ನವಜೋತ್‍ಗೆ ಚುನಾವಣಾ ಆಯೋಗ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.23- ಮಾಜಿ ಕ್ರಿಕೆಟಿಗ ಹಾಗೂ ಸಚಿವ ನವಜೋತ್ ಸಿದ್ಧು ಅವರಿಗೆ ಚುನಾವಣಾ ಪ್ರಕ್ರಿಯೆಗಳಿಂದ ನಿಷೇಧ ಹೇರಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಈ ಹಿಂದೇ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಬಿಎಸ್‍ಪಿಯ ಮಾಯಾವತಿ, ಬಿಜೆಪಿಯ ಮನೇಕಾ ಗಾಂಧಿ, ಎಸ್‍ಪಿಯ ಆಜಂಖಾನ್‍ಗೆ ಚುನಾವಣಾ ಪ್ರಕ್ರಿಯೆಗಳಿಂದ ನಿಷೇಧ ಹೇರಿ ಆದೇಶ ಹೊರಡಿಸಿದ್ದ ಚುನಾವಣಾ ಅಧಿಕಾರಿಗಳು ಇದೀಗ ನವಜೋತ್ ಸಿಂಗ್ ಸಿಧು ವಿರುದ್ಧ ಅದೇ ಅಸ್ತ್ರ ಪ್ರಯೋಗಿಸಿದ್ದಾರೆ.

ಈ ಸಂಬಂಧ ಯಾವುದೇ ರೀತಿಯ ಸಾರ್ವಜನಿಕ ರ್ಯಾಲಿ, ಭಾಷಣ, ರೋಡ್ ಶೋ ನಡೆಸದಂತೆ, ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡದಂತೆ 72 ಗಂಟೆಗಳ ಕಾಲ ನಿಷೇಧವನ್ನು ಹೇರಿದೆ.

ಈ ನಿರ್ಬಂಧವೂ ಇವತ್ತು ಬೆಳಗ್ಗೆ ಹತ್ತು ಗಂಟೆಯಿಂದ ಆರಂಭವಾಗಲಿದೆ. ಏ.16 ರಂದು ಬಿಹಾರ್‍ನ ಕಟಿಹಾರ್ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರ ಬಳಿ ಮೋದಿಯನ್ನು ಬ್ಲಾಕ್ ಮಾಡೋದಕ್ಕೆ , ಕಾಂಗ್ರೆಸ್‍ಗೆ ವೋಟ್ ಹಾಕಿ ಎಂದು ಸಿಧು ಕರೆಕೊಟ್ಟಿದ್ದರು. ಈ ಹೇಳಿಕೆ ಸಂಬಂಧ ಇದೀಗ ಆಯೋಗ ನವಜೋತ್ ಸಿಧುಗೆ ತಾತ್ಕಾಲಿಕ ನಿಷೇಧ ಹೇರಿದೆ.

ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಆಮಿಷವೊಡ್ಡುವಂತಹ ಹಾಗೂ ನೀತಿಸಂಹಿತೆಗೊಳಪಡದೆ ನಾಲಿಗೆ ಹರಿಬಿಡುವ ನಾಯಕರಿಗೆ ಚುನಾವಣಾ ಆಯೋಗ ರೆಡ್‍ಕಾರ್ಡ್ ತೋರಿಸುತ್ತಿದ್ದು, ಸುಪ್ರೀಂಕೋರ್ಟ್‍ನ ತರಾಟೆ ಬಳಿಕ ಕೇಂದ್ರ ಚುನಾವಣಾ ಆಯೋಗ ಇದನ್ನು ಮತ್ತಷ್ಟು ಚುರುಕುಗೊಳಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