Saturday, April 27, 2024
Homeಕ್ರೀಡಾ ಸುದ್ದಿರಣಜಿ : ಕರ್ನಾಟಕ 514ಕ್ಕೆ ಡಿಕ್ಲೇರ್ಡ್

ರಣಜಿ : ಕರ್ನಾಟಕ 514ಕ್ಕೆ ಡಿಕ್ಲೇರ್ಡ್

ಹುಬ್ಬಳ್ಳಿ, ಜ.7- ಇಲ್ಲಿನ ಕೆಎಸ್‍ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡವು 514 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡು ಡಿಕ್ಲೇರ್ಡ್ ಘೋಷಿಸಿದ್ದು , ಮೊದಲ ಇನ್ನಿಂಗ್ಸ್‍ನಲ್ಲಿ 362 ರನ್‍ಗಳ ಭಾರೀ ಮುನ್ನಡೆ ಪಡೆದುಕೊಂಡಿದೆ.

ಎರಡನೇ ದಿನದಾಟದ ಅಂತ್ಯಕ್ಕೆ
461 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ತಂಡವು ಇಂದು ಕೂಡ ಪಂಜಾಬ್ ಬೌಲರ್‍ಗಳ ವಿರುದ್ಧ ಪ್ರಾಬಲ್ಯ ಮೆರೆದ ಕರ್ನಾಟಕದ ಬ್ಯಾಟರ್‍ಗಳು ಭೋಜನ ವಿರಾಮಕ್ಕೂ ಮುನ್ನವೇ 514 ರನ್ ಗಳಿಸಿ ಡಿಕ್ಲೇರ್ಡ್ ಘೋಷಿಸಿದೆ. ನಿನ್ನೆ ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದಿದ್ದ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಹಾಗೂ ವಿಜಯ್‍ಕುಮಾರ್ ವೈಶಾಖ್ ಅವರು ಉತ್ತಮ ಜೊತೆಯಾಟವಾಡುವ ಹುಮ್ಮಸ್ಸಿನಿಂದ ಮೈದಾನಕ್ಕಿಳಿದಿದ್ದರು.

ಆದರೆ ಟೀಮ್ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್ ಅವರ ವೇಗದ ಬೌಲಿಂಗ್ ದಾಳಿಯ ಗತಿಯನ್ನು ಅರಿಯದೆ ವಿಜಯ್‍ಕುಮಾರ್ ವೈಶಾಖ್ (15 ರನ್) ಗಳಿಸಿ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಶ್ರೀನಿವಾಸ್ ಶರತ್ (76 ರನ್) ಕೂಡ ಸಿದ್ಧಾರ್ಥ್ ಕೌಲ್‍ಗೆ ಎಲ್‍ಬಿಡ್ಲ್ಯು ಬಲೆಗೆ ಬಿದ್ದು ಪೆವಿಲಿಯನ್ ತೊರೆದರು.

ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿದ್ದೆ : ವಿಜಯೇಂದ್ರ

ಶ್ರೀನಿವಾಸ್ ಶರತ್ ಔಟಾದರೂ ತಮ್ಮ ಚಾಣಾಕ್ಷತನದಿಂದ ಬ್ಯಾಟಿಂಗ್ ನಡೆಸಿದ್ದ ರೋಹಿತ್ ಕುಮಾರ್ (22ರನ್) ಹಾಗೂ ವಿದ್ವತ್ ಕಾವೇರಪ್ಪ (4ರನ್) ಗಳಿಸಿದ್ದಾಗ ನಾಯಕ ಮಯಾಂಕ್ ಅಗರ್‍ವಾಲ್ ಇನಿಂಗ್ಸ್ ಡಿಕ್ಲೇರ್ಡ್ ಘೋಷಿಸಿದರು.

ಉತ್ತಮ ಆರಂಭ ಪಡೆದ ಪಂಜಾಬ್:
ದ್ವಿತೀಯ ಇನ್ನಿಂಗ್ಸ್ ಆರಂಭಿಸಿ ರುವ ಪಂಜಾಬ್‍ನ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ (22ರನ್) ಹಾಗೂ ಪ್ರಭಸಿಮ್ರಾನ್ ಸಿಂಗ್ (20ರನ್) ಎಚ್ಚರಿಕೆಯ ಆಟವನ್ನು ಪ್ರದರ್ಶಿಸಿದ್ದು ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 13 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿತ್ತು.

ಭಾರತ- ದಕ್ಷಿಣಆಫ್ರಿಕಾ ಸರಣಿ ಟೀಕಿಸಿದ ಎಬಿಡಿ
ಬೆಂಗಳೂರು, ಜ.7- ಇತ್ತೀಚೆಗೆ ಮುಕ್ತಾಯವಾಗಿದ್ದ ದಕ್ಷಿಣ ಆಫ್ರಿಕಾ ಹಾಗೂ ಟೀಮ್‍ಇಂಡಿಯಾದ ನಡುವಿನ ಟೆಸ್ಟ್ ಸರಣಿಯನ್ನು ಹರಿಣಿಗಳ ನಾಡಿನ ಮಾಜಿ ನಾಯಕ ಎಬಿಡಿವಿಲಿಯರ್ಸ್ ಕಟುವಾಗಿ ಟೀಕಿಸಿದ್ದಾರೆ. ಟೆಸ್ಟ್‍ನಲ್ಲಿ ಕೇವಲ 2 ಪಂದ್ಯಗಳನ್ನು ಆಯೋಜಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲದೆ ಅಲ್ಲದೆ ಸಮಯವೂ ಹಾಳು ಎಂದು ಎಬಿಡಿ ಹೇಳಿದ್ದಾರೆ.

RELATED ARTICLES

Latest News