ಹೊಸ ಅಧ್ಯಕ್ಷರ ಸ್ವಾಗತಕ್ಕೆ ಶ್ವೇತಭವನದಲ್ಲಿ ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ನ.9- ಚುನಾವಣೆಯಲ್ಲಿ ಗೆದ್ದ ಜೋ ಬಿಡೆನ್ ಅವರಿಗೆ ಮುಂದಿನ ಕಾರ್ಯ ನಡೆಸಲು ಎಲ್ಲರೂ ಒಂದಾಗಿ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಚುನಾವಣೆ ನಡೆದ 50 ರಾಜ್ಯಗಳಲ್ಲಿ ಹಲವೆಡೆ ಎಣಿಕೆ ಸರಿಯಾಗಿ ನಡೆದಿಲ್ಲ. ಇದರಿಂದಾಗಿ ಫಲಿತಾಂಶದ ಬಗ್ಗೆ ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿರುವುದರಿಂದ ಈಗ ಚುನಾವಣಾ ಆಯೋಗವೇ ಮುಂದೆ ಬಂದು ಆಡಳಿತ ಚುಕ್ಕಾಣಿಯನ್ನು ಹಸ್ತಾಂತರ ಮಾಡಬೇಕೆಂದು ಸಲಹೆ ನೀಡಿದೆ.

ಅಮೆರಿಕದ ಇತಿಹಾಸ ನೆನಪಿಸಿಕೊಂಡು ದೇಶವನ್ನು ಶಕ್ತಿಶಾಲಿಯಾಗಿ ಮಾಡುವ ಮತ್ತು ಪ್ರಜಾಪ್ರಭುತ್ವ ತತ್ವವನ್ನು ಎತ್ತಿ ಹಿಡಿಯಬೇಕಾಗಿದೆ. ಅದಕ್ಕಾಗಿ ಶ್ವೇತಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕೂಡಲೇ ಬಿಡುಗಡೆಯಾಗಬೇಕು ಎಂದು ಹೇಳಿದೆ.

ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿರುವುದರಿಂದ ಯಾವುದೇ ರೀತಿಯಲ್ಲೂ ಅಧಿಕಾರ ನಡೆಸುವುದು ಸರಿಯಲ್ಲ. ಮತ್ತು ಹೊಸ ಅಧ್ಯಕ್ಷರಿಗಾಗಿ ನಡೆಯುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಹಣಕಾಸಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿ ಎಂದು ತಿಳಿಸಲಾಗಿದೆ. ಅಧಿಕಾರಕ್ಕಾಗಿ ನೀವು ಕಚ್ಚಾಡುವುದನ್ನು ಬಿಟ್ಟು ಕೂಡಲೇ ಜಾಗ ಖಾಲಿ ಮಾಡಿ ಎಂದು ಕಟುವಾಗಿ ತಿಳಿಸಲಾಗಿದೆ.

ಇದರ ನಡುವೆಯೇ ನಿನ್ನೆ ಜೋ ಬಿಡೆನ್ ಅವರು ಕೂಡ ದೇಶದ ಏಕತೆಗಾಗಿ ನಾವು ಒಂದಾಗಬೇಕಿದೆ. ಯಾವುದೇ ದ್ವೇಷ ರಾಜಕಾರಣ ಮಾಡದೆ ವಿಪಕ್ಷಗಳ ಸಹಕಾರದ ಜತೆಗೆ ನಾವು ದೇಶವನ್ನು ಮುನ್ನಡೆಸೋಣ ಎಂದು ಹೇಳಿದರು.

ಇದೇ ವೇಳೆ ಜನರಿಂದ ಆಯ್ಕೆಯಾದ ಎಲೆಕ್ಟೋರಲ್‍ಗಳು ಇಂದು ಅಧ್ಯಕ್ಷೀಯ ಅಭ್ಯರ್ಥಿಗೆ ಮತ ನೀಡುವ ಪ್ರಕ್ರಿಯೆ ಕೂಡ ಪ್ರಾರಂಭಿಸಲು ಸೂಚಿಸಲಾಗಿದೆ. ಇದು ಡಿ.14ರಿಂದ ಪ್ರಾರಂಭವಾಗಲಿದೆ.

ಇದು ಕೂಡ ಭಾರೀ ಕುತೂಹಲ ಕೆರಳಿಸಿದ್ದು , ಅಡ್ಡ ಮತದಾನ ನಡೆಯುವ ಸಾಧ್ಯತೆಯೂ ಇದ್ದು , ಇದರ ಮತ ಎಣಿಕೆ ಜ.6ರಂದು ನಡೆಯಲಿದೆ.

 

Facebook Comments