Friday, April 26, 2024
Homeಇದೀಗ ಬಂದ ಸುದ್ದಿಪಾಕ್ ಜಿಂದಾಬಾದ್ ಘೋಷಣೆಕಾರರಿಗೆ ಸರ್ಕಾರದ ಬೆಂಬಲ: ಶ್ರೀನಿವಾಸ್ ಪೂಜಾರಿ ಆರೋಪ

ಪಾಕ್ ಜಿಂದಾಬಾದ್ ಘೋಷಣೆಕಾರರಿಗೆ ಸರ್ಕಾರದ ಬೆಂಬಲ: ಶ್ರೀನಿವಾಸ್ ಪೂಜಾರಿ ಆರೋಪ

ಬೆಂಗಳೂರು, ಮಾ.1- ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ದುಷ್ಕರ್ಮಿಗಳನ್ನು ರಾಜ್ಯ ಸರ್ಕಾರವೇ ರಕ್ಷಣೆ ಮಾಡಲು ಮುಂದಾಗಿದೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಕರಣ ನಡೆದು ಮೂರು ದಿನಗಳಾದರೂ ಸರ್ಕಾರ ಇದುವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಸುಳ್ಳು ಕಾರಣಗಳನ್ನು ಕೊಟ್ಟು ಆರೋಪಿಗಳನ್ನು ರಕ್ಷಣೆ ಮಾಡಲು ಮುಂದಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲೂ ಇಲ್ಲೋ ಪಾಕಿಸ್ತಾನದ ಪರ ಘೋಷಣೆಗಳು ಕೇಳಿ ಬರುತ್ತಿದ್ದವು ಆದರೆ ವಿಧಾನಸೌಧದ ಆವರಣದಲ್ಲೇ ಪಾಕ್ ಪರ ಕೂಗಿರುವುದು ನೋವಿನ ಸಂಗತಿ ಅಂದರೆ, ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧದಲ್ಲಿ ಘೋಷಣೆ ಮೊಳಗಿದೆ ಎಂದರು. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ ರುವ ನಾಸೀರ್ ಹುಸೇನ್ ಎಂಬುವವರು ಘಟನೆಯನ್ನು ಇಷ್ಟಾದರೂ ಖಂಡಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ ಪೂಜಾರಿ, ನಿನ್ನೆ ನಾವು ರಾಜ್ಯಪಾಲರನ್ನು ಭೇಟಿಯಾಗಿದ್ದೇವೆ. ಅವರು ನ್ಯಾಯ ಕೊಡಿಸುವ ಭರವಸೆ ಕೊಡಿಸುತ್ತೇನೆ ಎಂದಿದ್ದಾರೆ. ಅದು ನಮಗೆ ತೃಪ್ತಿ ತಂದಿದೆ ಎಂದು ಹೇಳಿದರು.

ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಸರ್ಕಾರ ಪ್ರತಿ ತಿಂಗಳು 22 ಲಕ್ಷ ಕ್ವಿಂಟಾಲ್ ಅಕ್ಕಿ ಕಳುಹಿಸುತ್ತಿದೆ. ಆದರೆ, ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಜನರಿಗೆ ಸುಳ್ಳು ಹೇಳಿದ್ದಾರೆ. ಕೇಂದ್ರ ಸರ್ಕಾರ ಕೊಡುವ ಅಕ್ಕಿಯಿಂದಲೇ ಕಾಂಗ್ರೆಸ್ ಅನ್ನಭಾಗ್ಯ ಕಾರ್ಯಕ್ರಮ ಮಾಡಿದೆ ಎಂದರು.

ಬಿಜೆಪಿ ಸಂವಿಧಾನ ವಿರೋಧಿ ಎನ್ನುತ್ತಾರೆ. ಮೊನ್ನೆ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಸಂವಿಧಾನದ ಸಭೆ ನಡೆಸಿದ್ದಾರೆ. ನಿತಾಶ ಕೌಲ್ ಎಂಬವರನ್ನು ವಿದೇಶದಿಂದ ಕರೆಸಿ ಭಾಷಣ ಮಾಡಿಸಲು ಮುಂದಾಗಿದ್ದರು. ಸಂವಿಧಾನಕ್ಕೆ ಮೋಸ ಮಾಡಿದವರು ಯಾರಾದರೂ ಇದ್ದರೇ, ಅದು ಕಾಂಗ್ರೆಸ್‍ನವರು ಮಾತ್ರ ಎಂದರು.

