“ಪ್ಲಾಸ್ಟಿಕ್” ಎಂಬ “ಮಹಾ” ವಿಷಕ್ಕೆ ಕಡಿವಾಣ ಹಾಕಬೇಕಿದೆ….!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಏ.26- ಪ್ಲ್ಯಾಸ್ಟಿಕ್ ಇದು‌ ನಮ್ಮ ‌ದಿನನಿತ್ಯ‌‌ಜೀವನದ ಒಂದು‌‌ ಭಾಗವಾಗಿಬಿಟ್ಟಿದೆ; ಕಾರಣ ನಾವು‌‌ ಮುಂಜಾನೆ‌ ಎದ್ದು‌ ಕಾಫಿಗೆ ಬಳಸುವ ಹಾಲಿನ‌ ಪ್ಯಾಕೆಟ್ ನಿಂದ‌ ಶುರುವಾಗಿ ದಿನವೆಲ್ಲಾ‌‌ ಹಲವು ರೀತಿಯಲ್ಲಿ ಪ್ಲಾಸ್ಟಿಕ್ ಅನಿವಾರ್ಯವಾಗಿದೆ.‌ ಅದರೆ ಇದು ಪರಿಸರಕ್ಕೆ‌ ಹಾಗೂ ಪ್ರತಿ ಜೀವ ಸಂಕುಲಕ್ಕೆ ಮಾರಕ‌ ಎಂಬುದನ್ನ ಮರೆತು‌ ನಿರಾತಂಕವಾಗಿ‌ ಬಳಸುತ್ತಿದ್ದೇವೆ.

ನಗರದ ಪ್ರತಿ ರಸ್ತೆಯ ತಿರುವಲ್ಲಿ ಪ್ಲಾಸ್ಟಿಕ್ ಕಸದ ರಾಶಿಯನ್ನು‌‌ ನಾವು ಕಾಣಬಹುದು ಇದಕ್ಕೆ ಕಡಿವಾಣ ಹಾಕಬೇಕಾದ ನಗರಸಭೆ, ಜಿಲ್ಲಾ‌ ಪಂಚಾಯಿತಿ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ನಿರ್ಲಕ್ಷ್ಯ ಮುಂದೆ‌ ಪರಿಸರಕ್ಕೆ ಎದುರಾಗುವ ಗಂಡಾಂತರಕ್ಕೆ ಮುನ್ನುಡಿ ಬರೆಯಲು‌ ಟೊಂಕ ಕಟ್ಟಿ‌ ನಿಂತಂತ್ತಿದೆ.

ಜಿಲ್ಲಾಡಳಿತ ದಿವ್ಯ ಮೌನ:
ಪ್ಲಾಸ್ಟಿಕ್ ಬಳಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಆದೇಶ ನಿಡಬೇಕಿದೆ ; ನಿಷೇಧ ಕೇವಲ ಪತ್ರದಲ್ಲಿ ಆದೇಶವಾಗಿ ಉಳಿದಿದ್ದು ಕಾರ್ಯರೂಪಕ್ಕೆ ಬಂದಿಲ್ಲಾ‌ ಎನ್ನಬಹುದು‌‌. ಜಿಲ್ಲಾಡಳಿತದ ಕಠಿಣ ನಿರ್ಧಾರ ತೆಗೆದುಕೊಂಡಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧ ಸಾಧ್ಯವಾಗಲಿದೆ.ನೆರೆ‌ಯ ಜಿಲ್ಲೆಗಳಾದ ಚಿಕ್ಕಮಗಳೂರು ,ಮಡಕೇರಿ‌ ಸೇರಿದಂತೆ‌ ಹಲವು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು ನಾಗರೀಕರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ನಗರಸಭೆ ಕಾಟಾಚಾರ‌ ದಾಳಿ;
ಇನ್ನು‌ ನಗರದಲ್ಲಿ ಕೆಲ ಪ್ಲಾಸ್ಟಿಕ್ ಅಂಗಡಿಗೆ‌ ದಾಳಿ‌ ಮಾಡುವ ನಗರಸಭೆ ಅಧಿಕಾರಿಗಳು ಕಾಟಾಚಾರಕ್ಕೆ ದಾಳಿ‌ ನಡೆಸಿ‌ ಅಂಗಡಿ ಮಾಲೀಕರಿಂದ ಟನ್ ಗಟ್ಟಲೆ ಪ್ಲಾಸ್ಟಿಕ್ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಾರೆ. ಆದರೆ‌ ಮರು ದಿನ ಅದೇ ಅಂಗಡಿಯಲ್ಲಿ ‌ಅಷ್ಟೇ ಪ್ರಮಾಣದ ಪ್ಲಾಸ್ಟಿಕ್ ‌ಮಾರಾಟ‌ ಹೆಗ್ಗಿಲ್ಲದೆ ನಡೆಯುತ್ತಿದೆ..

