕಿ ಕುಳಿತಿದ್ದರು.  ಮೈಸೂರಿನಿಂದ ರಾತ್ರಿ 8ಗಂಟೆ ಸಮಯದಲ್ಲಿ ನಾಗಮಂಗಲಕ್ಕೆ ಬಂದ ಮಿಥುನ್ ಪಟ್ಟಣದ ಟಿ.ಮರಿಯಪ್ಪ ವೃತ್ತದ ನಿಲ್ದಾಣದಲ್ಲಿ ಬಸ್ ಇಳಿಯುತ್ತಿದ್ದಂತೆ, ಶ್ರೀರಂಗಪಟ್ಟಣದ ಪೂಜಾರಿ ಫಿಷ್‍ಲ್ಯಾಂಡ್‍ನಲ್ಲಿ ನಿನ್ನ ಸ್ನೇಹಿತರಿದ್ದು, ನಿನ್ನನ್ನೂ ಕರೆದುಕೊಂಡು ಬರುವಂತೆ ತಿಳಿಸಿದ್ದಾರೆಂದು ಪುಸಲಾಯಿಸಿ ಮಿಥುನ್‍ನನ್ನು ಕಾರಿನಲ್ಲಿ ಅಪಹರಿಸಿದ ದುಷ್ಕರ್ಮಿಗಳು, ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಸೇರಿದಂತೆ ಹಲವೆಡೆ ಸುತ್ತಾಡಿಸಿ, ಬನ್ನೂರಿನಲ್ಲಿರುವ ಶಬರೀಶನ ತಾತನ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರೆನ್ನಲಾಗಿದೆ.

ಮರುದಿನ ಬೆಳಿಗ್ಗೆ ಮಿಥುನ್‍ನನ್ನು ಮಂಡ್ಯಕ್ಕೆ ಕರೆದೊಯ್ದ ಅಪಹರಣಾಕಾರರು, ನಿಮ್ಮ ಪೋಷಕರಿಗೆ ಕರೆ ಮಾಡಿ 30 ಲಕ್ಷ ಹಣ ಕೊಡಿಸಬೇಕು. ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.  ನಂತರ ಮಧ್ಯಾಹ್ನದ ವೇಳೆಗೆ ನಾಗಮಂಗಲ ತಾಲೂಕಿನ ಮಂಡ್ಯ ರಸ್ತೆಯ ದೇವಲಾಪುರ ಹ್ಯಾಂಡ್‍ಪೋಸ್ಟ್‍ಗೆ ಕರೆತಂದು ಮಿಥುನ್ ಮೊಬೈಲ್‍ನಿಂದಲೇ ಯುವಕನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳ ಸೆರೆಷಕರಿಗೆ ಕರೆ ಮಾಡಿಸಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಗನನ್ನು ಅಪಹರಿಸಿರುವ ವಿಷಯ ತಿಳಿದು ಪೋಷಕರು ಕಂಗಾಲಾಗಿದ್ದರು.

ಜೀವಭಯದಿಂದ ಹೆದರಿದ ಮಿಥುನ್ 30 ಲಕ್ಷ ರೂ. ಕೊಡಿಸುವುದಾಗಿ ಭರವಸೆ ನೀಡಿದ ಬಳಿಕ ನ.23ರ ಮಧ್ಯಾಹ್ನದ ವೇಳೆಗೆ ಮಿಥುನ್‍ನನ್ನು ಆತನ ಮನೆ ಹತ್ತಿರ ಕರೆತಂದು ಬಿಟ್ಟುಹೋಗಿದ್ದಾರೆ. ಮರಳಿ ಮನೆಗೆ ಬಂದ ಮಗನನ್ನು ನೋಡಿ ನಿಟ್ಟುಸಿರು ಬಿಟ್ಟ ಪೋಷಕರು ಮುಂದಿನ ಬೆಳವಣಿಗೆ ಏನಾಗುವುದೋ ನೋಡೋಣವೆಂದು ಸುಮ್ಮನಿದ್ದರು.

ಎರಡು ದಿನ ಕಳೆದರೂ ಹಣ ದುಷ್ಕರ್ಮಿಗಳ ಕೈ ಸೇರದ ಹಿನ್ನಲೆಯಲ್ಲಿ ನ.24ರಂದು ತಿಮ್ಮಪ್ಪ ಅವರ ಮನೆಗೆ ಬಂದ ಪ್ರಮುಖ ಆರೋಪಿ ಶಬರಿ, ನಿಮ್ಮ ಮಗನನ್ನು ಅಪಹರಿಸಿದ್ದ ದುಷ್ಕರ್ಮಿಗಳು 30 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದು, ನಿಮ್ಮ ಮಗ ಹಣ ಕೊಡಿಸುವ ಭರವಸೆ ನೀಡಿದ್ದಾನೆ. ಹಾಗಾಗಿ ನೀವು ಕೊಡುವ ಹಣದಲ್ಲಿ ನನಗೆ 5 ಲಕ್ಷ ರೂ. ಕಮೀಷನ್ ಸಿಗಲಿದೆ. ಈಗಲೇ ನನ್ನ ಕೈಗೆ 30 ಲಕ್ಷ ಹಣ ಕೊಡಿ. ನೀವು ಹಣಕೊಡದಿದ್ದರೂ ಸಹ ನಾನೇನೂ ಮಾಡುವುದಿಲ್ಲ. ಆದರೆ, ನಿಮ್ಮ ಮಗನಿಗೆ ಬೇರೆ ಯಾರಾದರೂ ಹೆಚ್ಚು ಕಡಿಮೆ ಮಾಡಿದರೆ ನಾನು ಜವಾಬ್ದಾರನಲ್ಲ ಎಂದು ಹೆದರಿಸಿ ಹೋಗಿದ್ದಾನೆ ಎಂದು ಮಿಥುನ್ ತಂದೆ ಆರೋಪಿಸಿದ್ದಾರೆ.

ಇದರಿಂದ ಮತ್ತಷ್ಟು ಭಯಭೀತನಾದ ಮಿಥುನ್ ಮತ್ತು ಯುವಕನ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳ ಸೆರೆಷಕರು, ಪೊಲೀಸ್ ಠಾಣೆಗೆ ನೀಡಿರುವ ದೂರಿನನ್ವಯ, ಪ್ರಮುಖ ಆರೋಪಿ ಶಬರೀಶ್ ಮತ್ತು ಮಹೇಶ್ ಅಲಿಯಾಸ್ ಬಾಂಡ್ಲಿ ಎಂಬವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಬ್ಬ ಆರೋಪಿಯಾದ ಕಾರು ಚಾಲಕ ತಲೆಮರೆಸಿಕೊಂಡಿದ್ದು, ಕಾರಿನ ಮಾಲೀಕ ದಿನೇಶ್‍ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಬಳಿಕ ಬಿಟ್ಟುಕಳಿಸಿದ್ದಾರೆ.

ನ.22ನೇ ತಾರೀಖು ಮಿಥುನ್ ಅಪಹರಣವಾಗಿದ್ದರೂ ನ.27ರವರೆಗೂ ಠಾಣೆಗೆ ದೂರು ನೀಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ತನಿಖೆಯಿಂದ ಸತ್ಯಾ ಸತ್ಯತೆ ತಿಳಿಯಬೇಕಾಗಿದೆ.  ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ತಲೆಮರೆಸಿಕೊಂಡಿರುವ ಕಾರು ಚಾಲಕನ ಪತ್ತೆಕಾರ್ಯದಲ್ಲಿ ತೊಡಗಿದ್ದಾರೆ.

Facebook Comments