ಅತ್ತಿಬೆಲೆ ಗಡಿ ಟೋಲ್ ಬಂದ್ ಮಾಡಿ ವಾಟಾಳ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.26- ಮರಾಠ ಅಭಿವೃದ್ಧಿ ನಿಗಮ ರಚನೆ ಖಂಡಿಸಿ ಕನ್ನಡಪರ ಸಂಘಟನೆಗಳ ಆಕ್ರೋಶ ತೀವ್ರಗೊಂಡಿದ್ದು, ಇಂದು ಅತ್ತಿಬೆಲೆ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕನ್ನಡ ಒಕ್ಕೂಟದ ಮುಖಂಡರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಮಂಜುನಾಥ್ ದೇವು ಮುಂತಾದವರನ್ನು ಪೊಲೀಸರು ವಶಕ್ಕೆ ಪಡೆದರು.

ನಿಗಮ ರಚನೆ ಖಂಡಿಸಿ ಡಿ.5ರಂದು ಕರೆ ಕೊಟ್ಟಿರುವ ಬಂದ್‍ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, 5ರ ವರೆಗೆ ರಾಜ್ಯದ ವಿವಿಧೆಡೆ ಹೋರಾಟ, ಪ್ರತಿಭಟನೆ ನಡೆಸ ಲಾಗುತ್ತಿದೆ. ಮಳೆಯಲ್ಲಿಯೂ ಇಂದು ಅತ್ತಿಬೆಲೆ ಗಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದ ಒಕ್ಕೂಟದ ಪದಾಕಾರಿಗಳಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಗಿರೀಶ್‍ಗೌಡ, ಶಿವರಾಮೇಗೌಡ, ಮಂಜುನಾಥ್ ದೇವು ಸೇರಿದಂತೆ ಹಲವು ಮುಖಂಡರನ್ನು ಪೊರು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ರಾಜ್ಯ ಹಾಗೂ ನಾಡಿನ ಜನರ ಹಿತಾಸಕ್ತಿಗಾಗಿ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ರಾಜಕೀಯ ಕಾರಣಕ್ಕಾಗಿ ಮರಾಠ ಅಭಿವೃದ್ಧಿ ನಿಗಮ ರಚಿಸಿ ನಾಡಿನ ಹಿತಾಸಕ್ತಿ ಬಲಿ ಕೊಟ್ಟಿದೆ. ಇದನ್ನು ವಿರೋಸಿ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ. ಬಂದ್ ಮಾಡುವ ಮೂಲಕ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡುತ್ತೇವೆ. ಸರ್ಕಾರ ಜಗ್ಗದಿದ್ದರೆ ಡಿ.5ರ ನಂತರ ಜೈಲ್ ಭರೋ ಚಳವಳಿ ನಡೆಸುತ್ತೇವೆ ಎಂದು ಹೇಳಿದರು.

ಬಂದ್ ವಿಫಲಗೊಳಿಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ. ನಾಡವಿರೋ ಧೋರಣೆ ವಿರುದ್ಧ ನಾವು ಕೈಗೊಂಡಿರುವ ಹೋರಾಟಕ್ಕೆ 1500ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಪ್ರಗತಿಪರರು, ಸಾಹಿತಿಗಳು, ವಿವಿಧ ರಾಜಕೀಯ ಪಕ್ಷಗಳು ಕೂಡ ಬೆಂಬಲ ನೀಡುವ ಮೂಲಕ ಬಂದ್ ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯ ಜನಪ್ರತಿನಿಗಳು, ಹೋರಾಟಗಾರರನ್ನು ಅವಮಾನ ಮಾಡುವ ಕೆಲಸ ಮಾಡುತ್ತಿ ದ್ದಾರೆ. ಎಷ್ಟೇ ಅವಮಾನವಾದರೂ ನಾವು ನಾಡಿನ ಹಿತಾಸಕ್ತಿ ಕಾಪಾಡಲು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ನಮ್ಮ ಹೋರಾಟ ಮರಾಠಿಗರ ವಿರುದ್ಧ ಅಲ್ಲ. ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನಾವೆಲ್ಲ ರಾಜ್ಯದಲ್ಲಿ ಸೋದರರಂತೆ ಇದ್ದೇವೆ. ನಮ್ಮ ನಡುವೆ ಸರ್ಕಾರ ಸಂಘರ್ಷವನ್ನು ತಂದಿಟ್ಟಿದೆ. ಇನ್ನೂ ಕಾಲ ಮಿಂಚಿಲ್ಲ.