ಕೇವಲ‌ ಅಂಗಡಿಗೆ ನೋಟಿಸ್ ನೀಡಿ ಕೈ ತೊಳೆದುಕೊಳ್ಳುತ್ತಿರುವ ಅಧಿಕಾರಿಗಳಿಂದಾಗಿ ಇಂದು ನಿರಾತಂಕವಾಗಿ ಮಾರಾಟ ನಡೆದಿದೆ. ಪ್ಲಾಸ್ಟಿಕ್ ಬಳಕೆ‌ ಮಾಡುವ ನಾಗಾರೀಕರು ತಮ್ಮ ಮನೆಯಲ್ಲಿ ಬಳಕೆಯಾದ ಪ್ಲಾಸ್ಟಿಕ್ ಅನ್ನು ‌ಬೇರ್ಪಡಿಸಿ ಕಸ‌ ವಿಲೇವಾರಿಗೆ ಸಹಕರಿಸುವಂತೆ ನಗರಸಭೆ ಆದೇಶವು ಕಸದ‌ಬುಟ್ಟಿಗೆ ಸೇರಿಯಾಗಿದೆ.

ಇನ್ನಾದರು‌ ಪ್ಲಾಸ್ಟಿಕ್ ಮಾರಾಟಗಾರರಿಗೆ ಕಠಿಣ ಆದೇಶ ನೀಡುವ ಮೂಲಕ ಪ್ಲಾಸ್ಟಿಕ್ ಮಾರಾಟಕ್ಕೆ ನಿಯಂತ್ರಣ ಹೇರುವಂತೆ ಸರ್ವಜನಿಕರ‌ ಮನವಿಯಾಗಿದೆ‌.

ನಗರವೇ ಪ್ಲಾಸ್ಟಿಕ್ ಮಯ:
ಇನ್ನು ನಗರದ‌ ಬಹುತೇಕ‌ ಬಡಾವಣೆಯ ರಸ್ತೆ ಪಕ್ಕದಲ್ಲಿ ತಿರುವು‌ ರಸ್ತೆಯ ಪಕ್ಕದಲ್ಲಿ ಕಸದ ರಾಶಿಯನ್ನೆ‌ ಕಾಣಬಹುದಾಗಿದೆ. ನಗರಸಭೆ ಕಸ ದಿನ ನಿತ್ಯ ವಿಲೇವಾರಿ‌ ಮಾಡಿದರೂ ಮರು ದಿನ‌ ಅಷ್ಟೇ ‌ಪ್ರಮಾಣದಲ್ಲಿ ಬಂದು‌ ಬೀಳುತ್ತಿದೆ. ಇನ್ನು ಇದು ಪರಿಸರ ಹಾನಿಗೆ ಕಾರಣವಾಗುತ್ತದೆ. ಅಲ್ಲದೆ ಇಲ್ಲಿ ಸಂಚರಿಸುವ ಮೂಕ ಪ್ರಾಣಿ ಹಸು,ಕುರಿ ,ಮೇಕೆ ಪ್ಲಾಸ್ಟಿಕ್ ನಲ್ಲಿ ಸಂಗ್ರಹ ವಾದ‌ ಆಹಾರ ಸೇವಿಸಿ ಸಾವನ್ನಪ್ಪುತ್ತಿರುವ ಉದಾಹರಣೆಗಳು ಸಾಕಷ್ಟು ಇದೆ.

ಪ್ಲಾಸ್ಟಿಕ್ ತಯಾರಿಕೆ ಬ್ರೇಕ್ ಬೀಳಬೇಕು:
ಪ್ಲಾಸ್ಟಿಕ್ ನಿಂದ ಇಷ್ಟೆಲ್ಲಾ ‌ಸಮಸ್ಯೆಗೆ ಬ್ರೇಕ್ ಹಾಕ ಬೇಕಾದಲ್ಲಿ ಮೂಲ ಕಾರಣ‌ವಾದ ಉತ್ಪಾದನೆ ಸ್ಥಗಿತವೊಂದೆ ಮಾರ್ಗೋಪಾಯ ಎಂಬುದು‌ ಹಲವರ ವಾದವಾಗಿದೆ.

