ದೇಶದಲ್ಲೇ ಬೊಂಬೆಗಳ ತಯಾರಿಕೆಗೆ ಆದ್ಯತೆ ನೀಡಿ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.24-ಕೋಟ್ಯಂತರ ರೂ. ಖರ್ಚು ಮಾಡಿ ವಿದೇಶಗಳಿಂದ ಬೊಂಬೆಗಳನ್ನು ತರಿಸಿಕೊಳ್ಳುವ ಬದಲು ದೇಶದಲ್ಲೇ ಬೊಂಬೆಗಳ ತಯಾರಿಕೆಗೆ ಆದ್ಯತೆ ನೀಡಿ ವೋಕಲ್ ಫಾರ್ ಲೋಕಲ್ ಟಾಯ್ಸ್ ಸೂತ್ರ ಆಳವಡಿಸಿಕೊಳ್ಳುವಂತೆ ದೇಶದ ಜನರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಾಗತೀಕ ಮಾರುಕಟ್ಟೆಯಲ್ಲಿ 100 ಬಿಲಿಯನ್ ಡಾಲರ್ ರೂ.ಗಳ ವ್ಯವಹಾರ ಹೊಂದಿರುವ ಬೊಂಬೆಗಳ ಮಾರಾಟದಲ್ಲಿ ಭಾರತದ ಪಾಲು ಕೇವಲ 1.5 ಬಿಲಿಯನ್ ಡಾಲರ್ ಮಾತ್ರ. ಹೀಗಾಗಿ ಈ ಚಿತ್ರಣವನ್ನು ಬದಲಿಸಲು ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದಿದ್ದಾರೆ.

ಟಾಯ್ಕೋಥನ್-2021 ಉತ್ಸವದ ವಿಡಿಯೋ ಕಾನ್ಫ್‍ರೆನ್ಸ್‍ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಶೇ.80 ರಷ್ಟು ಬೊಂಬೆಗಳನ್ನು ಅಮುದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನಮ್ಮ ಕೋಟ್ಯಂತರ ರೂ. ವಿದೇಶಿಗಳ ತಿಜೋರಿ ಸೇರುತ್ತಿದೆ. ಇಂತಹ ಪರಿಸ್ಥಿತಿಯಿಂದ ಹೊರ ಬರಲು ನಾವು ಬೊಂಬೆ ತಯಾರಿಕೆಯಲ್ಲಿ ಸ್ವಾವಲಂಭನೆ ಸಾಧಿಸಬೇಕಿದೆ ಎಂದರು.

ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾದರೆ, ಅವರ ಮೊದಲ ಸ್ನೇಹಿತ ಹಾಗೂ ಪುಸ್ತಕ ಬೊಂಬೆಯಾಗಿರುತ್ತದೆ ಹೀಗಾಗಿ ಬೊಂಬೆ ಉತ್ಪಾದನೆಗೆ ಆಧ್ಯತೆ ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ.

Facebook Comments