ಟಯೋಟಾದಿಂದ ಅರ್ಬನ್‍ಕ್ರೂಸರ್ ಕಾರು ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ಟೊಯೊಟಾದ ಬಹು ನಿರೀಕ್ಷಿತ ಅರ್ಬನ್ ಕ್ರೂಸರ್ ಎಸ್‍ಯುವಿ ಕಾರನ್ನು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.  ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಕೆ ಸೀರೀಸ್‍ನ ಫೆÇೀರ್ ಸಿಲಿಂಡರ್‍ನ ಪೆಟ್ರೋಲ್ ಇಂಜಿನ್ ಕಾರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಶಕ್ತಿಶಾಲಿ ಚಾಲನೆಗೆ ಇದು ಹೇಳಿ ಮಾಡಿಸಿದಂತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮೊಸಕಾಜು ಎಶಿ ಮೋರಾ ತಿಳಿಸಿದರು.

ಆನ್‍ಲೈನ್ ಮೂಲಕವೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಈಗಾಗಲೇ ಟೊಯೊಟಾ ಕಾರುಗಳ ವಿವಿಧ ಮಾಡೆಲ್‍ಗಳಿಗೆ ಬೇಡಿಕೆಗಳು ಹೆಚ್ಚಿದೆ. ಪ್ರಸತುತ ಈ ಹೊಸ ಎಸ್‍ಯುವಿಗೆ ಬುಕಿಂಗ್ ಆರಂಭಗೊಂಡಿದೆ. ಇದನ್ನು ವಿವಿಧ ದೇಶಗಳಿಗೆ ರಫ್ತು ಮಾಡುತ್ತೇವೆ ಎಂದು ತಿಳಿಸಿದರು. 8.40 ಲಕ್ಷದಿಂದ 11.30 ಲಕ್ಷದವರೆಗೆ ವಿವಿಧ ಸೌಲಭ್ಯವುಳ್ಳ ಕಾರುಗಳು ಮಾರುಕಟ್ಟೆಗೆ ಬಂದಿವೆ.

Facebook Comments