ಚಾಕುವಿನಿಂದ ಇರಿದು ಸುಲಿಗೆ ಮಾಡಿದ್ದ ಮೂವರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.12- ಕಂಪೆನಿಯೊಂದರ ಎಕ್ಸಿಕ್ಯೂಟಿವ್‍ಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ್ದ ಮೂವರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 32,200ರೂ. ಹಣ, ಪಲ್ಸರ್ ಬೈಕ್, ಮೊಬೈಲ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ. ಸುನಿಲ್ (25), ಹರೀಶ್ (19), ನವೀನ್‍ಕುಮಾರ್ (25) ಬಂತ ಆರೋಪಿಗಳು.

ತುಮಕೂರು ರಸ್ತೆ, ಮಾದನಾಯಕ ನಹಳ್ಳಿಯಲ್ಲಿರುವ ಸಫಾರಿ ಇಂಡಸ್ಟ್ರೀಸ್ ಇಂಡಿಯಾ ಎಂಬ ಲಗೇಜು ತಯಾರಿಕಾ ಕಂಪೆನಿಯ ವೇರ್‍ಹೌಸ್‍ನಲ್ಲಿ ಶಿವಕುಮಾರ್ ಎಂಬುವವರು ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಅ.8ರಂದು ರಾತ್ರಿ 8.50ರ ಸುಮಾರಿನಲ್ಲಿ ಅವರು ವಾಸವಿರುವ ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿಗೆ ಹೋಗಲು ತುಮಕೂರು ರಸ್ತೆಯ ನೈಸ್ ರಸ್ತೆ ಜಂಕ್ಷನ್ ಬಳಿ ಹೊಸೂರು ಕಡೆಗೆ ಹೋಗುತ್ತಿದ್ದ ಈಚರ್ ಕ್ಯಾಂಟರ್ ಗೂಡ್ಸ್ ವಾಹನವನ್ನು ನಿಲ್ಲಿಸಿ ಶಿವಕುಮಾರ್ ಹತ್ತಿಕೊಂಡಿದ್ದಾರೆ.

ವಾಹನದಲ್ಲಿ ಮೊದಲೇ ಇಬ್ಬರು ಪ್ರಯಾಣಿಕರಿದ್ದರು. ಒಬ್ಬರು ಮೈಸೂರು ರಸ್ತೆಯ ಜಂಕ್ಷನ್‍ನಲ್ಲಿ ಇಳಿದಿದ್ದು, ಮತ್ತೊಬ್ಬರು ಬನ್ನೇರುಘಟ್ಟ ರಸ್ತೆ ಬ್ರಿಡ್ಜ್ ಬಳಿ 9.40ರ ಸುಮಾರಿಗೆ ಇಳಿದುಕೊಂಡಿದ್ದಾರೆ.

ಅದೇ ಸಮಯಕ್ಕೆ ಮೂವರು ಗೂಡ್ಸ್ ವಾಹನ ಚಾಲಕನಿಗೆ ಹೊಸೂರು ಕಡೆ ಹೋಗಬೇಕೆಂದು ಕೇಳಿದಾಗ ಚಾಲಕ ವಾಹನ ನಿಲ್ಲಿಸುತ್ತಿದ್ದಂತೆ ಒಬ್ಬಾತ ವಾಹನದ ಕ್ಯಾಬಿನ್ ಎಡಭಾಗದ ಡೋರ್ ತೆಗೆದು ಹತ್ತಿಕೊಳ್ಳುವ ನೆಪದಲ್ಲಿ ಬಂದು ಶಿವಕುಮಾರ್ ಅವರ ಜೇಬಿನಿಂದ ಸ್ಯಾಮ್‍ಸಂಗ್ ಮೊಬೈಲ್ ಕಿತ್ತುಕೊಂಡು ಕೆಳಗೆ ಜಂಪ್ ಮಾಡಿ ಮತ್ತಿಬ್ಬರೊಂದಿಗೆ ಓಡಿ ಹೋಗಿದ್ದಾನೆ.