ಬ್ರಿಟಿಷ್ ಬರಹಗಾರ್ತಿಯಾಗಿರುವ ನಿತಾಶಾ ಕೌಲ್ ಭಾರತದ ವಿರುದ್ಧ ಅಜೆಂಡಾ ಹೊಂದಿದ್ದಾರೆ ಎಂಬ ಆರೋಪವಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂವಿಧಾನ ಜಾಗೃತಿ ಸಭೆಗೆ ಭಾಷಣ ಮಾಡಲು ಕಾಂಗ್ರೆಸ್ ಸರ್ಕಾರ ನಿತಾಶ ಕೌಲ್ ಅವರಿಗೆ ಆಹ್ವಾನ ನೀಡಿತ್ತು. ಇದನ್ನು ವಿಹೆಚ್‍ಪಿ ವಿರೋದಿಸಿತ್ತು. ಅಲ್ಲದೆ, ಸಂಘಟನೆಯ ನಾಯಕ ಗಿರೀಶ್ ಭಾರದ್ವಾಜ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಒಸಿಐ ಕಾರ್ಡ್ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.

ನಮ್ಮ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ದುರುದ್ದೇಶಪೂರಿತ ಅಜೆಂಡಾದೊಂದಿಗೆ ಅವರು ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಾರೆ. ಭಾರತದಲ್ಲಿನ ಯಾವುದೇ ಕಾರ್ಯಕ್ರಮಗಳಿಗೆ ಡಾ ಕೌಲ್ ಅವರನ್ನು ಅತಿಥಿಯಾಗಿ ಆಹ್ವಾನಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು ಎಂದು ಭಾರದ್ವಾಜ್ ಪತ್ರದಲ್ಲಿ ತಿಳಿಸಿದ್ದರು. ಬೇಸರದಲ್ಲಿ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಸರ್ಕಾರದಲ್ಲಿ 500 ಮೀ ರಸ್ತೆ ಹಾಕಲು ದುಡ್ಡಿಲ್ಲ. ಶಾಸಕರು ಗೆದ್ದವರು ಬೇಸರದಲ್ಲಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಇಡೀ ಸದನದಲ್ಲಿ ಸುಳ್ಳು ಹೇಳಲು ಸರ್ಕಾರ ಬಳಕೆ ಮಾಡಿಕೊಂಡಿದೆ ಎಂದು ಕೋಟಿ ಹೇಳಿದರು.

ಕಾಂತರಾಜು ವರದಿಯೋ? ಡಾ. ಹೆಗ್ಡೆ ವರದಿಯೋ?
ಕಾಂತರಾಜು ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕಾರ ಮಾಡಿದ್ದಾರೆ. ಆದರೆ, ಇದು ಕಾಂತರಾಜು ವರದಿಯೋ ಅಥವಾ ಡಾ ಹೆಗ್ಡೆ ವರದಿಯೋ ಎನ್ನುವುದನ್ನು ಮೊದಲು ಹೇಳಬೇಕು. ಈ ಹಿಂದೆ ದ್ವಾರಕಾನಾಥ್ ವರದಿ ಕೊಟ್ಟಾಗ ಸರ್ಕಾರಕ್ಕೆ ಸಲ್ಲಿಸುವುದರ ಜತೆಗೆ ವರದಿ ಬಹಿರಂಗ ಮಾಡಿದ್ದರು. ಈಗ ಸಿಎಂ ಸಿದ್ದರಾಮಯ್ಯ ಸಹ ವರದಿಯನ್ನು ಬಹಿರಂಗಪಡಿಸದಂತೆ ಹೇಳಿದ್ದಾರೆ ಎಂದು ತಿಳಿಸಿದರು.

ಸಿಎಂ ಅವರು ರಾಜಕೀಯ ಮಾಡುತ್ತಾ ಇದ್ದಾರೆ ಅಷ್ಟೇ. ಅತ್ತ ದಾವಣಗೆರೆ ಹಾಗೂ ಕನಕಪುರದಿಂದ ಸಿಡಿಲುಗುಡುಗು ಬಂದಿದೆ. ಶಾಮನೂರು ಶಿವಶಂಕರಪ್ಪ ಹಾಗೂ ಡಿ.ಕೆ.ಶಿವಕುಮಾರ್ ಭಯದಿಂದ ಸಿಎಂ ವರದಿ ಮುಚ್ಚಿಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ವರದಿ ಬಹಿರಂಗಪಡಿಸಿ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

RELATED ARTICLES

Latest News