ದುಬೈಗೆ ಹಾರಿದ ಜಡ್ಡು, ಶಾರ್ದೂಲ್

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಸೆ. 12- ಇಂಗ್ಲೆಂಡ್ ಹಾಗೂ ಭಾರತ ನಡುವಿನ 5ನೆ ಟೆಸ್ಟ್ ಪಂದ್ಯವು ಸ್ಥಗಿತಗೊಂಡ ಬೆನ್ನಲ್ಲೇ ಇಂದು ಚೆನ್ನೈ ಸೂಪರ್ ಕಿಂಗ್ಸ್‍ನ ಸ್ಟಾರ್ ಆಟಗಾರರಾದ ರವೀಂದ್ರಾಜಡೇಜಾ, ಶಾರ್ದೂಲ್ ಠಾಕೂರ್, ಚೇತೇಶ್ವರಪೂಜಾರ ಹಾಗೂ ಮೊಹಿನ್ ಅಲಿ ಅವರು ತಂಡವನ್ನು ಕೂಡಿಕೊಂಡಿದ್ದಾರೆ. ಇಂದು ತಮ್ಮ ತಂಡಕ್ಕೆ ನಾಲ್ಕು ಆಟಗಾರರು ಕೂಡಿಕೊಂಡಿರುವುದರಿಂದ ನಾಲ್ಕು ಪಟ್ಟು ವಿಶಲ್ ಹಾಕುವ ಸಂತಸ ಮೂಡಿದೆ ಎಂದು ಸಿಎಸ್‍ಕೆ ಫ್ರಾಂಚೈಸಿಗಳು ಟ್ವಿಟ್ಟರ್‍ನಲ್ಲಿ ಹೇಳಿದೆ.

ಭಾರತ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ 227 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರನಾಗಿ ಚೇತೇಶ್ವರಪೂಜಾರ ಗುರುತಿಸಿಕೊಂಡಿದ್ದರೆ, ನಾಲ್ಕನೇ ಟೆಸ್ಟ್‍ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಿಂದ ತಂಡಕ್ಕೆ ಆಸರೆಯಾಗಿದ್ದ ಶಾರ್ದೂಲ್ ಠಾಕೂರ್ ಮತ್ತು ಜಡೇಜಾ ಹಾಗೂ ಇಂಗ್ಲೆಂಡ್ ತಂಡಕ್ಕೆ 3ನೆ ಟೆಸ್ಟ್‍ನಲ್ಲಿ ಗೆಲುವು ತಂದಿಕೊಟ್ಟಿದ್ದ ಮೊಹಿನ್ ಅಲಿ ಅವರು ಐಪಿಎಲ್ 14ರಲ್ಲಿ ಧೋನಿ ಪಡೆಗೆ ಗೆಲುವು ತಂದುಕೊಡುವತ್ತ ಚಿತ್ತ ಹರಿಸಿದ್ದಾರೆ.

ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳಲಿರುವ ಐಪಿಎಲ್ 2ನೆ ಚರಣದ ಆರಂಭಿಕ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್‍ಕೆ ತಂಡವು ಲಕ್ಕಿ ನಾಯಕ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.ಐಪಿಎಲ್ 13ರಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಧೋನಿ ಸಾರಥ್ಯದ ಸಿಎಸ್‍ಕೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 14ರಲ್ಲಿ ಸಿಎಸ್‍ಕೆ ತಂಡವು ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಹಾಗೂ 2 ಸೋಲುಗಳಿಂದ ಒಟ್ಟು 10 ಪಾಯಿಂಟ್ಸ್‍ಗಳನ್ನು ಕಲೆ ಹಾಕುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 2ನೆ ಸ್ಥಾನ ಅಲಂಕರಿಸಿದೆ.

Facebook Comments