Saturday, April 27, 2024
Homeರಾಷ್ಟ್ರೀಯರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ತಿರುಗೇಟು

ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ತಿರುಗೇಟು

ಅಮೇಥಿ,ಮಾ.5- ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಹಾಗೂ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಹಿರಂಗ ಸವಾಲು ಹಾಕಿದ್ದಾರೆ.

ನನ್ನ ಜೊತೆ ರಾಹುಲ್ ಗಾಂಧಿ ಅವರು ಚರ್ಚೆಗೆ ಸಿದ್ಧವಿದ್ದರೆ ಅವರೇ ಮೈದಾನವನ್ನು ಆಯ್ಕೆ ಮಾಡಬಹುದು. ಆದರೆ ಬಿಜೆಪಿಯು ಚರ್ಚೆಗೆ ಪಕ್ಷದ ಕಾರ್ಯಕರ್ತನನ್ನು ಆಯ್ಕೆ ಮಾಡುತ್ತದೆ ಎಂದು ಎಂದಿದ್ದಾರೆ. ನಾಗ್ಪುರದಲ್ಲಿ ನಡೆದ ನಮೋ ಯುವ ಮಹಾಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮತಿ ಇರಾನಿ, ರಾಹುಲ್ ಗಾಂಧಿ ಅವರನ್ನು ಚರ್ಚೆಗೆ ಆಹ್ವಾನಿಸಿ, ನನ್ನ ಧ್ವನಿ ರಾಹುಲ್ ಗಾಂಧಿಯನ್ನು ತಲುಪುತ್ತಿದ್ದರೆ, ಅವರು ತೆರೆದ ಕಿವಿಯಿಂದ ಕೇಳಬೇಕು, 10 ವರ್ಷಗಳ ಆಡಳಿತ ಯಾರ ಬಗ್ಗೆ ಚರ್ಚೆಯಾಗಲಿ. ಮೈದಾನ ತುಮ್ ಚುನ್ನೋ, ಕಾರ್ಯಕರ್ತರ ಹಮ್ ಚುನೇಂಗೆ (ನೀವು ಮೈದಾನವನ್ನು ಆರಿಸಿಕೊಳ್ಳಿ, ನಾವು ಬಿಜೆಪಿಯನ್ನು ಪ್ರತಿನಿಧಿಸಲು ಕಾರ್ಯಕಾರಿಯನ್ನು ಆಯ್ಕೆ ಮಾಡುತ್ತೇವೆ) ಎಂದು ಹೇಳಿದ್ದಾರೆ.

ಯುವಮೋರ್ಚಾ ಕಾರ್ಯಕರ್ತರೊಬ್ಬರು ತಮ್ಮ ಮುಂದೆ ಮಾತನಾಡಲು ಆರಂಭಿಸಿದರೆ ರಾಹುಲ್ ಗಾಂಧಿ ಮಾತನಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಯುವ ಮೋರ್ಚಾದ ಒಬ್ಬ ಸಾಮಾನ್ಯ ಕಾರ್ಯಕರ್ತ ರಾಹುಲ್ ಗಾಂಧಿ ಎದುರು ಮಾತನಾಡಲು ಆರಂಭಿಸಿದರೂ ಆತ ಮಾತ
ನಾಡುವ ಶಕ್ತಿ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಅಪಹಾಸ್ಯ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವು ಬಡವರಿಗೆ ಬ್ಯಾಂಕ್ ಖಾತೆಗಳು, ಮನೆಗಳಲ್ಲಿ ಶೌಚಾಲಯಗಳು, 80 ಕೋಟಿ ನಾಗರಿಕರಿಗೆ ಉಚಿತಪಡಿತರ ಮತ್ತು ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯಂತಹ ಕಲ್ಯಾಣ ಕ್ರಮಗಳನ್ನು ಕೈಗೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಯಾವುದೇ ಯುವ ಮೋರ್ಚಾ ಕಾರ್ಯಕರ್ತ ರಾಹುಲ್ ಗಾಂಧಿಯನ್ನು ಸೋಲಿಸಲು ಸಮರ್ಥರು ಎಂದು ಸ್ಮತಿ ಇರಾನಿ ಪುನರುಚ್ಚರಿಸಿದ್ದಾರೆ.

ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆದಾಗ ರಾಹುಲ್ ಗಾಂಗೆ ಆಹ್ವಾನವಿತ್ತು, ಅವರು ಬರಲಿಲ್ಲ, ಅಹಂಕಾರ ಇನ್ನೂ ಹಾಗೆಯೇ ಇದೆ, ದುರಹಂಕಾರ ಹೋಗಿಲ್ಲ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Latest News