ಕ್ರೀಡಾಭಿಮಾನಿಗಳಿಗೆ ವಿಶ್ವಕಪ್, ವಿಂಬಲ್ಡನ್ ಡಬಲ್ ಥ್ರಿಲ್

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಜು. 15- ಇಂಗ್ಲೆಂಡ್‍ನ ಲಾಡ್ರ್ಸ್ ಹಾಗೂ ಲಂಡನ್‍ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಹಾಗೂ ವಿಂಬಲ್ಡನ್ ಪೈನಲ್ ಪಂದ್ಯಾವಳಿಗಳು ಕ್ರೀಡಾಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿ ಡಬಲ್ ಧಮಾಕದ ಥ್ರಿಲ್ ನೀಡಿತು.

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆದ ಕ್ರಿಕೆಟ್ ವಿಶ್ವಕಪ್‍ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೇನ್ ವಿಲಿಯಮ್ಸ್ ಪಡೆಯು 241 ರನ್‍ಗಳಿಸಿದರೆ, ಇಯಾನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ತಂಡವು ಬೆನ್ ಸ್ಟೋಕ್‍ರ ಅಜೇಯ 84 ರನ್‍ಗಳ ನೆರವಿನಿಂದ 241 ರನ್ ಗಳಿಸಿ ಟೈನಲ್ಲಿ ಅಂತ್ಯಕಂಡ ಪಂದ್ಯದ ಸೂಪರ್ ಓವರ್‍ನಲ್ಲೂ ಎರಡು ತಂಡಗಳು 15 ರನ್‍ಗಳನ್ನು ಗಳಿಸುವ ಮೂಲಕ ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.

ಬೌಂಡರಿಗಳ ಆಧಾರದ ಮೇಲೆ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ವಿಶ್ವಚಾಂಪಿಯನ್ಸ್ ಆಗಿ ಹೊರಹೊಮ್ಮಿದರೆ, ಲಂಡನ್‍ನಲ್ಲಿ ನಡೆದ ವಿಂಬಲ್ಡನ್ ಅಂತಿಮ ಸುತ್ತಿನಲ್ಲಿ ಟೆನ್ನಿಸ್ ಲೋಕದ ದಿಗ್ಗಜರಾದ ಸ್ವಿಡ್ಜರ್‍ಲ್ಯಾಂಡ್‍ನ ರೋಜರ್ ಪೆಡರರ್ ಹಾಗೂ ಸೆರೆಬಿಯನ್ ದೇಶದ ನ್ಯೂವಕ್ ಡೊಕೊವಿಚ್‍ರ ಸೆಣಸಾಟವು ಟೆನ್ನಿಸ್ ಪ್ರಿಯರನ್ನು ಉಗುರು ಕಚ್ಚುವಂತೆ ಮಾಡಿತು.

ಟೆನ್ನಿಸ್ ಲೋಕದ ಇಬ್ಬರು ದಿಗ್ಗಜರ ನಡುವೆ ನಡೆದ ಹೋರಾಟದ ಮೊದಲ ಸುತ್ತಿನಲ್ಲಿ ಡೊಕೊವಿಚ್ 7-6 ರಿಂದ ಗೆದ್ದು ಶುಭಾರಂಭ ಮಾಡಿದರೆ, ನಂತರ ಸುತ್ತಿನಲ್ಲಿ ತಿರುಗೇಟು ನೀಡಿದ ಪೆಡರರ್ 1-6 ರಿಂದ ಗೆದ್ದು ಸೆಟ್‍ಗಳನ್ನು ಸಮಬಲಗೊಳಿಸಿದರು.

ಹಾವು ಏಣಿ ಆಟದಂತೆ ನಡೆದ ಈ ಪಂದ್ಯದ ಮೂರನೇ ಸೆಟ್ ಅನ್ನು ಡೊಕೊವಿಚ್ 7-6 ರಿಂದ ಗೆದ್ದರೆ, 4ನೇ ಸುತ್ತಿನಲ್ಲಿ ಪೆಡರರ್ 4-6 ಸೆಟ್‍ಗಳಿಂದ ಗೆಲ್ಲುವ ಮೂಲಕ ಅಂತಿಮ ಸುತ್ತನ್ನು ರೋಚಕಗೊಳಿಸಿದರು.

ಟೆನ್ನಿಸ್ ಲೋಕದ ಮದಗಜಗಳಾದ ಪೆಡರರ್ ಹಾಗೂ ಜೋಕೊವಿಚ್‍ರ ಪೈಕಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದ್ದಾಗಲೇ 13-12ರಿಂದ ಜೋಕೊವಿಚ್ ಗೆಲ್ಲುವ ಮೂಲಕ 5ನೆ ಬಾರಿಗೆ ವಿಂಬಲ್ಡನ್ ಕಪ್‍ಗೆ ಮುತ್ತಿಕ್ಕುವ ಮೂಲಕ ಕ್ರೀಡಾಭಿಮಾನಿಗಳ ಹೃದಯ ಬಡಿತವನ್ನು ಸಹಜ ಸ್ಥಿತಿಗೆ ತಂದರು.

Facebook Comments