ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಲೋಕಾಯುಕ್ತರಿಂದ ರಾಜ್ಯಪಾಲರಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,  ಆಸ್ತಿ ವಿವರ ಸಲ್ಲಿಸದ 15 ಮಂದಿ ಶಾಸಕರು, 7 ಮಂದಿ ವಿಧಾನಪರಿಷತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ರಾಜ್ಯಪಾಲರಿಗೆ ವರದಿ ನೀಡಿದ್ದಾರೆ. ಲೋಕಾಯುಕ್ತ ಕಾಯ್ದೆ 1984 ಸೆಕ್ಷನ್ 22 (2) ಅನ್ವಯ ಪ್ರತಿ ವರ್ಷದ ಜೂ.30ರ ಒಳಗಾಗಿ ಚುನಾಯಿತ ಶಾಸಕರು, ವಿಧಾನಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕು.

ಆದರೆ, ಶಾಸಕರಾದ ಅಫ್ಜಲ್‍ಪುರದ ಎಂ.ವೈ.ಪಾಟೀಲ್, ಸೇಡಂನ ರಾಜಕುಮಾರ್ ಪಾಟೀಲ್, ಕಾರವಾರದ ರೂಪಾಲಿ ಸಂತೋಷ್ ನಾಯಕ್, ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ತುಮಕೂರು ನಗರದ ಜಿ.ಬಿ.ಜ್ಯೋತಿ ಗಣೇಶ್, ಕೆಜಿಎಫ್‍ನ ರೂಪಕಲಾ ಎಂ., ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ, ಮಂಡ್ಯದ ಎಂ.ಶ್ರೀನಿವಾಸ್, ಕೊಳ್ಳೇಗಾಲದ ಎನ್.ಮಹೇಶ್, ಅನರ್ಹ ಶಾಸಕ ಹುಣಸೂರಿನ ಎಚ್.ವಿಶ್ವನಾಥ್, ಮಾಜಿ ಸಚಿವರೂ ಆಗಿರುವ ಸಿಂಧಗಿಯ ಎಂ.ಸಿ.ಮನಗೂಳಿ, ಬೀದರ್‍ನ ರಹೀಮ್‍ಖಾನ್,

ಚಾಮರಾಜಪೇಟೆಯ ಜಮೀರ್ ಅಹಮ್ಮದ್ ಖಾನ್, ಪಾವಗಡದ ವೆಂಕಟರಮಣಪ್ಪ, ರಾಣೆಬೆನ್ನೂರಿನ ಅನರ್ಹ ಶಾಸಕ ಆರ್.ಶಂಕರ್ ಅವರು ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ವರದಿ ನೀಡಿದ್ದಾರೆ.

ವಿಧಾನಪರಿಷತ್ ಸದಸ್ಯರ ಪೈಕಿ ಡಾ.ತೇಜಸ್ವಿನಿಗೌಡ, ಕೆ.ಜಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಕೆ.ಪಿ.ನಂಜುಂಡಿ, ನಜೀರ್ ಅಹಮ್ಮದ್, ಮಲ್ಲಿಕಾರ್ಜನ, ಸಿ.ಎಂ.ಇಬ್ರಾಹಿಂ ಅವರುಗಳು ಆಸ್ತಿ ವಿವರ ಸಲ್ಲಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

Facebook Comments