ಶಿವಕುಮಾರ್ ಅವರು ತಕ್ಷಣ ವಾಹನ ಚಾಲಕನಿಗೆ ತಿಳಿಸಿದ್ದಾರೆ. ಮೊಬೈಲ್ ವಾಪಸ್ ಪಡೆಯುವ ಸಲುವಾಗಿ ಹಿಂಬಾಲಿಸಿದಾಗ ಮತ್ತೆ ಸುಲಿಗೆಕೋರರು ಶಿವಕುಮಾರ್ ಅವರನ್ನು ಹಿಡಿದುಕೊಂಡು ಪ್ಯಾಂಟ್ ಜೇಬಿನಲ್ಲಿದ್ದ ಪಾನ್‍ಕಾರ್ಡ್, ಡೆಬಿಡ್ ಕಾರ್ಡ್, ಕ್ರೆಡಿಟ್ ಕಾರ್ಡ್‍ಗಳಿದ್ದ ಪರ್ಸ್ ಕಿತ್ತುಕೊಂಡಿದ್ದಲ್ಲದೆ ಒಬ್ಬಾತ ಪೇಪರ್ ಕಟರ್ ಚಾಕುವಿನಿಂದ ಎಡತೋಳು, ಲತೋಳು, ಬೆನ್ನಿಗೆ ಚುಚ್ಚಿ ಟಿಫನ್ ಕ್ಯಾರಿಯರ್ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.

ತಕ್ಷಣ ಶಿವಕುಮಾರ್ ಅವರು ಕೋಣನಕುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಗಂಭೀರತೆ ಅರಿತು ದಕ್ಷಿಣ ವಿಭಾಗದ ಪ್ರಭಾರದಲ್ಲಿರುವ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಂಜೀವ್ ಎಂ.ಪಾಟೀಲ್ ಅವರು ಆರೋಪಿಗಳ ಪತ್ತೆಗಾಗಿ ಸುಬ್ರಹ್ಮಣ್ಯಪುರ ಉಪವಿಭಾಗದ ಪೊಲೀಸ್ ಆಯುಕ್ತ ಶಿವಕುಮಾರ್ ಅವರ ನೇತೃತ್ವದಲ್ಲಿ ಕೋಣನಕುಂಟೆ ಠಾಣೆ ಇನ್ಸ್ ಪೆಕ್ಟರ್ ನಂಜೇಗೌಡ, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ಎರಡು ವಿಶೇಷ ತಂಡಗಳನ್ನು ನೇಮಕ ಮಾಡಿದ್ದರು.

ಈ ಎರಡು ತಂಡಗಳು ಜಂಟಿಯಾಗಿ ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ 23 ಗಂಟೆಗಳ ಒಳಗಾಗಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಸುಲಿಗೆಕೋರರನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಸ್ಯಾಮ್‍ಸಂಗ್ ಮೊಬೈಲ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‍ಗಳಿದ್ದ ಪೌಚ್, ಕೃತ್ಯದ ನಂತರ ಈ ಕಾರ್ಡ್‍ಗಳಿಂದ ಡ್ರಾ ಮಾಡಿದ್ದ 43 ಸಾವಿರ ಹಣದ ಪೈಕಿ 32,200ರೂ. ನಗದು ಹಾಗೂ ಚಾಕು, ಬೈಕ್ ವಶಪಡಿಸಿಕೊಂಡಿದ್ದಾರೆ.

ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರ ಪೆÇಲೀಸ್ ಆಯುಕ್ತರಾದ ಕಮಲ್‍ಪಂತ್ ಮತ್ತು ಪಶ್ಚಿಮ ವಿಭಾಗದ ಅಪರ ಪೆÇಲೀಸ್ ಆಯುಕ್ತರಾದ ಸೌಮೇಂದು ಮುಖರ್ಜಿ ಅವರು ಶ್ಲಾಘಿಸಿದ್ದಾರೆ.

Facebook Comments