Friday, April 26, 2024
Homeರಾಷ್ಟ್ರೀಯಪ್ರತ್ಯೇಕ ಅಪಘಾತ: 15 ಮಂದಿ ಸಾವು

ಪ್ರತ್ಯೇಕ ಅಪಘಾತ: 15 ಮಂದಿ ಸಾವು

ಪಾಟ್ನಾ,ಫೆ.26- ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 15 ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ನಡೆದಿದೆ.

ಸರಣಿ ಅಪಘಾತ: ಬಿಹಾರದ ಕೈಮೂರ್ ಜಿಲ್ಲೆಯ ದೇವಕಲಿ ಗ್ರಾಮದ ಬಳಿ ನಿನ್ನೆ ಸಂಜೆ ಎನ್‍ಎಚ್ 2ರ ದೇವಕಾಲಿ ಗ್ರಾಮದ ಬಳಿ ಟ್ರಕ್, ಜೀಪ್ ಮತ್ತು ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಜನ ಸಾವನ್ನಪ್ಪಿದ ಘಟನೆ ಬಿಹಾರದ ಕೈಮೂರ್ನಲ್ಲಿ ನಡೆದಿದೆ.

ಸಸಾರಾಮ್‍ನಿಂದ ವಾರಾಣಸಿಗೆ ತೆರಳುತ್ತಿದ್ದ ಕಾರು, ಮೋಟಾರ್ಸೈಕಲ್‍ಗೆ ಡಿಕ್ಕಿ ಹೊಡೆದಿದೆ. ಆಗ ಎದುರಿನ ಲೇನ್‍ಗೆ ದ್ವಿಚಕ್ರವಾಹನ ಮತ್ತು ಕಾರು ಪಲ್ಟಿಯಾಗಿ ಟ್ರಕ್ ಡಿಕ್ಕಿ ಹೊಡೆದಿದೆ. ಜೀಪ್‍ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 8 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಬೈಕ್‍ಗೆ ಜೀಪ್ ಡಿಕ್ಕಿ ಹೊಡೆದಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಟ್ರಕ್ ಬೈಕ್ ಮತ್ತು ಟ್ರಕ್‍ಗೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಹಾಗೂ ಜೀಪ್‍ನಲ್ಲಿದ್ದ 8 ಜನ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.

ಬಲವಂತವಾಗಿ ಭೂ ಕಬಳಿಕೆ:ಟಿಎಂಸಿ ನಾಯಕ ಶಾಜಹಾನ್ ಬಂಧನ

ಆಪಘಾತದ ಬಳಿಕ ಟ್ರಕ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಟ್ರಕ್‍ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಅಪಘಾತದಲ್ಲಿ ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಸಂತ್ರಸ್ತರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಮೊಹಾನಿಯಾದ ಉಪ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಕುಮಾರ್ ಹೇಳಿದ್ದಾರೆ. ಅಪಘಾತದ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಟ್ರಾಕ್ಟರ್ ಟ್ರಾಲಿಗೆ ಬಸ್ ಡಿಕ್ಕಿ: ಉತ್ತರಪ್ರದೇಶ ಜೌನ್‍ಪುರ ಜಿಲ್ಲೆಯಲ್ಲಿ ಟ್ರಾಕ್ಟರ್-ಟ್ರಾಲಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಕಾರ್ಮಿಕರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಉತ್ತರಪ್ರದೇಶದ ರೋಡ್‍ವೇಸ್ ಬಸ್ ಪ್ರಯಾಗ್‍ರಾಜ್‍ನಿಂದ ಜಾನ್‍ಪುರಕ್ಕೆ ತೆರಳುತ್ತಿತ್ತು. ನಿನ್ನೆ ರಾತ್ರಿ 11.15ರ ಸುಮಾರಿಗೆ ಸಮದ್‍ಗಂಜ್ ಬಳಿ ಅಪಘಾತ ಸಂಭವಿಸಿದೆ.

ರಷ್ಯಾ ಸೇನೆಯಿಂದ ಭಾರತೀಯರ ಬಿಡುಗಡೆ

ಪೊಲೀಸರ ಪ್ರಕಾರ, ಆರರ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತು ಆರನೆಯವರು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ವೇಳೆ ಟ್ರ್ಯಾಕ್ಟರ್ ಟ್ರಾಲಿಯಲ್ಲಿ 12 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಎಲ್ಲಾ ಕಾರ್ಮಿಕರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.

RELATED ARTICLES

Latest News