ಗಾಂಧಿ ಸತ್ಯ-ಅಹಿಂಸೆ ತತ್ವಾದರ್ಶ ಸಾರಲು ದಕ್ಷಿಣ ಆಫ್ರಿಕಾದಲ್ಲಿ ಬೃಹತ್ ಸೈಕಲ್ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

ಜೋಹಾನ್ಸ್‍ಬರ್ಗ್, ಜು.15- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೆ ಜನ್ಮ ಜಯಂತಿಗೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ ಆಚರಣೆಗಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ.  ಗಾಂಧಿ ಅವರ ಸತ್ಯ, ಅಹಿಂಸೆಯ ಉದಾತ್ತ ತತ್ವಾದರ್ಶಗಳನ್ನು ಸಾರುವ ಉದ್ದೇಶದಿಂದ ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್ ಬರ್ಗ್‍ನಲ್ಲಿ ನಿನ್ನೆ ಬೃಹತ್ ಸೈಕಲ್ ರ್ಯಾಲಿ ನಡೆಯಿತು.

ದಕ್ಷಿಣ ಆಫ್ರಿಕಾದ ಭಾರತೀಯ ರಾಯಭಾರಿ ಕಚೇರಿ ಮತ್ತು ಗಾಂಧಿ ವಾಕ್ ಕಮಿಟಿ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತದ ರಾಜತಾಂತ್ರಿಕರು, ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳು ಪಾಲ್ಗೊಂಡರು. ಭಾರತೀಯರೇ ಹೆಚ್ಚಾಗಿರುವ ನಗರದ ಲೆಸೀನಾ ಪ್ರದೇಶದಲ್ಲಿ ನಡೆದ ಸೈಕಲ್ ರ್ಯಾಲಿಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಅಕ್ಟೋಬರ್ 2ರಂದು ನಡೆಯುವ ಮಹಾತ್ಮ ಗಾಂಧೀಜಿ ಅವರ 150ನೆ ವರ್ಷಾಚರಣೆಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲು ದಕ್ಷಿಣ ಆಫ್ರಿಕಾ ಸರ್ಕಾರ ನಿರ್ಧರಿಸಿದೆ. ಭಾರತದಷ್ಟೇ ದಕ್ಷಿಣಾ ಆಫ್ರಿಕಾದಲ್ಲೂ ಕೂಡ ಮಹಾತ್ಮ ಗಾಂಧಿ ಅವರ ಆದರ್ಶಗಳು ಮತ್ತು ಚಿಂತನೆಗಳು ಜನಪ್ರಿಯವಾಗಿವೆ.

ವಾಸ್ತವವಾಗಿ ಗಾಂಧಿ ಅವರ ಅಹಿಂಸಾ ಮಾರ್ಗದ ಹೋರಾಟ ಆರಂಭವಾಗಿದ್ದೇ ದಕ್ಷಿಣ ಆಫ್ರಿಕಾದಿಂದ. ವರ್ಣಭೇದ ನೀತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಉನ್ನತ ವ್ಯಾಸಂಗಕ್ಕಾಗಿ ತೆರಳಿದ್ದ ಗಾಂಧಿ ಅವರನ್ನು ಡಬ್ಲಿನ್‍ನಲ್ಲಿ ರೈಲಿನಿಂದ ಬಲವಂತವಾಗಿ ಕೆಳಗಿಳಿಸಲಾಯಿತು.

ತಮಗೆ ಆದ ಅಪಮಾನವನ್ನು ಶಾಂತಿಯುತವಾಗಿ ಪ್ರತಿಭಟಿಸಿದ ಗಾಂಧಿ ನಂತರ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಹಿಂಸೆ ಮಾರ್ಗದ ಮೂಲಕ ಗೆಲುವು ಸಾಧಿಸಿದರು.

Facebook Comments