ಸರ್ಕಾರ ನಿಗಮ ರಚನೆ ಆದೇಶ ವಾಪಸ್ ಪಡೆದರೆ ನಾವು ಬಂದ್‍ನಿಂದ ಹಿಂದೆ ಸರಿಯುತ್ತೇವೆ. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ. ಕೆಆರ್ ಪುರ, ಬೆಳಗಾವಿ, ಬಿಜಾಪುರ, ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹೋರಾಟ ಮಾಡಿ ಜನರನ್ನು ಜಾಗೃತಿಗೊಳಿಸಿ ಡಿ.5ರ ಬಂದ್ ಯಶಸ್ವಿಗೊಳಿಸಿ ಕನ್ನಡಿಗರ ಸಾಮಥ್ರ್ಯ ಪ್ರದರ್ಶಿಸಿ ಟೀಕೆ ಮಾಡುವವರಿಗೆ, ಹೋರಾಟಗಾರರನ್ನು ಅವಮಾನ ಮಾಡುವವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿರುವ ಎಲ್ಲ ಕನ್ನಡಪರ ಸಂಘಟನೆಗಳು, ಆಟೋ, ಟ್ಯಾಕ್ಸಿ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳು, ಹೊಟೇಲ್‍ನವರು, ಖಾಸಗಿ ಬಸ್ ಮಾಲೀಕರು ಸೇರಿದಂತೆ ಎಲ್ಲರೂ ಬಂದ್‍ಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಇಲಾಖೆ ಮೂಲಕ ಮರಾಠಿಗರಿಗೆ, ಜೈನರಿಗೆ, ಸಿಖ್ಖರಿಗೆ, ತೆಲುಗು, ತಮಿಳಿಗರಿಗೆ ಅನುಕೂಲ ಕಲ್ಪಿಸಲು ಸಾಕಷ್ಟು ಅವಕಾಶವಿತ್ತು. ಆದರೆ, ಚುನಾವಣಾ ರಾಜಕೀಯಕ್ಕಾಗಿ ಸರ್ಕಾರ ಈ ತೀರ್ಮಾನ ಕೈಗೊಂಡು ನಾಡಿನ ಹಿತಾಸಕ್ತಿಗೆ ಧಕ್ಕೆ ತಂದಿದೆ. ಇದರ ವಿರುದ್ಧ ನಮ್ಮ ಹೋರಾಟ ಎಂದು ಸಾ.ರಾ.ಗೋವಿಂದು ಹೇಳಿದರು.

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಹೋರಾಟಗಾರರನ್ನು ಅವಮಾನ ಮಾಡುವ ಕೆಲಸ ಮಾಡುತ್ತಾರೆ. ನಮಗೆ ಯಾವ ರಾಜಕೀಯ ಬೇಳೆ ಬೇಯಬೇಕಾಗಿಲ್ಲ. ಕನ್ನಡಕ್ಕೆ ಅನುಕೂಲವಾಗಬೇಕು. ಕನ್ನಡದ ನೆಲ, ಜಲ, ಇದಕ್ಕಾಗಿಯೇ ನಾವು ಜೀವನವಿಡೀ ಹೋರಾಟ ಮಾಡುತ್ತ ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಹೇಳಿದರು.

Facebook Comments