ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸ್, ಫೋಟೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ಕೋಟ,ಏ.8-ತಮ್ಮ ಪ್ರಾಣದ ಹಂಗನ್ನು ತೊರೆದು ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಪೊಲೀಸಪ್ಪನೊಬ್ಬ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪೊಲೀಸ್ ಜೀಪ್ ಚಾಲಕ ಚೇತನ್ ಚೌಧರಿ ವ್ಯಕ್ತಿಯೊಬ್ಬರ ಪ್ರಾಣ ರಕ್ಷಿಸಿದ ವೀರ.

ಕುನ್ನಾರಿ ಪೊಲೀಸ್ ಠಾಣೆಯಲ್ಲಿ ಜೀಪ್ ಚಾಲಕನಾಗಿರುವ ಚೇತನ್ ಚೌಧರಿ ಹಾಗೂ ಕಾನ್ಸ್‍ಟೆಬಲ್ ರಾಧೇಶ್ಯಾಂ ಸಂಖ್ಲಾ ಅವರನ್ನು ಬಂಡಿರಸ್ತೆಯಲ್ಲಿರುವ ಮಾರುಕಟ್ಟೆ ಸಮೀಪ ಕೊರೊನಾ ನಿಯಂತ್ರಣ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ಆ ಸಂದರ್ಭದಲ್ಲಿ ಅನತಿ ದೂರದಲ್ಲಿರುವ ಚಂಬಲ್ ನದಿಗೆ ವ್ಯಕ್ತಿಯೊಬ್ಬ ಬಿದ್ದು ಕೊಚ್ಚಿ ಹೋಗುತ್ತಿರುವ ಬಗ್ಗೆ ಇವರಿಗೆ ಮಾಹಿತಿ ಬಂತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಚೌಧರಿ ತನ್ನ ಪ್ರಾಣದ ಹಂಗನ್ನು ತೊರೆದು 10 ಅಡಿ ಉದ್ದಕ್ಕೂ ಹೆಚ್ಚು ಆಳವಿದ್ದ ನದಿಗೆ ಹಾರಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸಪ್ಪನ ಈ ಸಾಹಸ ಕಾರ್ಯ ರಾಜಸ್ಥಾನದಲ್ಲಿ ಭಾರಿ ವೈರಲ್ ಆಗಿದೆ.

Facebook Comments