ಹೌದು ಉತ್ಪಾದನೆ ನಿಲ್ಲಿಸಿದರೆ ಬಹುತೇಕ ಪ್ಲಾಸ್ಟಿಕ್ ಸಮಸ್ಯೆ ಬಗೆಹರಿಯಲಿ್ದೆದೆ ಎಂದು ಹಲವು ಪರಿಸರ ವಾದಿ ಸಂಘಟನೆಗಳು ಸಾಕಷ್ಟು ಬಾರಿ‌ ಸರ್ಕಾರಕ್ಕೆ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ‌ ಕೂಡ‌ ಸಲ್ಲಿಸಿದೆ‌ ಆದರೆ‌ ಸರ್ಕಾರ ಏಕೋ ನಿರ್ಲಕ್ಷ್ಯ ವಹಿಸಿದಂತೆ‌ ಕಾಣುತ್ತಿದ್ದು ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಇಂದಿಗೂ ನಿರಾತಂಕ ವಾಗಿ‌ ಪ್ಲಾಸ್ಟಿಕ್ ‌ತಯಾರಿಕೆ,ಮಾರಾಟ‌ ಹಾಗೂ‌ ಬಳಕೆ ಜಾರಿಯಲ್ಲಿದೆ.

ಜಿ‌ ಪಂ ಸಭೆಯಲ್ಲಿ ಮಾತ್ರ‌ ಪ್ಲಾಸ್ಟಿಕ್ ಬದಲು ಗಾಜಿನ‌ ಬಳಕೆ:
ಇನ್ನೂ ಜಿ.ಪಂ‌‌ ಸಭೆಯಲ್ಲಿ ಅಧಕಾರಿಗಳಿಗೆ ಪ್ಲಾಸ್ಟಿಕ್ ಲೋಟದ‌ ಬದಲು ಗಾಜಿನ ಲೋಟ ದಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ‌ ಇದು ಉತ್ತಮ‌ ಬೆಳವಣಿಗೆ‌‌ ಕೂಡ. ಹೌದು…‌ಆದರೆ ಕೇವಲ‌ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಗಾಜಿನ ಗ್ಲಾಸ್ ನಲ್ಲಿ ನೀರು ಕುಡಿದ‌ ಮಾತ್ರಕ್ಕೆ ಇಡೀ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ‌ ನಿಲ್ಲಿಸಿದಂತಾಗಲಿದೆ ಎಂಬ ಭ್ರಮೆ ಅಧಿಕಾರಿಗಳಲ್ಲಿ ಬೇಡ ಎಂಬುದು ಸಾರ್ವಜನಿಕರ ಮನವಿಯಾಗಿದೆ.

ಬದಲಾಗಿ ಇದೇ ರೀತಿ ಪ್ರತಿ ನಗರ -ಪಟ್ಟಣ -ಗ್ರಾಮಗಳಲ್ಲಿ ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿ‌ ಮಾಡುವ ಮೂಲಕ ಸ್ವಚ್ಛ ಪರಿಸರಕ್ಕೆ ಇಲಾಖೆ ಸಾಥ್ ನೀಡಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ.

ಒಟ್ಟಾರೆ ಪ್ಲಾಸ್ಟಿಕ್ ಅನ್ನು ಇಂದಿನಿಂದಲೇ ಬಳಕೆ‌ ನಿಲ್ಲಿಸದಿದ್ದರೆ ಮುಂದಿನ‌ ದಿನಗಳಲ್ಲಿ‌ ಬಹಳಷ್ಟು ಪರಿಸರ ಹಾನಿ‌‌ಯನ್ನು‌ ಕಾಣಬೇಕಾಗುತ್ತದೆ ಎಂದು ಹಲವು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.. ಮಣ್ಣಿಗೆ ಹಾಗೂ ನೀರಿಗೆ ವಿಷದ ರೂಪದಲ್ಲಿ ಪ್ಲಾಸ್ಟಿಕ್ ಸೇರಿ ಹೋಗುತ್ತಿದೆ ಇದಕ್ಕೆ ನಾವು ಪ್ರತಿ ಮನೆ ಮನದಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ಮಾತ್ರ ಬಳಕೆಗೆ ಕಡಿವಾಣ ಹಾಕಬಹುದು .

-ಸಂತೋಷ್ ಸಿ.ಬಿ‌. ಹಾಸನ

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