ಮಹೇಂದ್ರ ಸಿಂಗ್ ಧೋನಿ ನಿವೃತ್ತಿ..? ಗರಂ ಆದ ಸಾಕ್ಷಿ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಮೇ 28- ಒಬ್ಬ ವ್ಯಕ್ತಿಯ ಬಗ್ಗೆ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸುವ ಮೂಲಕ ಆತನ ಮನೋಸ್ಥೈರ್ಯವನ್ನು ತಗ್ಗಿಸಬಾರದೆಂದು ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿರವರ ಪತ್ನಿ ಸಾಕ್ಷಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತ ತಂಡಕ್ಕೆ ಸೀಮಿತ ಹಾಗೂ ಚುಟುಕು ವಿಶ್ವಕಪ್ ಗೆಲ್ಲಿಸಿ ಕೊಟ್ಟ ಅಪ್ರತಿಮ ನಾಯಕ ಮಹೇಂದ್ರಸಿಂಗ್ ಧೋನಿಯ ನಿವೃತ್ತಿಯ ಬಗ್ಗೆ ಇತ್ತೀಚೆಗೆ ಸುದ್ದಿಗಳು ಪುಂಖಾನು ಪುಂಖವಾಗಿ ಹರಿದಾಡುತ್ತಿವೆ.

ನಿನ್ನೆಯು ಕೂಡ ಧೋನಿ ರಿಟೈರ್ಸ್ ಎಂಬ ಹ್ಯಾಸ್‍ಟ್ಯಾಗ್ ಮೂಲಕ ಇದೇ ಸುದ್ದಿ ಚರ್ಚೆಗೆ ಗ್ರಾಸವಾಗಿದ್ದು ಮಹಿಯ ಅಭಿಮಾನಿಗಳು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಮ್ಮ ಅಭಿಪ್ರಾಯಗಳನ್ನು ಹರಿಬಿಟ್ಟಿ ದ್ದಾರೆ.

ಮಹೇಂದ್ರಸಿಂಗ್ ಧೋನಿ ಒಬ್ಬ ಪ್ರಬುದ್ಧ ನಾಯಕ ಮಾತ್ರವಲ್ಲದೆ ಒಬ್ಬ ಶ್ರೇಷ್ಠ ವಿಕೆಟ್‍ಕೀಪರ್, ಆಟಗಾರನಾಗಿಯೂ ತಂಡಕ್ಕೆ ಆಸರೆಯಾಗಿದ್ದಾರೆ, ಅವರಿಗೆ ಸರಿಸಾಟಿ ಆಗುವಂತಹ ಮತ್ತೊಬ್ಬ ಆಟಗಾರನು ಬರುವುದಿಲ್ಲ, ಮಹಿಯ ಕ್ರಿಕೆಟ್ ಅಂಗಳದ ದೃಶ್ಯಗಳು ಸದಾ ಹಸಿರಾಗಿರುತ್ತಾರೆ, ಅವರು ಶೀಘ್ರವೇ ಭಾರತ ತಂಡಕ್ಕೆ ಮರಳಲಿದ್ದಾರೆ ಎಂದು ಅಭಿಮಾನಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.

ಮತ್ತೊಬ್ಬ ಅಭಿಮಾನಿಯು ಧೋನಿ ನಿವೃತ್ತಿಯ ಬಗ್ಗೆ ಊಹಾ ಪೋಹ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಮಹೇಂದ್ರಸಿಂಗ್ ಧೋನಿ ಇಂಗ್ಲೆಂಡ್‍ನಲ್ಲಿ ನಡೆದ ವಿಶ್ವಕಪ್‍ನ ಸೆಮಿಫೈನಲ್ ನಂತರ ಟೀಂ ಇಂಡಿಯಾ ಬಳಗದಿಂದ ದೂರವಿದ್ದರೂ ಕೂಡ ಮುಂಬರುವ ಐಪಿಎಲ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಚುಟುಕು ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಹಿಂದಿರುಗುವ ಹುಮ್ಮಸ್ಸಿನಲ್ಲಿದ್ದಾರೆ.

ಇತ್ತೀಚೆಗೆ ಖ್ಯಾತ ಕ್ರಿಕೆಟಿಗ ವೀರೇಂದ್ರಸೆಹ್ವಾಗ್ ಭಾರತ ತಂಡದ ಯುವ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ರಿಷಭ್‍ಪಂತ್ ಅವರು ಮಹೇಂದ್ರ ಸಿಂಗ್‍ರ ಜವಾಬ್ದಾರಿಯನ್ನು ಹೊತ್ತಿರು ವುದರಿಂದ ಅವರು ಮತ್ತೆ ತಂಡಕ್ಕೆ ಮರಳುವುದು ಅನುಮಾನ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ದ್ದರು.

ಇದೇ ಮಾತನ್ನು ಖ್ಯಾತ ಸ್ಪಿನ್ನರ್ ಹರ್ಭಜನ್‍ಸಿಂಗ್ ಕೂಡ ತಮ್ಮ ಟ್ವಿಟ್ಟರ್‍ನಲ್ಲಿ ಪ್ರಕಟಿಸಿದ್ದರು. ಧೋನಿ ನಿವೃತ್ತಿಯ ವಿಷಯದ ಬಗ್ಗೆ ಸಾಕ್ಷಿ ಗರಂ ಆಗುತ್ತಿದ್ದಂತೆಯೇ ಕೆಲ ಕಿಡಿಗೇಡಿಗಳು ಮಾಡಿದ್ದ ಹ್ಯಾಸ್‍ಟ್ಯಾಗ್ ಅನ್ನು ಡಿಲೀಟ್ ಮಾಡಿದ್ದಾರೆ.

Facebook Comments